ಬುಧವಾರ, ಜನವರಿ 30, 2013

ಉಡುಗೊರೆ

ಜನ್ಮದಿನಕೆ ಹೇಗೆ ನೀಡಲಿ 
ಉಡುಗೊರೆ

ಉಪಮೆ ರೂಪಕ ದೀಪಕಗಳಿಂದ 
ಅಲಂಕರಿಸಿದ ಕಾವ್ಯ ನೀಡಲೇ?
ನಿನ್ನಂತ ನಿರಾಭರಣ ಸುಂದರಿಗೆ 
ಅಲಂಕಾರಿಕ ಕಾವ್ಯವೇ!

ವಿಶಿಷ್ಟ  ಪದ ರಚನೆಗಳ ಕಾವ್ಯ 
ರಚಿಸಿ ಕೊಡಲೇ?
ನಿನ್ನ ಮಾತಿನ ಲಹರಿಯ 
ಮುಂದೆ ರೀತಿ ಕಾವ್ಯವೇ!

ವಿಶಿಷ್ಟ  ಅರ್ಥ ಹೊಳೆಯಿಸುವ 
ಪದ್ಯ ರಚಿಸಿ ಹೇಳಲೇ?
ನಿನ್ನ ಸ್ನೇಹ ನನ್ನ ಜೀವನಕ್ಕೆ ನೀಡಿದ 
ಅರ್ಥದ ಮುಂದೆ ಧ್ವನಿ ಕಾವ್ಯವೇ!

ಹೇಗೆ ಇರಲಿ ಕಾವ್ಯ 
ರಸದ ಪಾಕದಲ್ಲಿ ಅದ್ದಿ ಕೊಡಲೇ?   
ನಿನ್ನ ಸವಿ ಮಾತಿನ ಆಹ್ಲಾದತೆ ಮುಂದೆ 
ರಸ ಕಾವ್ಯವೇ!

ಇದೋ ತೆಗೆದುಕೋ 
ಔಚಿತ್ಯದ ಬಟ್ಟಲಲಿರುವ 
ರಸದ ಪಾಕದಲಿ ಅದ್ದಿದ 
ವಿಶಿಷ್ಟ ವಿನ್ಯಾಸದ ಅಲಂಕಾರಿಕ 
ಕಾವ್ಯ ಜಾಮೂನಿನ ಉಡುಗೊರೆ .

 

3 ಕಾಮೆಂಟ್‌ಗಳು:

prashasti ಹೇಳಿದರು...

ಓಹೋ ಹೋ.. ಸಖತ್ತಾಗಿದೆ ಜಾಮೂನು :-)
ಯಾರೋ ಅದು ಕಾವ್ಯ ? :P :P

ಅಘನಾಶಿನಿ ಹೇಳಿದರು...


ಸಾಧಾರಣವಲ್ಲದ ಹೊಸ ರಚನೆ. ಸು೦ದರವಾಗಿದೆ.

ಸೋಮಶೇಖರ ಹುಲ್ಮನಿ ಹೇಳಿದರು...

ಅಘನಾಶಿನಿ ಮತ್ತು ಪ್ರಶಸ್ತಿ
ಅವರಿಗೆ ಧನ್ಯವಾದಗಳು