ಹರಿಯುತಿದೆ ಜೀವನ ವಾಹಿನಿ
ನಿಂತಲ್ಲಿ ನಿಲ್ಲದೆ ,
ನಿಲ್ಲು ಎಂದರೂ ನಿಲ್ಲದೇ
ನಿಲ್ಲುವುದಾದರೂ ಎಷ್ಟು ದಿನ ?
ಅಲ್ಲಲ್ಲ ..... ಎಷ್ಟು ಕ್ಷಣ?
ನಿಲ್ಲುವುದಾದರು ಯಾರಿಗಾಗಿ
ನಿಲ್ಲುವುದಾದರು ಯಾತಕ್ಕಾಗಿ
ಪ್ರಶ್ನೆ
ಉತ್ತರವಿಲ್ಲ!
ಹಾಗಾಗಿ ಅದು ನಿಲ್ಲುವುದಿಲ್ಲ
ನಾವಾದರೂ ನಿಲ್ಲಬಹುದೇ?
ಜೀವನ ವಾಹಿನಿಗೆ
ದಡವೂ ಇಲ್ಲ
ತಳವೂ ಇಲ್ಲ
ಹರಿಯುವುದು ನಿರಂತರ
ನಿಲ್ಲುವುದಾದರೂ ಎಲ್ಲಿ?
ಜೀವನ ವಾಹಿನಿ ನಿಲ್ಲಲಾರದು
ನಾವೂ ಕೂಡ ನಿಲ್ಲಬಾರದು.
(ಗೆಳೆಯ ಹರೀಶನ ತಾಯಿ ವಿಧಿವಶರಾಗಿದ್ದು ದುರ್ದೈವದ ಸಂಗತಿ. ಅವರಿಗೆ ಈ ನನ್ನ ಕವನ ಅರ್ಪಣೆ )
2 ಕಾಮೆಂಟ್‌ಗಳು:
ತುಂಬಾ ಅರ್ಥಪೂರ್ಣ ಕವನ !
ಚಿತ್ರಾravare ...
ಧನ್ಯವಾದಗಳು
ಕಾಮೆಂಟ್ ಪೋಸ್ಟ್ ಮಾಡಿ