ಮಂಗಳವಾರ, ಸೆಪ್ಟೆಂಬರ್ 4, 2007

ಸುಂದರಿಯ ಬುದ್ಧಿವಂತಿಕೆ

ಬಹಳ ದಿನದಿoದ ಕನ್ನಡದಲ್ಲಿ ಒಂದು ಚೂರು ಗೀಚ್‍ಬೇಕು ಅಂತ ಅನ್ನಿಸುತ್ತಿತ್ತು. ಅದಕ್ಕೆ ಈ ನನ್ನ ಪತ್ರ. ನಾನು ತುoಬ ದಿನದಿoದ ಬಿಸಿನೆಸ್ ಪತ್ರಗಳನ್ನು ಓದುತ್ತಿದ್ದೇನೆ. ಬಹಳ ಜನ ಇದನ್ನು ಒಂದು ಬೇಸರ ತರುವ ಕೆಲಸ ಅoತ ತಿಳಿದಿದ್ದಾರೆ, ಆದರೆ ಬಿಸಿನೆಸ್ ಪತ್ರಗಳು ನಿಜವಾಗಿಯೂ ಸ್ವಾರಸ್ಯಕರವಾಗಿರುತ್ತವೆ. ಇದಕ್ಕೆ ನಿದರ್ಶನ ಅದರಲ್ಲಿ ಪ್ರಕಟವಾದ ಒಂದು ಜೋಕು...

ಒಮ್ಮೆ ಕಛೇರಿಯಲ್ಲಿ ಒಬ್ಬಾಕೆ ಸುoದರಿ ತನ್ನ ಕೆಲಸ ಮುಗಿಸಿ ಶಾಪಿoಗ್ ಹೋಗುತ್ತಾಳೆ. ಅಲ್ಲಿ ಅವಳು ಒಂದು ಹೊಸ ತರಹದ ಥರ್ಮೋಸ್ ಡಬ್ಬಿ ನೋಡುತ್ತಾಳೆ. ಮೊದಲು ಎಂದೂ ಅವಳು ಆ ಡಬ್ಬಿ ನೋಡಿರುವುದಿಲ್ಲ. ಆದ್ದರಿoದ ಅವಳು ಅoಗಡಿಯ ಮಾಲೀಕನಿಗೆ ಕೇಳುತ್ತಾಳೆ- "ಈ ಡಬ್ಬಿಯನ್ನು ಯಾತಕ್ಕೆ ಉಪಯೋಗಿಸುತ್ತಾರೆ?". ಆಗ ಮಾಲೀಕ- "ಇದನ್ನು ತಣ್ಣನೆ ವಸ್ತುವನ್ನು ತಣ್ಣಗಿಡಲು ಮತ್ತು ಬಿಸಿಯ ವಸ್ತುವನ್ನು ಬಿಸಿಯಾಗಿಡಲು ಉಪಯೋಗಿಸುತ್ತಾರೆ" ಅಂತ ಉತ್ತರಿಸುತ್ತಾನೆ.

ಮಾರನೇ ದಿನ ಅವಳು ಆ ಥರ್ಮೋಸ್ ಡಬ್ಬಿಯನ್ನು ಕಛೇರಿಗೆ ತೆಗೆದುಕೊಂಡು ಹೋಗುತ್ತಾಳೆ. ಆಗ ಅವಳ ಸಹೋದ್ಯೋಗಿ ಹೀಗೆ ಅವಳನ್ನು ಕೇಳುತ್ತಾಳೆ- "ಇದೇನು ಡಬ್ಬಿ, ಹೊಸತಾಗಿದೆ, ಇದರ ವಿಶೇಷತೆ ಏನು?". ಆಗ ಆಕೆ ಹೀಗೆ ಹೇಳುತ್ತಾಳೆ- "ಇದು ಥರ್ಮೋಸ್ ಡಬ್ಬಿ. ಇದನ್ನು ತಣ್ಣನೆ ವಸ್ತುವನ್ನು ತಣ್ಣಗಿಡಲು ಮತ್ತು ಬಿಸಿಯ ವಸ್ತುವನ್ನು ಬಿಸಿಯಾಗಿಡಲು ಉಪಯೋಗಿಸುತ್ತಾರೆ". ಅವಳ ಸಹೋದ್ಯೋಗಿ ಹೀಗೆ ಕೇಳುತ್ತಾಳೆ- "ಇದರಲ್ಲಿ ಈಗ ಏನಿದೆ?"

ಆಕೆ ಅನ್ನುತ್ತಾಳೆ- "ಇದರಲ್ಲಿ ಈಗ ಕಾಫಿ ಮತ್ತು ಐಸ್ ಕ್ರೀಮ್ ಇದೆ" :)

5 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಸುಂದರಿಯರೆಲ್ಲ ಬಹುಶಃ ಹಾಗೇ ಏನೊ..

ಇಲ್ಲೊಂದು ಉದಾಹರಣೆ:

Suresh S Murthy ಹೇಳಿದರು...

ಹರೀಶ ಸರಿಯಾಗಿಯೇ ಹೇಳಿದ್ದಾನೆ!!

Navaneeth B ಹೇಳಿದರು...

ಹೌದಪ್ಪ ಹೌದು... :)

ಅನಾಮಧೇಯ ಹೇಳಿದರು...

ಏನ್ರೀ ಸುಂದರಿಯರೆಲ್ಲಾ ಹಾಗೇ ಅಂತೀರಲ್ಲ! ಸುಂದರರು ಇರಲ್ವ?

Navaneeth B ಹೇಳಿದರು...

ಸುಂದರರೂ ಹಾಗೆ ಇರುತ್ತಾರೆ ಆದರೆ ತಮ್ಮ ಬುದ್ದಿವಂತಿಕೆಯನ್ನು ತೋರಿಸೋದು ಕಮ್ಮಿ.... ;)