ಮಂಗಳವಾರ, ಮೇ 27, 2008

ನಿರ್ಣಯ

ಇಂದು ಮಿಂಚಂಚೆಯಲ್ಲಿ ಬಂದ ಒಂದು ಕಥೆಯನ್ನು ಇಲ್ಲಿ ಬರೆಯುತ್ತಿದ್ದೇನೆ.

*****

ಒಂದು ಸಣ್ಣ ಪಟ್ಟಣದಲ್ಲಿ ಒಬ್ಬನು ಒಂದು ಮದ್ಯದಂಗಡಿಯನ್ನು (ಬಾರ್) ತೆರೆಯಲು ನಿರ್ಧರಿಸಿದ. ಆತ ತನ್ನ ಅಂಗಡಿಗೆ ಆಯ್ದುಕೊಂಡಿದ್ದ ಸ್ಥಳ ಒಂದು ದೇವಸ್ಥಾನದ ಎದುರಿನಲ್ಲಿತ್ತು. ಸಹಜವಾಗಿಯೇ ಇದು ಆ ದೇವಸ್ಥಾನದ ಆಡಳಿತ ಮಂಡಳಿಯ ಹಾಗೂ ಭಕ್ತರ ವಿರೋಧಕ್ಕೆ ಕಾರಣವಾಯಿತು. ಅವನ ಅಂಗಡಿಯನ್ನು ಮುಚ್ಚಿಸಬೇಕೆಂದು ಪ್ರತಿಭಟನೆಯೂ, ಅವನ ವ್ಯಾಪಾರಕ್ಕೆ ಹಾನಿಯಾಗಲೆಂದು ಪ್ರಾರ್ಥನೆಗಳೂ ಪ್ರಾರಂಭವಾದವು.

ದಿನಗಳುರುಳಿದವು. ಪಟ್ಟು ಬಿಡದ ಆ ವ್ಯಕ್ತಿಯ ಅಂಗಡಿಯು ಕಟ್ಟಿ ಮುಗಿಯುವ ಹಂತಕ್ಕೆ ಬಂದಿತ್ತು. ಅಂಗಡಿ ತೆರೆಯಲು ಇನ್ನು ಸ್ವಲ್ಪ ದಿನಗಳು ಉಳಿದಿವೆ ಎನ್ನುವಾಗ ಬಲವಾದ ಸಿಡಿಲು ಬಡಿದು ಆ ಕಟ್ಟಡ ಧ್ವಂಸವಾಯಿತು.

ದೇವಸ್ಥಾನದ ಜನರು ತಮ್ಮ ಅಭೀಷ್ಟ ಈಡೇರಿದವರಂತೆ ಕಂಡು ಬಂದರು. ಆದರೆ ಅವರ ಸಂತೋಷ ಅಲ್ಪಕಾಲದ್ದಾಗಿತ್ತು. ಆ ವ್ಯಕ್ತಿ ದೇವಸ್ಥಾನದ ಮಂಡಳಿಯ ಮೇಲೆ ಮೊಕದ್ದಮೆ ದಾಖಲಿಸಿದ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ದೇವಸ್ಥಾನದವರ ಸಾಂಘಿಕ ಪ್ರಾರ್ಥನೆಯೇ ತನ್ನ ಅಂಗಡಿಯ ನಾಶಕ್ಕೆ ಕಾರಣವೆಂಬುದು ಅವನ ಆಪಾದನೆಯಾಗಿತ್ತು.

ನ್ಯಾಯಾಲಯದ ಪ್ರಶ್ನೆಗೆ ಉತ್ತರವಾಗಿ ದೇವಾಲಯದ ಮಂಡಳಿಯು ಈ ಪ್ರಕರಣಕ್ಕೆ ತಾನು ಹೊಣೆಯಲ್ಲವೆಂದೂ, ತಮ್ಮ ಪ್ರಾರ್ಥನೆಗಳಿಗೂ ಆ ಕಟ್ಟಡದ ನಾಶಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ವಾದಿಸಿತು. ಹೀಗೆ ಬಂದ ವಾದ-ಪ್ರತಿವಾದಗಳೆರಡನ್ನೂ ಅಭ್ಯಸಿಸಿದ ನ್ಯಾಯಾಧೀಶರ ತೀರ್ಪು ಹೀಗಿತ್ತು:
ಈ ಪ್ರಕರಣದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಆದರೆ ದಾಖಲೆಗಳ ಮೂಲಕ ತಿಳಿದುಬರುವುದೇನೆಂದರೆ ಇಲ್ಲಿ ಇರುವವರು ಇಬ್ಬರು: ಪ್ರಾರ್ಥನೆಯ ಸಾಮರ್ಥ್ಯದಲ್ಲಿ ಬಲವಾಗಿ ನಂಬಿರುವ ಅಂಗಡಿಯ ಮಾಲೀಕ ಹಾಗೂ ಅದರಲ್ಲಿ ಒಂದಿನಿತೂ ನಂಬಿಕೆಯಿರದ ದೇವಾಲಯದ ಮಂದಿ.
*****

ಈ ಕಥೆಯನ್ನು ಕೇಳಿದರೆ ನಿಮಗೇನೆನಿಸುತ್ತದೆ?

11 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಕಥೆ ಚೆನ್ನಾಗಿದೆ. ನಂದೂ ನ್ಯಾಯಾಧೀಶರ ಸ್ಥಿತಿಯೇ! ಏನು ಹೇಳಬೇಕೋ ತಿಳಿಯುತ್ತಿಲ್ಲ. ಜಗತ್ತಿನ ಗೊಂದಲಮಯ ವಾಸ್ತವ ಚೆನ್ನಾಗಿ ನಿರೂಪಿಸಲ್ಪಟ್ಟಿದೆ ಈ ಕಥೆಯಲ್ಲಿ.

Harisha - ಹರೀಶ ಹೇಳಿದರು...

ಮೊನ್ನೆ ಇದೇ ರೀತಿಯ ಕಾರಣಕ್ಕೆ ನಾನು, ನನ್ನ ರೂಮ್ ಮೇಟ್ ವಾದ ಮಾಡುತ್ತಿದ್ದೆವು. ಭಾರತೀಯ ಸಂಸ್ಕೃತಿ ಯಾಕೆ ನಾಶ ಆಗ್ತಿದೆ ಅನ್ನೋದಕ್ಕೆ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಸುಲಭವಾಗಿರುವುದೇ ಕಾರಣ ಎಂಬುದು ಅವನ ವಾದ. ಅದು ನಿಜ, ಆದರೆ ನಮ್ಮತನವನ್ನು ಎಲ್ಲೇ ಇದ್ದರೂ ನಾವು ಉಳಿಸಿಕೊಳ್ಳಬೇಕು, ಸುಲಭ ಅನ್ನುವ ಕಾರಣಕ್ಕೆ ತಪ್ಪಾಗಿದ್ದರೂ ಅವುಗಳನ್ನು ಅನುಸರಿಸುವುದು ಸರಿಯಲ್ಲ ಎನ್ನುವುದು ನನ್ನ ವಾದವಾಗಿತ್ತು.

ತೇಜಸ್ವಿನಿ ಹೆಗಡೆ ಹೇಳಿದರು...

ಇದರಲ್ಲಿ ತಪ್ಪು ಸ್ಪಷ್ಟವಾಗಿ ಆ ಬಾರ್ ತೆರೆಯಲು ಲಂಚ ಮಡೆದು ಪರವಾನಿಗೆ ನೀಡಿದವರದ್ದು!

Harisha - ಹರೀಶ ಹೇಳಿದರು...

ಹೆಹ್ಹೆ! Good observation!! :-)

sunaath ಹೇಳಿದರು...

ಪ್ರಾರ್ಥನೆಯಲ್ಲಿ ನಂಬಿಕೆ ಇದ್ದ ಆ ಗಡಂಗದ ಮಾಲಕನನ್ನೇ ದೇವಾಲಯದ ಅರ್ಚಕನನ್ನಾಗಿ ನೇಮಿಸಬೇಕು.

Harisha - ಹರೀಶ ಹೇಳಿದರು...

ಸುನಾಥ್ ಅವರೇ, ಬ್ಲಾಗಿಗೆ ಸ್ವಾಗತ :-)

ನಿರ್ಣಯವನ್ನಷ್ಟೇ ಕೇಳಿದರೆ ನೀವು ಹೇಳಿದ್ದು ಸರಿ. ಆದರೆ ಆ ವ್ಯಕ್ತಿಗೆ ದೇವರಲ್ಲಿ ಭಕ್ತಿ ಇದ್ದಿದ್ದರೆ ಅಲ್ಲಿ ಗಡಂಗು ತೆರೆಯಲು ಯತ್ನಿಸುತ್ತಿದ್ದನೆ?

ಅನಾಮಧೇಯ ಹೇಳಿದರು...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ಸುಧೇಶ್ ಶೆಟ್ಟಿ ಹೇಳಿದರು...

ಹರೀಶ್ ಅವರೇ…
ಇದು ನಿಮ್ಮ ಬ್ಲಾಗಿಗೆ ನನ್ನ ಮೊದಲ ಬೇಟಿ. ನಿಮ್ಮ ಬರಹಗಳು ಚೆನ್ನಾಗಿವೆ.
ಈ ಕಥೆಯು ಸ್ವಾರಸ್ಯಕರವಾಗಿತ್ತು.
ಮತ್ತೆ ಬರುತ್ತೇನೆ.

Harisha - ಹರೀಶ ಹೇಳಿದರು...

ಸುಧೇಶ್, ಪುನಃ ಬನ್ನಿ, ನಮಸ್ಕಾರ!

Sreenivas V ಹೇಳಿದರು...

Hi harish,
I am very happy to read kannada articles like this. We experience so many situations like this one, but we won't get answers for most of the situations.

Too good writting...

Regards
Sreeny

Harisha - ಹರೀಶ ಹೇಳಿದರು...

ಧನ್ಯವಾದಗಳು ಶ್ರೀನಿ.. ಬರುತ್ತಿರಿ.