ಶನಿವಾರ, ಜನವರಿ 3, 2009

ಹೊಸ ವರ್ಷ...

ಇಂದು ಅಪರ್ಣಾ ಅವರ ಬ್ಲಾಗ್ ಓದುತ್ತಿರುವಾಗ ವಿಜಯ ಕರ್ನಾಟಕದಲ್ಲಿ ಜನವರಿ ಒಂದರಂದು ಬಂದ ಷಡಕ್ಷರಿಯವರ ಲೇಖನದ ಬಗ್ಗೆ ಮಾಹಿತಿ ಸಿಕ್ಕಿತು. ನಾವು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಸಣ್ಣ ಸೂಚನೆಗೆಳನ್ನು ನೀಡಿದ್ದಾರೆ. ಇದನ್ನು ಎಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು ಎನಿಸಿದ್ದರಿಂದ ಇಲ್ಲಿ ಬರೆಯುತ್ತಿದ್ದೇನೆ. ಚಿತ್ರವನ್ನು ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣುತ್ತದೆ:

ವಿಜಯ ಕರ್ನಾಟಕ

ಮತ್ತೆ ಹೊಸ ವರ್ಷ ಬಂದಿದೆ. ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವಾಗಲೇ ಗುವಾಹತಿಯಲ್ಲಿ ಬಾಂಬ್ ದಾಳಿಯಾಗಿದೆ. ಹೊಸ ವರ್ಷದ ಪ್ರಯುಕ್ತ ಕಛೇರಿಯಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆಲುವು, ಬಹುದಿನಗಳಿಂದ ಬಯಸಿದ್ದ ಕೊಡಚಾದ್ರಿಯ ಚಾರಣದ ಯೋಜನೆಗೆ ಗೆಳೆಯರ ಸಹಮತಿಯೊಂದಿಗೆ ಅಂತಿಮ ರೂಪ.. ಹೀಗೆ ಕಳೆದ ಮೂರು ದಿನಗಳಂತೂ ನನ್ನ ಪಾಲಿಗೆ ಶುಭವಾಗಿಯೇ ಇವೆ.

ನಾನು ಇನ್ನು ಮುಂದೆ TechnoTweak.comನಲ್ಲಿ ಕೂಡ ಬರೆಯಲಿದ್ದೇನೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುವ ಆಶಯವಿದೆ.

Better late than never ಎನ್ನುತ್ತಾರೆ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.