ಇಂದು ಅಪರ್ಣಾ ಅವರ ಬ್ಲಾಗ್ ಓದುತ್ತಿರುವಾಗ ವಿಜಯ ಕರ್ನಾಟಕದಲ್ಲಿ ಜನವರಿ ಒಂದರಂದು ಬಂದ ಷಡಕ್ಷರಿಯವರ ಲೇಖನದ ಬಗ್ಗೆ ಮಾಹಿತಿ ಸಿಕ್ಕಿತು. ನಾವು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಸಣ್ಣ ಸೂಚನೆಗೆಳನ್ನು ನೀಡಿದ್ದಾರೆ. ಇದನ್ನು ಎಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು ಎನಿಸಿದ್ದರಿಂದ ಇಲ್ಲಿ ಬರೆಯುತ್ತಿದ್ದೇನೆ. ಚಿತ್ರವನ್ನು ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣುತ್ತದೆ:
ಮತ್ತೆ ಹೊಸ ವರ್ಷ ಬಂದಿದೆ. ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವಾಗಲೇ ಗುವಾಹತಿಯಲ್ಲಿ ಬಾಂಬ್ ದಾಳಿಯಾಗಿದೆ. ಹೊಸ ವರ್ಷದ ಪ್ರಯುಕ್ತ ಕಛೇರಿಯಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆಲುವು, ಬಹುದಿನಗಳಿಂದ ಬಯಸಿದ್ದ ಕೊಡಚಾದ್ರಿಯ ಚಾರಣದ ಯೋಜನೆಗೆ ಗೆಳೆಯರ ಸಹಮತಿಯೊಂದಿಗೆ ಅಂತಿಮ ರೂಪ.. ಹೀಗೆ ಕಳೆದ ಮೂರು ದಿನಗಳಂತೂ ನನ್ನ ಪಾಲಿಗೆ ಶುಭವಾಗಿಯೇ ಇವೆ.
ನಾನು ಇನ್ನು ಮುಂದೆ TechnoTweak.comನಲ್ಲಿ ಕೂಡ ಬರೆಯಲಿದ್ದೇನೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುವ ಆಶಯವಿದೆ.
Better late than never ಎನ್ನುತ್ತಾರೆ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
19 ಕಾಮೆಂಟ್‌ಗಳು:
ವಿಜಯ ಕರ್ನಾಟಕದಲ್ಲಿ ಇದನ್ನೂ ನೋಡಿದ್ದರೂ ಓದಿರಲಿಲ್ಲ. ಈಗ ನಿಮ್ಮ ಬ್ಲಾಗಿನಲ್ಲಿ ಓದಿದ ನ೦ತರ ಓದಿರದಿದ್ದರೆ ನಾನು ಎಷ್ಟೊ೦ದು ಕಳೆದುಕೊಳ್ಳುತ್ತಿದ್ದೆ ಅ೦ತ ಅನಿಸಿತು. ಇವು ವರುಷ ಪೂರ್ತಿ ಓದಿಕೊಳ್ಳುತ್ತಾ ಅನುಸರಿಸಬೇಕಾದ ವಾಕ್ಯಗಳು.
ತು೦ಬಾ ಧನ್ಯವಾದಗಳು ನಿಮ್ಮ ಬ್ಲಾಗಿನಲ್ಲಿ ಇವುಗಳನ್ನು ಪ್ರಕಟಿಸಿದುದಕ್ಕೆ.
ಹರೀಶ್,
ಷಡಕ್ಷರಿಯವರ ೫೨ ಸೂತ್ರಗಳು ತುಂಬಾ ಚೆನ್ನಾಗಿವೆ.
ಮರೆತಿದ್ದೆ,
ನಿಮಗೂ ನಿಮ್ಮ ಮನೆಯವರಿಗೂ ಹೊಸ ವರ್ಷದ ಸವಿ ಹಾರೈಕೆಗಳು...
ಹರೀಶ,
ರಸಪ್ರಶ್ನೆಯಲ್ಲಿ ವಿಜೇತರಾಗಿದ್ದಕ್ಕಾಗಿ ಅಭಿನಂದನೆಗಳು.
ಹೊಸವರ್ಷದ ಶುಭಾಶಯಗಳನ್ನು ಕೋರಲು ಅಂಥಾ ತಡವೇನಾಗಿಲ್ಲ. ನಿಮಗೂ ಶುಭ ಹಾರೈಕೆ.
ಹರೀಷ...
ನಾನು ವಿಜಯಕರ್ನಾಟಕತದಲ್ಲಿ ಓದಿಲ್ಲವಾಗಿತ್ತು..
ನಿಜವಾಗಿಯೂ ಅಳವಡಿಸಿಕೊಳ್ಳ ಬಹುದಂತಹ ಬರಹ...
ಧನ್ಯವಾದಗಳು...
ಆತ್ಮೀಯ ಹರೀಶರೇ,
ನಮಸ್ಕಾರ.
ನಿಮಗೆ ಮತ್ತೊಮ್ಮೆ ಪ್ರತ್ಯೇಕವಾಗಿ ಶುಭಾಶಯಗಳು. ಹಾಗೆಯೇ ನನ್ನ ಬ್ಲಾಗನ್ನು ಭಾಗಶಃ ಇಲ್ಲಿ ಪ್ರಕಟಿಸಿ ಹೆಚ್ಚು ಜನರಿಗೆ ಷಡಕ್ಷರಿಯವರ ಸಂದೇಶ ಮುಟ್ಟುವಂತೆ ಮಾಡಿದ್ದಕ್ಕೆ ಧನ್ಯವಾದಗಳು ಕೂಡಾ.
ಅದೇಕೋ ನೂರೆಂಟು ಮಾತುಗಳು ನಿಮ್ಮ ಮನ ಮುಟ್ಟಲಿಲ್ಲ ಅಂತ ಅನ್ಸುತ್ತದೆ. ಖಾರ ಅನಿಸಿಕೆಗಳಿಗೂ ನಮ್ಮಲ್ಲಿ ಅವಕಾಶವುಂಟು.
-ಅಪರ್ಣಾ
ಹರಿ,
ಅಭಿನಂದನೆಗಳು.
ನಿಮ್ಮ ಮುಂದಿನ ಕಾರ್ಯಗಳಲ್ಲೂ ಯಶಸ್ಸು ಸಿಗಲಿ :-)
ATB :)
ಸುಧೇಶ್, ಧನ್ಯವಾದಗಳು :-) ಅವು ವರುಷ ಪೂರ್ತಿ ಅಷ್ಟೇ ಅಲ್ಲ.. ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕಾದಂಥವು :-)
ಅನಿಲ್ ರಮೇಶ್, ಪ್ರತಿಕ್ರಿಯೆಗೆ ಧನ್ಯವಾದಗಳು :-)
ಆ ೫೨ ಸೂತ್ರಗಳನ್ನೂ ಅಳವಡಿಸಿಕೊಳ್ಳೋಣ!
ಸುನಾಥ್ ಕಾಕಾ, ಧನ್ಯವಾದಗಳು.. ನಿಮ್ಮ ಆಶೀರ್ವಾದ ಸದಾ ಇರಲಿ :-)
ಪ್ರಕಾಶಣ್ಣ, ಧನ್ಯವಾದಗಳು.. ಇವತ್ತು ನಿನ್ನ ಮಿಸ್ ಮಾಡ್ಕ್ಯಂಡಿ!
ಜಯ್, ಧನ್ಯವಾದಗಳು.. ನಿಮ್ಮೆಲ್ಲರ ಹಾರೈಕೆ ಇದ್ದರೆ ಯಶಸ್ಸು ಸಿಗುತ್ತೆ :-)
ಅಪರ್ಣಾ ಅವರೇ, ನಮ್ಮ ಬ್ಲಾಗಿಗೆ ಸ್ವಾಗತ. ನಿಮ್ಮ ಬ್ಲಾಗಿನಲ್ಲಿ ಇಂತಹ ಒಳ್ಳೆಯ ವಿಚಾರವನ್ನು ಹಾಕಿದ್ದಕ್ಕೆ ಧನ್ಯವಾದಗಳು.
ನಿಮ್ಮ ಬ್ಲಾಗಿನಲ್ಲಿರುವ ಎಲ್ಲ ವಿಷಯಗಳೂ ನನಗೆ ಇಷ್ಟವಾದವು. ಷಡಕ್ಷರಿಯವರ ಈ ೫೨ ಸೂತ್ರಗಳು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದಂತ ಸಲಹೆಗಳಾಗಿದ್ದರಿಂದ ಇಲ್ಲಿ ಮತ್ತೊಮ್ಮೆ ಹಾಕಿದೆ. ಇದರರ್ಥ ನನಗೆ ನೂರೆಂಟು ಮಾತು ಇಷ್ಟವಾಗಲಿಲ್ಲ ಎಂದಲ್ಲ. ನಾನೂ ನಿಮ್ಮ ಹಾಗೇ ವಿಶ್ವೇಶ್ವರ ಭಟ್ ಹಾಗೂ ಪ್ರತಾಪ್ ಸಿಂಹರ ಅಭಿಮಾನಿ. :-)
ಬರೆಯುತ್ತಿರಿ.. ಬರುತ್ತಿರಿ..
ಟೆಕ್ನೋಟ್ವೀಕ್ ನಲ್ಲಿ ಬರೆಯುತ್ತಿರುದಕ್ಕೆ ಅಭಿನಂದನೆಗಳು...
-ಸಂದೀಪ್ ಕಾಮತ್
ಹರೀಶ್
ಮೊದಲಿಗೆ ಹೊಸ ವರ್ಷದ ಶುಭಾಶಯಗಳು...
ರಸಪ್ರಶ್ನೆಯಲ್ಲಿ ವಿಜೇತರಾಗಿದ್ದಕ್ಕಾಗಿ ಅಭಿನಂದನೆಗಳು.
ನಾನು ಇದನ್ನು ವಿಜಯ ಕರ್ನಾಟಕದಲ್ಲಿ ಓದಿದ್ದೆ. ಖಂಡಿತ ಜೀವನದಲ್ಲಿ ಆಳವಡಿಸಿಕೊಳ್ಳುವಂತಹದು...
ರಸಪ್ರಶ್ನೆಯಲ್ಲಿ ಗೆದ್ದಿದ್ದಕ್ಕೆ ಅಭಿನಂದನೆಗಳು. ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳು ಹೆಚ್ಚು ಬರಲಿ.ನನ್ನಂತಹವರಿಗೆ ಅನುಕೂಲ. (ಸುಭಾಷಿತಗಳನ್ನು ಬಿಡಿಸಿ ಹೇಳುತ್ತಿದ್ದುದ್ದನ್ನು ಅರ್ಧಕ್ಕೆ ಬಿಟ್ಟರಲ್ಲ?!)
ಸಂದೀಪ್, ಧನ್ಯವಾದಗಳು.. ಇವತ್ತಿನವರೆಗೆ ಬಹಳ ಬ್ಯುಸಿ ಅಂತ ಹೇಳಿದ್ರಿ.. ಇನ್ನು ಸ್ವಲ್ಪ ಫ್ರೀ ಆಗ್ತೀರ ಅಂದ್ಕೊಂಡಿದೀನಿ.. :-)
ಶಿವು, ಧನ್ಯವಾದಗಳು.. ನೀವೇ ಪೇಪರ್ ಹಾಕೋದ್ರಿಂದ ಯಾವ ಪೇಪರ್ ನ ಸುದ್ದಿ ಇದ್ರೂ ನಿಮಗೆ ಮೊದಲು ಗೊತ್ತಾಗತ್ತೆ :D ಬರ್ತಾ ಇರಿ.. :-)
ಗಿರಿಜಾ ಅವರೇ, ಪ್ರತಿಕ್ರಿಯೆಗೆ ಧನ್ಯವಾದಗಳು.. ನಿಮ್ಮ ಪ್ರಶ್ನೆಗೆ ಏನು ಹೇಳಬೇಕೋ ತಿಳೀತಿಲ್ಲ.. ಸದ್ಯದಲ್ಲೇ ಮತ್ತೆ ಸುಭಾಷಿತಗಳ ಬಗ್ಗೆ ಬರೆಯುತ್ತೇನೆ.. ಬರುತ್ತಿರಿ.. :-)
ಹರೀಷ....
ನನ್ನ ಮಿಸ್ ಮಡ್ಕ್ಯ್ಂಡ್ಯ..?
ಎಂತದು..?
ತಿಳಿಸಿ ಹೇಳು ಮಾರಾಯಾ..!
ಪ್ರಕಾಶಣ್ಣ, ಮೊನ್ನೆ ಮಲ್ಲೇಶ್ವರಂ ಅಲ್ಲಿ ಪ್ರತಿಬಿಂಬ ಕಾರ್ಯಕ್ರಮ ಇತ್ತು.. ಅಲ್ಲಿ ಯಾರೋ ಮಾತಾಡಕ್ಕಾರೆ "ಅದು" "ಇದು" ಅಂತ ಹೇಳ್ತಾ ಇದ್ದಿದ್ದ.. ಆಗ ನಿನ್ನ ಪೋಸ್ಟ್ ನೆನಪಾಗಿತ್ತು :-) ನೀನಾಗಿದ್ರೆ ಇನ್ನೂ ಮಜಾ ಬಂದಿರ್ತಿತ್ತು.. :-)
ಹರೀಶ...
ನಿಂಗೂ ಹೊಸವರ್ಷದ ಶುಭಾಶಯಗಳು.
ಚೆಂದದ ಬರಹವನ್ನು ಓದಲು ಅವಕಾಶವಿತ್ತಿದ್ದಕ್ಕೆ ಧನ್ಯವಾದ.
ರಸಪ್ರಶ್ನೆ ಕಾರ್ಯಕ್ರಮದ ಗೆಲುವಿಗೆ ಅಭಿನಂದನೆ.
ಹರೀಶ್,
ನಿಮಗೂ ಹೊಸ ವರ್ಷದ ಶುಭಾಷಯ ಮತ್ತು "TechnoTweak.com"ಗೆ all the best.
--
PaLa
ಶಾಂತಲಕ್ಕ, ಧನ್ಯವಾದ :-)
ಪಾಲಚಂದ್ರ, ಧನ್ಯವಾದಗಳು. TechnoTweak.com ಗೂ ಬರ್ತಾ ಇರಿ :-)
Dear Harish, your blog is nice. Its also interesting that you will write about technology also. Nice.
I have link to your blog in mine.
Thank You and have a good day
ಹರೀಶ್,
ವಿಜಯ ಕರ್ನಾಟಕದಲ್ಲಿ ಷಡಕ್ಷರಿಯವರ ಲೇಖನವನ್ನು ಓದುತ್ತೇನೆ....ತುಂಬಾ ಚೆನ್ನಾಗಿರುತ್ತದೆ.....ಜೀವನದಲ್ಲಿ ಆಳವಡಿಸಿಕೊಳ್ಳುವಂತಹುದು.....
ಕಾಮೆಂಟ್ ಪೋಸ್ಟ್ ಮಾಡಿ