ಅಷ್ಟೇ ಹೇಳುವದಾದರೆ ನಾನೇಕೆ ಇದನ್ನು ಬರೆಯಬೇಕಾಗಿತ್ತು? ಕಾರಣವಿದೆ. ಹಿಂದಿನ ಆವೃತ್ತಿಯ firefox ನಲ್ಲಿ ಕೆಲವು ಬ್ಲಾಗುಗಳಲ್ಲಿ justify ಮಾಡಿರುತ್ತಿದ್ದ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿತ್ತು. ಆದರೆ ಈಗ ಬಂದಿರುವ ಈ ಮೂರನೆಯ ಆವೃತ್ತಿಯಲ್ಲಿ ಆ ದೋಷ ಪರಿಹಾರಗೊಂಡಿದೆ. ಹಾಗಾಗಿ ಕೆಲವು ಬ್ಲಾಗುಗಳಿಗಾಗಿ Internet Explorer ಗೆ ಹೋಗುವ ಅಗತ್ಯ ಈಗಿಲ್ಲ.
ನಾನೇನು ಹೇಳಲು ಬಯಸುತ್ತಿದ್ದೇನೆಂದರೆ, ನೀವು ಹಿಂದಿನ ಆವೃತ್ತಿಯನ್ನು ಉಪಯೋಗಿಸುತ್ತಿದ್ದಲ್ಲಿ ಈ ಪರಿಚ್ಛೇದವನ್ನು ಓದುವುದು ಕಷ್ಟ. ಇದನ್ನು ಅನುಭವಿಸಿ ಅಥವಾ ಈಗಲೇ firefox ಅನ್ನು download ಮಾಡಿಕೊಳ್ಳಿ.
ಬೆಂಕಿನರಿಗೆ ಜಯವಾಗಲಿ! ಆಗ್ ಲೋಮಡೀ ಕೀ ಜೈ!! ಜಯತು ಅಗ್ನಿ ಜಂಬೂಕಃ !!!
14 ಕಾಮೆಂಟ್ಗಳು:
ಬರದಿದ್ದು ಒಳ್ಳೇದಾತು. ನಾನು ಇಂದು ಬೆಳಿಗ್ಗೆಯಿಂದಲೇ ಬಳಸುತ್ತಿದ್ದೇನೆ.
ಅದೆಲ್ಲಾ ಸರಿ, ಆದರೆ ಆ ಐ.ಇ ಗೆ ಲಿಂಕು ಕೊಡುವುದು ಬೇಕಾಗಿತ್ತ? ಸದ್ಯ ವಿಕಿ ಲಿಂಕು ಅನ್ನೋದೆ ಸಮಾಧಾನ!:-)
ಸಂದೀಪ, ಜಪಾನೀಸ್ ಭಾಷೆಯಲ್ಲಿ IE (ಉಚ್ಚಾರ: ಈಯೇ) ಅಂದ್ರೆ ಇಲ್ಲ (No) ಅಂತ!
ಅಂದಹಂಗೆ, ನಿನ್ನೇನೆ ಡೌನ್ಲೋಡ್ ಮಾಡಿದ್ದೆ ಹೇಳಾದ್ರೆ ನೀನೂ ಗಿನ್ನೆಸ್ ರೆಕಾರ್ಡ್ ಗೆ ಸೇರಿದೆ ಅಂತಾತು!!
ಮೋಜಿಲ್ಲದ!!(Mozilla) ಬಳಕೆ ಅಷ್ಟೊಂದು ಖುಷಿಕೊಡುತ್ತಿಲ್ಲ ಕನ್ನಡ ಬರವಣಿಗೆಗೆ, im using mozilla 3.0rc2 beta version from its release day, in my blog slide show using flash support, firefox not installing adobe flash player correctly n asks me very time to install flash!
ಅಂದಹಾಗೆ ಮಾಹಿತಿಗಾಗಿ ಧನ್ಯವಾದಗಳು ಡೌನ್ಲೋಡ್ ಮಾಡಕ್ಕೆ ಬೆಂಕಿ ನರಿಯನ್ನೇ ಉಪಯೋಗಿಸ್ತಾ ಇದ್ದಿ :)
ಮನಸ್ವಿ, ಬೀಟಾ ರಿಲೀಸ್ ಮಾಡೋದೇ bug ಕಂಡು ಹಿಡಿಯೋದಕ್ಕಲ್ವೆ? ಈಗ ಬಂದಿರುವ ಬೆಂಕಿ ನರಿಯನ್ನು ಹಾಕಿಕೊಳ್ಳಿ..
ನಾನೂ ಕೂಡ flash problem ಬಗ್ಗೆ ನೋಡಿದೆ. ಆದರೆ ಈಗ ಬಂದಿರುವ ಆವೃತ್ತಿಯಲ್ಲಿ ಅದು ಇದ್ದಂತಿಲ್ಲ..
ಬೆಂಕಿ ನರಿ ಚೆನ್ನಾಗಿದೆ ಕಣೋ. ಆದ್ರೆ ನಾನು ಅಂತರ್ಜಾಲ ಅನಾವರಣಕಾರ(internet explorer) ಆವೃತ್ತಿ ೭ ರಲ್ಲೇ ಖುಷಿ ಪಡುತ್ತೇನೆ...!
ಮೊದಮೊದಲು ಫೈರ್ ಫಾಕ್ಸ್ ಬಳಸುತ್ತಿದ್ದೆ ಅದರಲ್ಲಿ ಕನ್ನಡ ಸರಿಯಾಗಿ ಕಾಣುತ್ತಿರಲಿಲ್ಲ.... ಕೊನೆಗೆ ಕನ್ನಡ ಪೇಜ್ಗಳಿಗೆ ಐಯಿ ಬಳಸಬೇಕಾಯಿತು .... ಮೊನ್ನೆ ನಾಡಿಗ್ ಹೇಳಿದ್ರು ಫೈರ್ ಫಾಕ್ಸ್ ೩ ರ ಬಗ್ಗೆ ..... ಇವಾಗ ಅದನ್ನೆ ಬಳಸುತ್ತಿದ್ದಿನಿ.... ಚನ್ನಾಗಿದೆ :)
ಗಣೇಶ, ಚೆನ್ನಾಗಿದೆ ಅನುವಾದ. ಹಾಗೇ ಅಂತರ್ಜಾಲ ಅನಾವರಣಕಾರ ಕೂಡ ಚೆನ್ನಾಗಿದ್ದಿದ್ದರೆ ಉತ್ತಮವಾಗಿತ್ತು..
ನಿನ್ನ ನೋಡಿ ಅಯ್ಯೋ ಎನಿಸುತ್ತಿದೆ!!
ಅಮರ, ನಾನೂ ಅದೇ ಸ್ಥಿತಿಯಲ್ಲಿದ್ದವನು. ಇನ್ನೊಂದು ವಿಷಯ ಗಮನಿಸಿದ್ದೀರಾ? ಕನ್ನಡ ಅರ್ಪಣೆ (rendering) ಅಂತರ್ಜಾಲ ಅನಾವರಣಕಾರನಿಗಿಂತ ಈಗ ಬಂದಿರುವ ಬೆಂಕಿನರಿಯಲ್ಲೇ ಚೆನ್ನಾಗಿದೆ. ಬೆಂಕಿನರಿ ಪದಗಳ ಮಧ್ಯೆ ಸಮಾನಾಂತರವಾಗಿ ಬಿಡುವು ಇಟ್ಟರೆ IE ವಾಕ್ಯ ಅಥವಾ ಪದಪುಂಜಗಳ ನಡುವೆ ಹೆಚ್ಚು ಜಾಗ ಬಿಡುತ್ತದೆ.
ಬೆಂಕಿನರಿ-೩ ಚೆನ್ನಾಗಿದೆ. ತುಂಬಾ ಧನ್ಯವಾದಗಳು.
sunath:ಸುನಾಥ್, ಹೌದು ಸ್ವಾಮಿ ಹೌದು!
ಕಮೆಂಟಿಸಿದ್ದಕ್ಕೆ ಧನ್ಯವಾದಗಳು :-)
ಹರೀಶ,
ಇಂದು ಕನ್ನಡಪ್ರಭದ ಈ-ಪತ್ರಿಕೆಯನ್ನು ಅಗ್ನಿಜಂಬೂಕ-೩ರಲ್ಲಿ open ಮಾಡಿದೆ. ಕನ್ನಡ ಅಕ್ಷರಗಳು ಬರಲಿಲ್ಲ. ಆದರೆ IE-7ದಲ್ಲಿ ತೊಂದರೆಯಿರಲಿಲ್ಲ. ಬೆಂಕಿನರಿಗೆ ಮತ್ತೇನಾದರೂ
add-on ಬೇಕಾಗುತ್ತಾ?
ಸುನಾಥ್, ಒಳ್ಳೇ ವಿಷಯವನ್ನೇ ಪ್ರಸ್ತಾಪಿಸಿದ್ದೀರಿ...
ಕನ್ನಡಪ್ರಭ ಉಪಯೋಗಿಸುವುದು ೨೦೦೦ ದಲ್ಲಿ C-DAC ನಲ್ಲಿ ತಯಾರಾದ KNW-TTNandi ಎನ್ನುವ ಫಾಂಟ್. ಇದಕ್ಕಾಗಿ http://www.kannadaprabha.com/fonts/KNWNN0NT.TTF ನಿಂದ font ಅನ್ನು download ಮಾಡಿ install ಮಾಡಿಕೊಳ್ಳಿ. ಒಮ್ಮೆ ಬೆಂಕಿನರಿಯನ್ನು restart ಮಾಡಿದರೆ ಕನ್ನಡಪ್ರಭ ಪುಟ ಸರಿಯಾಗಿ ಕಂಡುಬರುತ್ತದೆ.
ಕನ್ನಡ webmaster ಗಳಿಗೆ Unicode ಉಪಯೋಗಿಸಬೇಕೆಂಬ ಸದ್ಬುದ್ಧಿ ಯಾವಾಗ ಬರುತ್ತದೋ!
ಹೇಳಲು ಮರೆತೆ, ಕೆಲವೊಮ್ಮೆ font install ಆಗಿದ್ದರೂ ಅಕ್ಷರಗಳು ಸರಿಯಾಗಿ ಕಾಣದಿರಬಹುದು. ಹಾಗೇನಾದರೂ ಆದಲ್ಲಿ ನೀವು View -> Character Encoding ನಲ್ಲಿ Western (ISO-8859-1) ಎಂದು select ಮಾಡಬೇಕು.
Firefox 3 ನ್ನೇ ಉಪಯೋಗಿಸುತ್ತಾಯಿದ್ದೀನಿ...
(ಅಂತರ್ವಾಣಿ) ಜಯಶಂಕರ್, ನೀವೂ ಜೈ ಎಂದಿರುವುದು ಸಂತೋಷದ ವಿಚಾರ :-)
ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ