ಭಾನುವಾರ, ನವೆಂಬರ್ 14, 2010

ಹರೆಯ ತುಂಬಿ ಬಂದಿತ್ತು

ಕನಸು ನಕ್ಕು ನಲಿದಿತ್ತು
ಪ್ರೀತಿ ಉಕ್ಕಿ ಹರಿದಿತ್ತು
ಮನಸು ವಿರಹದಿ ನಲುಗಿತ್ತು

    ದೇಹ ಸೊಕ್ಕಿ ನಿಂತಿತ್ತು
    ದ್ವೇಷ ಹೊತ್ತಿ ಉರಿದಿತ್ತು
    ಬದುಕು ಬೆಳಗದೆ ನಂದಿತ್ತು

ಮನಸು ವಿರಹದಿ ನಲುಗಿತ್ತು
ಬದುಕು ಬೆಳಗದೆ ನಂದಿತ್ತು
ಹರೆಯ ತುಂಬಿ ಬಂದಿತ್ತ್ತು!