ಮಲ್ಲಿಗೆಯು ಸುವಾಸನೆ ಬೀರಲಿಲ್ಲ
ನಿನ್ನ ನೀಳ ಕೇಶ ರಾಶಿಯಂತೆ
ನಕ್ಷತ್ರಗಳು ಹೊಳೆಯಲಿಲ್ಲ
ನಿನ್ನ ಕಮಲದ ಕಂಗಳಂತೆ
ಮೊಗ್ಗುಗಳು ಅರಳಲಿಲ್ಲ
ನಿನ್ನ ಹವಳದ ತುಟಿಗಳಂತೆ
ಅಮೃತಶಿಲೆಯು ನುಣುಪಾಗಿ ತೋರಲಿಲ್ಲ
ನಿನ್ನ ಸುಕೋಮಲ ಕೆನ್ನೆಯಂತೆ
ನವಿಲುಗಳು ನಾಟ್ಯ ಮಾಡಲಿಲ್ಲ
ನಿನ್ನ ವೈಯಾರದ ನಡಿಗೆಯಂತೆ
ಹಕ್ಕಿಯ ಕಲರವ ಇಂಪಾಗಿ ಕೇಳಲಿಲ್ಲ
ನಿನ್ನ ಕಾಲ್ಗೆಜ್ಜೆಯ ಸದ್ದಿನಂತೆ
ಹರಿವ ನೀರು ಜುಳು ಜುಳು ನಾದ ಹೊರಡಿಸಲಿಲ್ಲ
ನೀನು ಗುನುಗುನಿಸುವ ಮಧುರ ಮಾತಿನಂತೆ
ಜೇನು ಕೂಡ ಸಿಹಿ ನೀಡಲಿಲ್ಲ
ನಿನ್ನ ಅಧರ ಸ್ಫುರಿಸಿ ನೀಡಿದಂತೆ
ಸೂರ್ಯನ ಕಿರಣವು ಕಾವೇರಿಸಲಿಲ್ಲ
ನಿನ್ನ ಬಿಗಿದಪ್ಪುಗೆಯು ಕಾವೇರಿಸಿದಂತೆ
ಹಾಗೆಯೇ ಬೆಂಕಿ ಕೂಡ ಸುಟ್ಟಿರಲಿಲ್ಲ
ಈ ನಿನ್ನ ಮೌನ ನನ್ನ ಸುಡುತ್ತಿರುವಂತೆ
8 ಕಾಮೆಂಟ್ಗಳು:
ಹರೀಷ್...
ಮೌನ ಸಂಗೀತ..
ಮೌನ ಮಾತು
ಮೌನ ಮದಿರಾ..
ಮೌನ ಮಧುರ..
ಮೌನ ಮುತ್ತು..
ಮತ್ತು.. ಮತ್ತು..
ಎಂದೆಲ್ಲ ಗೊತ್ತಿತ್ತು...
ಇಲ್ಲಿ ಮೌನ ಸುಡುವ ಅಗ್ನಿ !!
ಚಂದದ ಕವನ...
ಪ್ರತಿ ಸಾಲುಗಳೂ ಚೆನ್ನಾಗಿವೆ..
ಅಭಿನಂದನೆಗಳು...
ಮಾತು ಬೆಳ್ಳಿಯಾದರೆ ಮೌನ ಅನ್ನೊದು ಬಂಗಾರ ಆದರೆ ನಿಮ್ಮ ಕವನ ಓದಿದ ಮೇಲೆ ಅದು ಸುಡುವ ಕೆಂಡ ಅಂತ ಗೊತ್ತಾಯ್ತು ತುಂಬಾ ಚೆನ್ನಾಗಿದೆ ನಿಮ್ಮ ಕವನದ ಸಾಲುಗಳು
ಕವನ, ಎಲ್ಲ ಭಾವನೆಗಳಿಗೆ ಕನ್ನಡಿಯಂತೆ ಬಿಂಬಿಸಿದ್ದೀರಿ..ಸಾಲುಗಳು ಪದಗಳ ಭಾಷೆ ಮಾತನಾಡಿದರೆ ಪದಗಳು ಭಾವನದ ಭಾಷೆಗೆ ಓಗೊಟ್ಟಿದೆ...ಮುನ್ನಡೆಯಲಿ...
ಕವನವೆಂದರೆ ಹೀಗಿರಬೇಕು!
ಸೋಮ .. ಕವನ ಸೂಪರಾಗಿದೆ :-) ಸುನಾಥ ಕಾಕಾ 'ಕವನವೆಂದರೆ ಹೀಗಿರಬೇಕು' ಎಂದಿದ್ದಾರೆ ಅಂದ್ಮೇಲೆ ಬೇರೆ ಸರ್ಟಿಫಿಕೇಟ್ ಬೇಕಾ!?
ಪ್ರಕಾಶಣ್ಣ, ಇದನ್ನು ಬರೆದಿದ್ದು ಸೋಮ, ನಾನಲ್ಲ :-)
ಪ್ರಕಾಶ್ ,ಬಸವರಾಜ್ ,ಸುನಾಥ್,ಜಲಾನಯನ ಮತ್ತು ಹರೀಶ್ ಗೆ ನನ್ನ ತುಂಬು ಹೃದಯದ ಧನ್ಯವಾದಗಳು.
ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಅಂಬೆ ಗಾಲಿನ ಮಗು ನಡೆಯುವದನ್ನು ಕಲಿತಾಗ ಮನೆಯವರು ತೋರಿಸುವ ಕಾಳಜಿಯಂತೆ ತೋರುತ್ತಿದೆ .ಇದು ಹೀಗೆ ಮುಂದು ವರಿಯಲಿ.....
good.ishtavaaytu:)
ತುಂಬ ಚೆನ್ನಾಗಿದೆ
ಕಾಮೆಂಟ್ ಪೋಸ್ಟ್ ಮಾಡಿ