ಗುರುವಾರ, ಜುಲೈ 26, 2007

ಬಹುದಿನಗಳ ಬಯಕೆ...

"ಅಮೃತಧಾರೆ" ಚಿತ್ರದ
ನೆನಪಿದೆಯೆ ಮೊದಲ ನೋಟ...
ನೆನಪಿದೆಯೆ ಮೊದಲ ಸ್ಪರ್ಶ...
ನೆನಪಿದೆಯೆ ಮತ್ತನು ತಂದ ಆ ಮೊದಲ ಚುಂಬನ...

ನೆನಪಿದೆಯೆ ಮೊದಲ ಕನಸು...
ನೆನಪಿದೆಯೆ ಮೊದಲ ಮುನಿಸು....
ನೆನಪಿದೆಯೆ ಕಂಬನಿ ತುಂಬಿ ನೀನಿತ್ತ ಸಾಂತ್ವನ...

ನೆನಪಿದೆಯೆ ಮೊದಲ ಸರಸ...
ನೆನಪಿದೆಯೆ ಮೊದಲ ವಿರಸ...
ನೆನಪಿದೆಯೆ ಮೊದಲು ತಂದ ಸಂಭ್ರಮದ ಕಾಣಿಕೆ...

ನೆನಪಿದೆಯೆ ಮೊದಲ ಕವನ...
ನೆನಪಿದೆಯೆ ಮೊದಲ ಪಯಣ...
ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ...
ಎಂಬ ಸಾಲುಗಳು ಮೊದಲ ನೋಟಕ್ಕೆ ಕೇವಲ ಹಾಡಿನ ಸೊಲ್ಲುಗಳೆಂದೆನಿಸಿದರೂ, ಅರ್ಥಪೂರ್ಣವಾಗಿವೆ. ಇಂದು ನೆನಪಿರುವ ಎಷ್ಟೊಂದು ವಿಷಯಗಳು ನಾಳೆ ನಮ್ಮ ನೆನಪಿನಂಗಳದಿಂದ ಮರೆಯಾಗಬಹುದು. ಅಂಥ ಕೆಲವು ಘಟನೆಗಳನ್ನು ಬರೆದಿಟ್ಟರೆ ಮುಂದೊಂದು ದಿನ ನಮಗೆ ಸಂತಸ ತರಬಹುದಲ್ಲವೆ?

ಬಹಳ ದಿನಗಳಿಂದಲೂ ಇಂತಹುದೊಂದು ಬ್ಲಾಗ್ ಅನ್ನು ಆರಂಭಿಸಬೇಕೆಂಬ ಆಸೆಯಿತ್ತು. ಗೆಳೆಯರೊಂದಿಗೆ ಆರಂಭಿಸಿರುವ ಈ ಬ್ಲಾಗ್ ಯಶಸ್ವಿಯಾಗಿ ಮುಂದುವರೆಯುವುದೆಂದು ಆಶಿಸುತ್ತೇನೆ...