ಶನಿವಾರ, ಜನವರಿ 30, 2010

ಶುಭಕಾಮನೆ

ಕನವರಿಕೆಗಳನ್ನೆಲ್ಲ ಕನಸುಗಳಾಗಿಸಿ,
ಕನಸುಗಳನ್ನೆಲ್ಲ ಮನಸಿನಾಳಕ್ಕೆ ನಾಟಿಸಿ,
ನನಸಾಗಲೇ ಬೇಕೆಂಬ ಹಠ ಮಾಡಿಸಿ,
ನೋವನ್ನೆಲ್ಲ ಮರೆಸಿ,
ನಲಿವಿಗೆ ದಾರಿ ತೋರಿಸಿ,
ನನ್ನ ಜೀವನಕ್ಕೆ ಪ್ರೀತಿ ತೋರಿಸಿ,
ನನ್ನ ಅಭ್ಯುದಯಕ್ಕೆ ಕಾರಣಳಾದ ಗೆಳತಿಯೇ,
ಕೋರುವೆ ನಿನ್ನ ಜನ್ಮದಿನಕೆ ಹರಸಿ,
ಶುಭಕಾಮನೆ

7 ಕಾಮೆಂಟ್‌ಗಳು:

ಜಲನಯನ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಜಲನಯನ ಹೇಳಿದರು...

ಹರೀಶ್ ಎನ್ನಲೋ ಸೋಮಶೇಖರ್ ಎನ್ನಲೋ ?
ನಿಮ್ಮ ಗೆಳತಿಗೆ ಶುಭಕೋರೋ ಪರಿ ಚನ್ನಾಗಿದೆ..ಅವಳು ನಿಮಗೇನು ಎನ್ನುವುದನ್ನೂ ಆ ಮೂಲಕ ತಿಳಿಸಿದ್ದೀರಿ...ಅವಳಗುಂಗಿನಲ್ಲಿ ಕನವರಿಸಿರಿ..ನಮಗೆಲ್ಲಾ ಕವನಿಸಿರಿ

Harisha - ಹರೀಶ ಹೇಳಿದರು...

ಜಲನಯನ ಅವರೇ, ಸೋಮಶೇಖರ ನನ್ನ ಸಹಪಾಠಿ.

ಇದು ಅವನೇ ಬರೆದ ಕವನ. ಇತ್ತೀಚೀಗೆ ಸಮಯಾಭಾವದಿಂದ ನನಗೆ ಬರೆಯಲಾಗುತ್ತಿಲ್ಲ. ನಿನ್ನೆ ಅವನ ಗೆಳತಿಯ ಹುಟ್ಟುಹಬ್ಬ ಇದ್ದ ಕಾರಣ ಇದನ್ನು ಬರೆದಿದ್ದ. ಚೆನ್ನಾಗಿದೆ ಬ್ಲಾಗಿನಲ್ಲಿ ಹಾಕು ಎಂದ ಕಾರಣಕ್ಕೆ ಹಾಕಿದ್ದಾನೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸ್ವಿ ಹೇಳಿದರು...

ಸೋಮಶೇಖರ್ ಅವರೇ ಕವನ ತುಂಬಾ ಚನ್ನಾಗಿದೆ ಹೀಗೇ ಬರೆಯುತ್ತಿರಿ

ಸೋಮಶೇಖರ ಹುಲ್ಮನಿ ಹೇಳಿದರು...

ಜಲನಯನ ಹಾಗೂ ಮನಸ್ವಿಯವರಿಗೆ ಧನ್ಯವಾದಗಳು.

ಚೆನ್ನಾಗಿದೆ ಎಂದು ಅಭಿನಂದಿಸಿದ್ದೀರಿ. ಹಾಗೇ ಚೆನ್ನಾಗಿ ಇಲ್ಲದೇ ಇದ್ದಾಗ ಎಚ್ಚರಿಸುವುದನ್ನು ಮರೆಯಬೇಡಿ.

sunaath ಹೇಳಿದರು...

ಹುಟ್ಟುಹಬ್ಬಕ್ಕೆ ನನ್ನಿಂದಲೂ ಶುಭಾಶಯಗಳು!

ಶಿವಪ್ರಕಾಶ್ ಹೇಳಿದರು...

somashekhar avare,
nimma gelatige, huttu habbada shubhashayagalu :)