ಎಂದಾದರೂ ಸೊಡೆಕ್ಸ್ಹೋ ಮೀಲ್ ಪಾಸ್ ಅಥವಾ ಟಿಕೆಟ್ ಕೂಪನ್ಗಳ ಬಗ್ಗೆ ಕೇಳಿದ್ದೀರಾ? ಕೇಳಿರದಿದ್ದರೆ ಕೇಳಿ, ಕೇಳಿದ್ದರೆ ಅದರ ಬಗ್ಗೆ ಸ್ವಲ್ಪ ಯೋಚಿಸಿ.
ಸೊಡೆಕ್ಸ್ಹೋ ಮೀಲ್ ಪಾಸ್ ಮತ್ತು ಟಿಕೆಟ್ ಕೂಪನ್ನು ಇತ್ತೀಚಿಗೆ ಬಹಳಷ್ಟು ಜನರ, ಅದರಲ್ಲೂ ಐಟಿ ಉದ್ಯೋಗಿಗಳ ಕೈಯಲ್ಲಿ ದುಡ್ಡಿಗೆ ಪರ್ಯಾಯವಾಗಿ ಚಲಾವಣೆಯಾಗುತ್ತಿದೆ. ಯಾವುದೇ ಮಧ್ಯಮ ಹಾಗೂ ದೊಡ್ಡ ಹೋಟೆಲ್ ಅಥವಾ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್ಗಳಲ್ಲಿ ಇದನ್ನು ದುಡ್ಡಿಗೆ ಬದಲಾಗಿ ತೆಗೆದುಕೊಳ್ಳುತ್ತಾರೆ. ಬಹಳಷ್ಟು ಸಾಫ್ಟ್ವೇರ್ ಕಂಪನಿಗಳು ಪ್ರತಿ ತಿಂಗಳೂ ಬೋನಸ್ ರೂಪದಲ್ಲಿ ಈ ಕೂಪನ್ನುಗಳನ್ನು ತಮ್ಮ ಕಂಪನಿಯ ಉದ್ಯೋಗಿಗಳಿಗೆ ವಿತರಿಸುತ್ತವೆ. ೫, ೧೦, ೧೫, ೨೦, ೫೦ ಮುಂತಾದ ಮುಖಬೆಲೆಯಲ್ಲಿ ಸಿಗುವ ಈ ಪಾಸ್ "ಚಿಲ್ಲರೆ ಕೊರತೆ"ಯನ್ನು ನಿವಾರಿಸುವ ನೆಪದಲ್ಲಿ ಬಳಕೆಯಾಗುತ್ತಿದೆ. ಆದರೆ ನಿಜವಾಗಿಯೂ ಇದರಿಂದಾಗುವ ಪ್ರತಿಕೂಲ ಪರಿಣಾಮಗಳೇನು ಎಂಬುದನ್ನು ಅದನ್ನು ಕೊಡುವವರಾಗಲಿ, ತೆಗೆದುಕೊಳ್ಳುವವರಾಗಲಿ ಅಥವಾ ಉಪಯೋಗಿಸುವವರಾಗಲಿ ಯೋಚಿಸಿದ್ದಾರಾ? ಯೋಚಿಸುತ್ತಾರಾ?
ತೆರಿಗೆ ಕಟ್ಟುವುದು ಕಮ್ಮಿಯಾಗುವುದೆಂಬ ನೆಪ ಒಡ್ಡಿ ಕಂಪನಿಗಳು ಹಣದ ಬದಲಿಗೆ ಕೂಪನ್ನುಗಳನ್ನು ಕೊಡುತ್ತವೆ. ತೆಗೆದುಕೊಳ್ಳುವವರೂ ಇದನ್ನು ನಂಬುತ್ತಾರೆ. ಕಮಿಷನ್ನಿನ ಆಸೆಗೋ ಇನ್ನಾವುದೋ ಆಮಿಷಕ್ಕೋ ಒಳಗಾಗಿ ಅಂಗಡಿಗಳು ಇವನ್ನು ಚಲಾವಣೆಗೆ ತರುತ್ತವೆ. ಅನಧಿಕೃತವಾಗಿದ್ದರೂ ರಾಜಾರೋಷವಾಗಿ ಬಳಕೆಯಾಗುವ ಈ ಕೂಪನ್ನುಗಳು ಕಪ್ಪು ಹಣವಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತವೆ. ಹಾಗಾದರೆ ಇದರಿಂದ ಭರ್ಜರಿ ಲಾಭವಾಗುವುದು, ಭಯಂಕರ ನಷ್ಟವಾಗುವುದು ಯಾರಿಗೆ? ಕೊಡುವವರಿಗೋ, ತೆಗೆದುಕೊಳ್ಳುವವರಿಗೋ ಅಥವಾ ಉಪಯೋಗಿಸುವವರಿಗೋ? ದುರದೃಷ್ಟವಶಾತ್ ಇವರಾರಿಗೂ ಅಲ್ಲ. ಹಾಗೇನಾದರೂ ಆಗಿದ್ದರೆ ಬಹುಶಃ ಇದು ಬಳಕೆಯಾಗುತ್ತಿರಲೇ ಇಲ್ಲ.
ಹಾಗಾದರೆ ನಿಜವಾಗಿ ಇದರಿಂದ ಹೊಡೆತ ಬೀಳುತ್ತಿರುವುದು ಯಾರಿಗೆ? ಸರ್ಕಾರಕ್ಕೆ, ಜನರಿಗೆ. ಒಬ್ಬ ಸಾಫ್ಟ್ವೇರ್ ಇಂಜಿನಿಯರ್ಗೆ ತಿಂಗಳಿಗೆ ೧೦೦೦ ರೂಪಾಯಿಯ ಕೂಪನ್ ಸಿಗುತ್ತದೆ ಎಂದುಕೊಳ್ಳೋಣ. ಒಂದು ಸಾಧಾರಣ ಕಂಪನಿಯಲ್ಲಿ ೧೦೦ ಜನ ಕೆಲಸ ಮಾಡುತ್ತಿದ್ದಾರೆ ಎಂದುಕೊಂಡರೆ, ಒಂದು ತಿಂಗಳಿಗೆ ಒಂದು ಕಂಪನಿಯಿಂದ ಒಂದು ಲಕ್ಷ ರೂಪಾಯಿ ಮೌಲ್ಯದ ಕೂಪನ್ನು ಚಲಾವಣೆಗೆ ಬರುತ್ತದೆ. ಇಂತಹ ಒಂದು ನೂರು ಕಂಪನಿಗಳಾದರೂ ಇಲ್ಲವೇ ಉದ್ಯಾನನಗರಿಯಲ್ಲಿ? ಪರೋಕ್ಷವಾಗಿ ಒಂದು ಕೋಟಿ ರೂಪಾಯಿಯಷ್ಟು ಕಪ್ಪು ಹಣ ಪ್ರತಿ ತಿಂಗಳೂ ಜನರ ಕೈಗೆ ಹೋದಂತಾಯಿತು. ಅದರಿಂದ ಕೂಪನ್ನುಗಳನ್ನು ತಮ್ಮ ಉದ್ಯೋಗಿಗಳಿಗೆ ಹಂಚುವ ಕಂಪನಿಗೆ ಏನು ಲಾಭವೋ ಸರಿಯಾಗಿ ಗೊತ್ತಿಲ್ಲ. ಆದರೆ ಆ ಕೂಪನ್ನನ್ನು ಪ್ರಿಂಟ್ ಮಾಡಿ ದುಡ್ಡು ತೆಗೆದುಕೊಂಡು ಮಾರುವ ಸೊಡೆಕ್ಸ್ಹೊ ಅಥವಾ ಟಿಕೆಟ್ಟಿನವರಿಗಂತೂ ಸುಗ್ಗಿ.
ಸೊಡೆಕ್ಸ್ಹೊ ಬ್ಯುಸಿನೆಸ್ ಮಾಡೆಲ್ ಪ್ರಕಾರ ಅಂಗಡಿಯವರು ಜನರಿಂದ ಅವರು ಪಡೆದ ಕೂಪನ್ನುಗಳನ್ನು ಹಿಂದಿರುಗಿಸಿ ಹಣ ಪಡೆಯಬಹುದು. ಆದರೆ ಅದೆಷ್ಟು ಅಂಗಡಿಗಳ ಜನ ಹೀಗೆ ತಮಗೆ ಸೇರಬೇಕಾದ ಹಣವನ್ನು ಹಿಂದೆ ಪಡೆದಿದ್ದಾರೋ ಗೊತ್ತಿಲ್ಲ. ಏನಿಲ್ಲವೆಂದರೂ ಶೇ. ೨೫ ರಷ್ಟಾದರೂ ಜನರ/ಅಂಗಡಿಯವರ ಬಳಿ ಇದೆ ಎಂದುಕೊಳ್ಳಬಹುದಲ್ಲವೆ? ಒಂದೊಮ್ಮೆ ನಾಳೆಯೇ ಈ ಸೊಡೆಕ್ಸ್ಹೊ ಕಂಪನಿ ಕೈಕೊಟ್ಟು ಮುಚ್ಚಿಕೊಂಡು ಹೋದರೆ ನಮ್ಮ ಬಳಿ ಇರುವ ಕೂಪನ್ನನ್ನು ಏನು ಮಾಡಬೇಕು? ೨೫ ಲಕ್ಷ ರೂಪಾಯಿ ಏನೂ ಇಲ್ಲದೆಯೇ ಆ ಕೂಪನ್ ಕಂಪನಿಗೆ ಹೋದಂತಾಗಲಿಲ್ಲವೇ? ಹಾಗೇನಾದರೂ ಆದರೆ ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಾಗುತ್ತದೆಯೆ? ಸರ್ಕಾರ ಅದಕ್ಕೆ ಭರವಸೆ ಕೊಡುತ್ತದೆಯೇ?
ಈಗ ಖೋಟಾ ನೋಟಿನ ವಿಷಯಕ್ಕೆ ಬರೋಣ. ಯಾರೋ ಒಬ್ಬ ಖೋಟಾ ನೋಟನ್ನು ಪ್ರಿಂಟ್ ಮಾಡಿ ಜನರಿಗೆ ಕೊಡುತ್ತಾನೆ. ಜನ ಅದು ಕಪ್ಪು ಹಣವೆಂಬ ಪರಿವೆಯಿಲ್ಲದೆ ಮಾಮೂಲಿನಂತೆ ದಿನನಿತ್ಯ ಬಳಸಲಾರಂಭಿಸುತ್ತಾರೆ. ಅವರಿಗೇನೂ ನಷ್ಟವಿಲ್ಲ. ಅಕಸ್ಮಾತ್ ಖೋಟಾ ನೋಟ್ ಚಲಾವಣೆ ಮಾಡುತ್ತಿರುವಾಗ ಸಿಕ್ಕಿ ಬಿದ್ದರೆ ಆ ಕ್ಷಣದಲ್ಲಿ ಯಾರ ಬಳಿ ನೋಟಿರುತ್ತದೋ ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಕರಾ ಆಗುತ್ತಾನೆ. ಹಾಗಾದರೆ ಇಲ್ಲಿ ಲಾಭವಾಗಿದ್ದು ಯಾರಿಗೆ? ಪ್ರಿಂಟ್ ಮಾಡಿದ ವ್ಯಕ್ತಿಗೆ ತಾನೇ?
ನೋಡಲು ಖೋಟಾ ನೋಟು ನಿಜವಾದ ನೋಟನ್ನು ಹೋಲುತ್ತದೆ. ಆದರೆ ಈ ಮೀಲ್ ಪಾಸುಗಳು ಹೋಲುವುದಿಲ್ಲ. ಇದನ್ನು ಬಿಟ್ಟು ಬೇರೆ ಏನಾದರೂ ವ್ಯತ್ಯಾಸ ನಿಮಗೆ ಕಾಣುತ್ತದೆಯೇ?
20 ಕಾಮೆಂಟ್ಗಳು:
Also these coupens were supposed to be used for purchasing food items only, (and many more rules are there) but such rules are openly floated-you can buy almost anything in Bigbazaar like shops using this...
ಹ್ಮ್..
ನನಗೂ ೧೨೫೦ ರೂ. ಬೆಲೆಯ Sodaxhoಗಳು ಪ್ರತಿ ತಿಂಗಳು ಸಿಗುತ್ತವೆ. ಇದು ಅಧಿಕೃತವಾಗಿಯೇ ನೆಡೆಯುತ್ತಿರೋದ್ರಿಂದ ಸರ್ಕಾರದ ಗಮನಗಕ್ಕಂತೂ ಇದ್ದೇ ಇರುತ್ತದೆ. ಕಪ್ಪು ಹಣಕ್ಕೂ ಇದಕ್ಕೂ ಮೇಲ್ನೋಟಕ್ಕೆ ವ್ಯತ್ಯಾಸ ಕಾಣಿಸದಿದ್ದರೂ ನಿಜವಾಗ್ಲೂ ಇವರ ಬಿಸಿನೆಸ್ ಹೇಗೆ ನೆಡೆಯುತ್ತದೆ ಅವರಿಗೆ ಲಾಭ ಹೇಗೆ ಅನ್ನುವುದು ಅರ್ಥಾಗುತ್ತಿಲ್ಲ.
ಮೇಲಾಗಿ ಈ ಸೊಡಾಕ್ಸೋಗಳಿಗೆ ಅಂಗಡಿಗಳಲ್ಲಿ ಚಿಲ್ಲರೆ ಕೊಡುವುದಿಲ್ಲ!!
ಶ್ರೀನಿಧಿ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಇವುಗಳನ್ನು ಕೇವಲ ಆಹಾರ ಪದಾರ್ಥಗಲಿಗಾಗಷ್ಟೇ ಉಪಯೋಗಿಸಬೇಕೆಂಬ ನಿಯಮ ಇದೆ ಎಂದು ತಿಳಿದಿರಲಿಲ್ಲ. ಈ ಕೂಪನ್ನುಗಳ ಬದಲು ನಿಜವಾದ ದುಡ್ಡನ್ನೇ ಚಿಲ್ಲರೆಯಾಗಿ ಇಟ್ಟುಕೊಳ್ಳಲು ಇವರಿಗೇನು ಕಷ್ಟವೋ?
ವಿಕಾಸ್, ನಾನು ಶ್ರೀನಿಧಿ ಅವರಿಗೆ ಉತ್ತರಿಸುತ್ತಿದ್ದಾಗ ನಿಮ್ಮ ಅಭಿಪ್ರಾಯ ಬಂದಿದೆ. ಕ್ರಾಸ್-ಪೋಸ್ಟ್ :-)
ಸೊಡೆಕ್ಸ್ಹೋಗೆ ಚಿಲ್ಲರೆ ಕೊಡುವುದಿಲ್ಲ ಎನ್ನುವುದು ಗೊತ್ತಿರಲಿಲ್ಲ!! ಇನ್ನೊಂದು ವಿಷಯ ತಿಳಿದುಕೊಂಡಂತಾಯಿತು :-)
>> ಇದು ಅಧಿಕೃತವಾಗಿಯೇ ನಡೆಯುತ್ತಿರೋದ್ರಿಂದ ಸರ್ಕಾರದ ಗಮನಗಕ್ಕಂತೂ ಇದ್ದೇ ಇರುತ್ತದೆ.
ಇರಬಹುದು! ಈಗ ಸರ್ಕಾರದ ಮೇಲೂ ನನ್ನ ಗುಮಾನಿ ಹಬ್ಬುತ್ತಿದೆ!! ಇದರ ಹಿಂದೆ ದೊಡ್ಡ ಜಾಲವೇ ಇದೆ ಅಂತ ಅನ್ಸೋದಿಲ್ವಾ???
Allowance given for Food purposes is excempt from fringe benefit tax. If instead of Coupens worth Rs 1250, if companies give cash salary, 10,20 or 30% of that will be lost directly as income tax (depending on tax slab of employee) and employee will be left with less money. so by giving coupens they can claim tax concession on this amount. I guess most of the expense is borne by employer and a bit by hotels which accept this coupens.
They wont give back cash because of following reason- If you give them Rs 50 coupen, it will cost them say Rs 1 (dont know exact percentage) for them to encash it. If your bill amount is 45 Rs and if they return Rs 5 in cash, they still will have to pay x% of 50 Rs coupen to encash it. hence they wont return cash.
if you ask for a Rs 5 coupen instead most of them will give.
ಶ್ರೀನಿಧಿ ಅವರೇ, ಇದು ಸರ್ಕಾರಕ್ಕೆ, ಜನರಿಗೆ ಆಗುತ್ತಿರುವ ವಂಚನೆಯಾಗುವುದಿಲ್ಲವಾ? ಕಾನೂನಿನ ಪ್ರಕಾರ ಇದು ಸರಿಯೇ?
Government officially gives several ways of evading tax (like buying insurance etc, certain saving schemes etc) This is one such provision, which some companies are exploiting.
Core idea was to enable employees get more food for their money (If 1250 Rs is paid as salary after tax one can buy food for only Rs 1000 Rs or so-with meals coupen he can buy food items worth Rs 1250)
But obviously this provision is being misused...
ಬ್ಲಾಗ್ ಚೆನ್ನಾಗಿದೆ. ನೋಡಿರಲಿಲ್ಲ. ಇವತ್ತು ಕಣ್ಣಿಗೆ ಬಿತ್ತು. ನಿತ್ಯ ನೋಡುತ್ತೇನೆ
ಜೋಗಿ
ಶ್ರೀನಿಧಿ ಅವರೇ, ತುಂಬಾ ವಿಷಯಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು.
ಜೋಗಿ ಅವರೇ, ನಮ್ಮ ಬ್ಲಾಗ್ ನಿಮಗಿಷ್ಟವಾಗಿದ್ದು ಸಂತೋಷ :-) ಬರುತ್ತಿರಿ, ಬರೆಯುತ್ತಿರಿ.
ಈ ಕೂಪನ್ನುಗಳಿಂದ ಇನ್ನೂ ಕೆಲವು ಐಟೆಮ್ಮುಗಳನ್ನು ಕೊಳ್ಳಲು ಬರುತ್ತದೆ ಎಂದು ಕೇಳಿದ್ದೇನೆ. Anyway,ತೆರಿಗೆ ತಪ್ಪಿಸಲು ಎಂಥೆಂಥಾ ಕಣ್ಣುಮುಚ್ಚಾಲೆಯಾಟ ಆಡಬಹುದೆಂದು ತಿಳಿದಾಗ ದಿಗ್ಭ್ರಮೆಯಾಗುತ್ತದೆ.
ಹರೀಶ ಅವರೇ ಲೇಖನ ತುಂಬ ಚನ್ನಾಗಿದೆ ..
ಬಾಳ ದೋಣಿ ಬ್ಲಾಗ್ ನ ಕನ್ನಡ ಕೊಂಡಿಗಳು ಎನ್ನುವ ವಿಭಾಗದಲ್ಲಿ http://adnaadigalu.blogspot.com/ (ಹಾಗೆ ಸುಮ್ಮನೆ) ಅನ್ನುವ ಒಂದು ಲಿಂಕ್ ಇದೆ.. ಬೇಸರದ ಸಂಗತಿ ಎಂದರೆ ಆ ಬ್ಲಾಗ್ ನಲ್ಲಿ ಒಂದೇ ಒಂದು ಪೋಸ್ಟ್ ಸಹ ಇಲ್ಲ..
ನನ್ನ ಬ್ಲಾಗ್ ನ ಹೆಸರು ಕೂಡ ಹಾಗೇ ಸುಮ್ಮನೆ (www.adibedur.blogspot.com)ಎಂದು ಇಟ್ಟು ಕೊಂಡಿದ್ದೇನೆ..ನಿಮಗೆ ನೆನಪಿದೆಯೆಂದು ಬಾವಿಸುತ್ತೇನೆ
ಬಾಳ ದೋಣಿ ಕೊಂಡಿಯಲ್ಲಿರುವ ಹಾಗೆ ಸುಮ್ಮನೆ ಲಿಂಕ್ ಮೇಲೆ ಕ್ಲಿಕ್ಕಿಸಿದವರು ಇನ್ನೆಲ್ಲಿ ಹಾಗೆ ಸುಮ್ಮನೆ ಲಿಂಕ್ ಕಂಡರೂ ಕ್ಲಿಕ್ಕಿಸದೆ ಹೋಗಬಹುದೇನೋ ಎಂದು ಬೇಸರವಾಯಿತು.. I know this is shared blog.. but i thought saying with you is the best.. Thank you..
ಸುನಾಥ್, ಒಂದೊಂದು ಸಾರಿ ನೋಡಿದಾಗಲೂ ಒಂದೊಂದು ರೀತಿ ಅನಿಸಿಕೆ ಮೂಡುತ್ತದೆ.
ಸರ್ಕಾರ ಹಾಗೆ ಮಾಡುತ್ತಿರುವುದಕ್ಕೆ ಜನ ಹೀಗೆ ಮಾಡುತ್ತಾರೋ, ಜನ ಹೀಗೆ ಮಾಡುತ್ತಿರುವುದಕ್ಕೆ ಸರ್ಕಾರ ಹಾಗೆ ಮಾಡುತ್ತದೋ ತಿಳಿಯುವುದಿಲ್ಲ.
ಮನಸ್ವಿ, ನಿಮ್ಮ ಬ್ಲಾಗ್ "ನಿಮಗಾಗಿಯೇ ಬರೆದ ಪುಟ" ಎಂಬ ಹೆಸರಿನಲ್ಲಿದೆಯಲ್ಲ!!
ನೀವು ನಿಮ್ಮ ಬ್ಲಾಗಿನ setting ಅನ್ನು ಸರಿಯಾಗಿ ಬದಲಾಯಿಸಿಲ್ಲ ಎಂದು ಕಾಣುತ್ತದೆ. ನನಗೆ ಅದರ title firefox ನಲ್ಲಿ <center> tag ನೊಂದಿಗೆ ಕಾಣುತ್ತದೆ.
Request... ನನ್ನ ಬ್ಲಾಗ್ ನ ಲಿಂಕನ್ನು ಹಾಗೇ ಸುಮ್ಮನೆ ಎಂದು ಬದಲಾಯಿಸಲು ಸಾದ್ಯವೇ?? ಹೌದು center tag ಬಳಸಿದ್ದೇನೆ,it will appear in all browsers.. i tried to hide the center tag but i couldnt do :(
ಮನಸ್ವಿ, <center> ಅನ್ನು ಉಳಿಸಿಕೊಂಡು ಅದು ಬ್ರೌಸರ್ ಗಳಲ್ಲಿ ಬರದಂತೆ ಮಾಡಬಹುದು. ಬಿಡುವಿದ್ದಾಗ ನಿಮ್ಮ template ಅನ್ನು ನನಗೆ ಕಳಿಸಿ, ನಾನು ಅದನ್ನು ತೆಗೆಯಲು ಪ್ರಯತ್ನಿಸುತ್ತೇನೆ.
ನಿಮ್ಮ ಇಚ್ಛೆಯಂತೆ ನಿಮ್ಮ ಬ್ಲಾಗಿನ ಹೆಸರನ್ನು ಬದಲಾಯಿಸಿದ್ದೇನೆ.
ಧನ್ಯವಾದಗಳು.. ನನ್ನ ಬ್ಲಾಗ್ ನ html codes ನಿಂಗೆ ಕಳ್ಸಕ್ಕ ಎಂತು?.. ನಾನು !-- tag and /-- between center tag haki try madi nodidi adre idi blog script hide agi hotu :-( bari blog template matra disply agtu.. nanu orkut li ninna profile hudkiddi alli matadana ok na?--
Aditya
Ticket Resturant is given for food and to use this you need not have to pay anything extra. But To use Ticket compliments, you will ahve to go to specified shops (only few in each area) and will have to pay 7.5% extra from your pocket. I paid this @ Devi Electronics in Jayanagar. They coolly said, anyway, you have not paid for the ci\oupan (implied meaningw was, you are paying only 7.5%)
ಜಯಲಕ್ಷ್ಮಿ, ನನಗಂತೂ ಈ ಕೂಪನ್ನುಗಳ ಮರ್ಮವೇ ತಿಳಿಯುತ್ತಿಲ್ಲ. ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಬರುತ್ತಿರಿ :-)
Thankq for ur awakenign write up.
ಕಾಮೆಂಟ್ ಪೋಸ್ಟ್ ಮಾಡಿ