ಎಂದಾದರೂ ಸೊಡೆಕ್ಸ್‍ಹೋ ಮೀಲ್ ಪಾಸ್ ಅಥವಾ ಟಿಕೆಟ್ ಕೂಪನ್ಗಳ ಬಗ್ಗೆ ಕೇಳಿದ್ದೀರಾ? ಕೇಳಿರದಿದ್ದರೆ ಕೇಳಿ, ಕೇಳಿದ್ದರೆ ಅದರ ಬಗ್ಗೆ ಸ್ವಲ್ಪ ಯೋಚಿಸಿ.
ಸೊಡೆಕ್ಸ್‍ಹೋ ಮೀಲ್ ಪಾಸ್ ಮತ್ತು ಟಿಕೆಟ್ ಕೂಪನ್ನು ಇತ್ತೀಚಿಗೆ ಬಹಳಷ್ಟು ಜನರ, ಅದರಲ್ಲೂ ಐಟಿ ಉದ್ಯೋಗಿಗಳ ಕೈಯಲ್ಲಿ ದುಡ್ಡಿಗೆ ಪರ್ಯಾಯವಾಗಿ ಚಲಾವಣೆಯಾಗುತ್ತಿದೆ. ಯಾವುದೇ ಮಧ್ಯಮ ಹಾಗೂ ದೊಡ್ಡ ಹೋಟೆಲ್ ಅಥವಾ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್‍ಗಳಲ್ಲಿ ಇದನ್ನು ದುಡ್ಡಿಗೆ ಬದಲಾಗಿ ತೆಗೆದುಕೊಳ್ಳುತ್ತಾರೆ. ಬಹಳಷ್ಟು ಸಾಫ್ಟ್‍ವೇರ್ ಕಂಪನಿಗಳು ಪ್ರತಿ ತಿಂಗಳೂ ಬೋನಸ್ ರೂಪದಲ್ಲಿ ಈ ಕೂಪನ್ನುಗಳನ್ನು ತಮ್ಮ ಕಂಪನಿಯ ಉದ್ಯೋಗಿಗಳಿಗೆ ವಿತರಿಸುತ್ತವೆ. ೫, ೧೦, ೧೫, ೨೦, ೫೦ ಮುಂತಾದ ಮುಖಬೆಲೆಯಲ್ಲಿ ಸಿಗುವ ಈ ಪಾಸ್ "ಚಿಲ್ಲರೆ ಕೊರತೆ"ಯನ್ನು ನಿವಾರಿಸುವ ನೆಪದಲ್ಲಿ ಬಳಕೆಯಾಗುತ್ತಿದೆ. ಆದರೆ ನಿಜವಾಗಿಯೂ ಇದರಿಂದಾಗುವ ಪ್ರತಿಕೂಲ ಪರಿಣಾಮಗಳೇನು ಎಂಬುದನ್ನು ಅದನ್ನು ಕೊಡುವವರಾಗಲಿ, ತೆಗೆದುಕೊಳ್ಳುವವರಾಗಲಿ ಅಥವಾ ಉಪಯೋಗಿಸುವವರಾಗಲಿ ಯೋಚಿಸಿದ್ದಾರಾ? ಯೋಚಿಸುತ್ತಾರಾ?
ತೆರಿಗೆ ಕಟ್ಟುವುದು ಕಮ್ಮಿಯಾಗುವುದೆಂಬ ನೆಪ ಒಡ್ಡಿ ಕಂಪನಿಗಳು ಹಣದ ಬದಲಿಗೆ ಕೂಪನ್ನುಗಳನ್ನು ಕೊಡುತ್ತವೆ. ತೆಗೆದುಕೊಳ್ಳುವವರೂ ಇದನ್ನು ನಂಬುತ್ತಾರೆ. ಕಮಿಷನ್ನಿನ ಆಸೆಗೋ ಇನ್ನಾವುದೋ ಆಮಿಷಕ್ಕೋ ಒಳಗಾಗಿ ಅಂಗಡಿಗಳು ಇವನ್ನು ಚಲಾವಣೆಗೆ ತರುತ್ತವೆ. ಅನಧಿಕೃತವಾಗಿದ್ದರೂ ರಾಜಾರೋಷವಾಗಿ ಬಳಕೆಯಾಗುವ ಈ ಕೂಪನ್ನುಗಳು ಕಪ್ಪು ಹಣವಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತವೆ. ಹಾಗಾದರೆ ಇದರಿಂದ ಭರ್ಜರಿ ಲಾಭವಾಗುವುದು, ಭಯಂಕರ ನಷ್ಟವಾಗುವುದು ಯಾರಿಗೆ? ಕೊಡುವವರಿಗೋ, ತೆಗೆದುಕೊಳ್ಳುವವರಿಗೋ ಅಥವಾ ಉಪಯೋಗಿಸುವವರಿಗೋ? ದುರದೃಷ್ಟವಶಾತ್ ಇವರಾರಿಗೂ ಅಲ್ಲ. ಹಾಗೇನಾದರೂ ಆಗಿದ್ದರೆ ಬಹುಶಃ ಇದು ಬಳಕೆಯಾಗುತ್ತಿರಲೇ ಇಲ್ಲ.
ಹಾಗಾದರೆ ನಿಜವಾಗಿ ಇದರಿಂದ ಹೊಡೆತ ಬೀಳುತ್ತಿರುವುದು ಯಾರಿಗೆ? ಸರ್ಕಾರಕ್ಕೆ, ಜನರಿಗೆ. ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್‌ಗೆ ತಿಂಗಳಿಗೆ ೧೦೦೦ ರೂಪಾಯಿಯ ಕೂಪನ್ ಸಿಗುತ್ತದೆ ಎಂದುಕೊಳ್ಳೋಣ. ಒಂದು ಸಾಧಾರಣ ಕಂಪನಿಯಲ್ಲಿ ೧೦೦ ಜನ ಕೆಲಸ ಮಾಡುತ್ತಿದ್ದಾರೆ ಎಂದುಕೊಂಡರೆ, ಒಂದು ತಿಂಗಳಿಗೆ ಒಂದು ಕಂಪನಿಯಿಂದ ಒಂದು ಲಕ್ಷ ರೂಪಾಯಿ ಮೌಲ್ಯದ ಕೂಪನ್ನು ಚಲಾವಣೆಗೆ ಬರುತ್ತದೆ. ಇಂತಹ ಒಂದು ನೂರು ಕಂಪನಿಗಳಾದರೂ ಇಲ್ಲವೇ ಉದ್ಯಾನನಗರಿಯಲ್ಲಿ? ಪರೋಕ್ಷವಾಗಿ ಒಂದು ಕೋಟಿ ರೂಪಾಯಿಯಷ್ಟು ಕಪ್ಪು ಹಣ ಪ್ರತಿ ತಿಂಗಳೂ ಜನರ ಕೈಗೆ ಹೋದಂತಾಯಿತು. ಅದರಿಂದ ಕೂಪನ್ನುಗಳನ್ನು ತಮ್ಮ ಉದ್ಯೋಗಿಗಳಿಗೆ ಹಂಚುವ ಕಂಪನಿಗೆ ಏನು ಲಾಭವೋ ಸರಿಯಾಗಿ ಗೊತ್ತಿಲ್ಲ. ಆದರೆ ಆ ಕೂಪನ್ನನ್ನು ಪ್ರಿಂಟ್ ಮಾಡಿ ದುಡ್ಡು ತೆಗೆದುಕೊಂಡು ಮಾರುವ ಸೊಡೆಕ್ಸ್‍ಹೊ ಅಥವಾ ಟಿಕೆಟ್ಟಿನವರಿಗಂತೂ ಸುಗ್ಗಿ.
ಸೊಡೆಕ್ಸ್‍ಹೊ ಬ್ಯುಸಿನೆಸ್ ಮಾಡೆಲ್ ಪ್ರಕಾರ ಅಂಗಡಿಯವರು ಜನರಿಂದ ಅವರು ಪಡೆದ ಕೂಪನ್ನುಗಳನ್ನು ಹಿಂದಿರುಗಿಸಿ ಹಣ ಪಡೆಯಬಹುದು. ಆದರೆ ಅದೆಷ್ಟು ಅಂಗಡಿಗಳ ಜನ ಹೀಗೆ ತಮಗೆ ಸೇರಬೇಕಾದ ಹಣವನ್ನು ಹಿಂದೆ ಪಡೆದಿದ್ದಾರೋ ಗೊತ್ತಿಲ್ಲ. ಏನಿಲ್ಲವೆಂದರೂ ಶೇ. ೨೫ ರಷ್ಟಾದರೂ ಜನರ/ಅಂಗಡಿಯವರ ಬಳಿ ಇದೆ ಎಂದುಕೊಳ್ಳಬಹುದಲ್ಲವೆ? ಒಂದೊಮ್ಮೆ ನಾಳೆಯೇ ಈ ಸೊಡೆಕ್ಸ್‍ಹೊ ಕಂಪನಿ ಕೈಕೊಟ್ಟು ಮುಚ್ಚಿಕೊಂಡು ಹೋದರೆ ನಮ್ಮ ಬಳಿ ಇರುವ ಕೂಪನ್ನನ್ನು ಏನು ಮಾಡಬೇಕು? ೨೫ ಲಕ್ಷ ರೂಪಾಯಿ ಏನೂ ಇಲ್ಲದೆಯೇ ಆ ಕೂಪನ್ ಕಂಪನಿಗೆ ಹೋದಂತಾಗಲಿಲ್ಲವೇ? ಹಾಗೇನಾದರೂ ಆದರೆ ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಾಗುತ್ತದೆಯೆ? ಸರ್ಕಾರ ಅದಕ್ಕೆ ಭರವಸೆ ಕೊಡುತ್ತದೆಯೇ?
ಈಗ ಖೋಟಾ ನೋಟಿನ ವಿಷಯಕ್ಕೆ ಬರೋಣ. ಯಾರೋ ಒಬ್ಬ ಖೋಟಾ ನೋಟನ್ನು ಪ್ರಿಂಟ್ ಮಾಡಿ ಜನರಿಗೆ ಕೊಡುತ್ತಾನೆ. ಜನ ಅದು ಕಪ್ಪು ಹಣವೆಂಬ ಪರಿವೆಯಿಲ್ಲದೆ ಮಾಮೂಲಿನಂತೆ ದಿನನಿತ್ಯ ಬಳಸಲಾರಂಭಿಸುತ್ತಾರೆ. ಅವರಿಗೇನೂ ನಷ್ಟವಿಲ್ಲ. ಅಕಸ್ಮಾತ್ ಖೋಟಾ ನೋಟ್ ಚಲಾವಣೆ ಮಾಡುತ್ತಿರುವಾಗ ಸಿಕ್ಕಿ ಬಿದ್ದರೆ ಆ ಕ್ಷಣದಲ್ಲಿ ಯಾರ ಬಳಿ ನೋಟಿರುತ್ತದೋ ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಕರಾ ಆಗುತ್ತಾನೆ. ಹಾಗಾದರೆ ಇಲ್ಲಿ ಲಾಭವಾಗಿದ್ದು ಯಾರಿಗೆ? ಪ್ರಿಂಟ್ ಮಾಡಿದ ವ್ಯಕ್ತಿಗೆ ತಾನೇ?
ನೋಡಲು ಖೋಟಾ ನೋಟು ನಿಜವಾದ ನೋಟನ್ನು ಹೋಲುತ್ತದೆ. ಆದರೆ ಈ ಮೀಲ್ ಪಾಸುಗಳು ಹೋಲುವುದಿಲ್ಲ. ಇದನ್ನು ಬಿಟ್ಟು ಬೇರೆ ಏನಾದರೂ ವ್ಯತ್ಯಾಸ ನಿಮಗೆ ಕಾಣುತ್ತದೆಯೇ?
ಭಾನುವಾರ, ಜೂನ್ 29, 2008
ಬುಧವಾರ, ಜೂನ್ 18, 2008
ಅಗ್ನಿ ಜಂಬೂಕ - ಬೆಂಕಿ ನರಿ - ಫೈರ್ ಫಾಕ್ಸ್ !!
ಬೆಂಕಿನರಿಯ (Firefox) ಮೂರನೆಯ ಆವೃತ್ತಿ ಬಂದಿದೆ. ನೋಡಲು ಚೆನ್ನಾಗಿದ್ದು, ಬಳಸಲು ಸುಲಭವಾಗಿರುವುದರ ಜೊತೆ ಗಮನಾರ್ಹ ಬದಲಾವಣೆಗಳನ್ನೂ ತಂದಿದೆ.
ಅಷ್ಟೇ ಹೇಳುವದಾದರೆ ನಾನೇಕೆ ಇದನ್ನು ಬರೆಯಬೇಕಾಗಿತ್ತು? ಕಾರಣವಿದೆ. ಹಿಂದಿನ ಆವೃತ್ತಿಯ firefox ನಲ್ಲಿ ಕೆಲವು ಬ್ಲಾಗುಗಳಲ್ಲಿ justify ಮಾಡಿರುತ್ತಿದ್ದ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿತ್ತು. ಆದರೆ ಈಗ ಬಂದಿರುವ ಈ ಮೂರನೆಯ ಆವೃತ್ತಿಯಲ್ಲಿ ಆ ದೋಷ ಪರಿಹಾರಗೊಂಡಿದೆ. ಹಾಗಾಗಿ ಕೆಲವು ಬ್ಲಾಗುಗಳಿಗಾಗಿ Internet Explorer ಗೆ ಹೋಗುವ ಅಗತ್ಯ ಈಗಿಲ್ಲ.
ಬೆಂಕಿನರಿಗೆ ಜಯವಾಗಲಿ! ಆಗ್ ಲೋಮಡೀ ಕೀ ಜೈ!! ಜಯತು ಅಗ್ನಿ ಜಂಬೂಕಃ !!!

ನಾನೇನು ಹೇಳಲು ಬಯಸುತ್ತಿದ್ದೇನೆಂದರೆ, ನೀವು ಹಿಂದಿನ ಆವೃತ್ತಿಯನ್ನು ಉಪಯೋಗಿಸುತ್ತಿದ್ದಲ್ಲಿ ಈ ಪರಿಚ್ಛೇದವನ್ನು ಓದುವುದು ಕಷ್ಟ. ಇದನ್ನು ಅನುಭವಿಸಿ ಅಥವಾ ಈಗಲೇ firefox ಅನ್ನು download ಮಾಡಿಕೊಳ್ಳಿ.
ಬೆಂಕಿನರಿಗೆ ಜಯವಾಗಲಿ! ಆಗ್ ಲೋಮಡೀ ಕೀ ಜೈ!! ಜಯತು ಅಗ್ನಿ ಜಂಬೂಕಃ !!!
ಮಂಗಳವಾರ, ಮೇ 27, 2008
ನಿರ್ಣಯ
ಇಂದು ಮಿಂಚಂಚೆಯಲ್ಲಿ ಬಂದ ಒಂದು ಕಥೆಯನ್ನು ಇಲ್ಲಿ ಬರೆಯುತ್ತಿದ್ದೇನೆ.
ಒಂದು ಸಣ್ಣ ಪಟ್ಟಣದಲ್ಲಿ ಒಬ್ಬನು ಒಂದು ಮದ್ಯದಂಗಡಿಯನ್ನು (ಬಾರ್) ತೆರೆಯಲು ನಿರ್ಧರಿಸಿದ. ಆತ ತನ್ನ ಅಂಗಡಿಗೆ ಆಯ್ದುಕೊಂಡಿದ್ದ ಸ್ಥಳ ಒಂದು ದೇವಸ್ಥಾನದ ಎದುರಿನಲ್ಲಿತ್ತು. ಸಹಜವಾಗಿಯೇ ಇದು ಆ ದೇವಸ್ಥಾನದ ಆಡಳಿತ ಮಂಡಳಿಯ ಹಾಗೂ ಭಕ್ತರ ವಿರೋಧಕ್ಕೆ ಕಾರಣವಾಯಿತು. ಅವನ ಅಂಗಡಿಯನ್ನು ಮುಚ್ಚಿಸಬೇಕೆಂದು ಪ್ರತಿಭಟನೆಯೂ, ಅವನ ವ್ಯಾಪಾರಕ್ಕೆ ಹಾನಿಯಾಗಲೆಂದು ಪ್ರಾರ್ಥನೆಗಳೂ ಪ್ರಾರಂಭವಾದವು.
ದಿನಗಳುರುಳಿದವು. ಪಟ್ಟು ಬಿಡದ ಆ ವ್ಯಕ್ತಿಯ ಅಂಗಡಿಯು ಕಟ್ಟಿ ಮುಗಿಯುವ ಹಂತಕ್ಕೆ ಬಂದಿತ್ತು. ಅಂಗಡಿ ತೆರೆಯಲು ಇನ್ನು ಸ್ವಲ್ಪ ದಿನಗಳು ಉಳಿದಿವೆ ಎನ್ನುವಾಗ ಬಲವಾದ ಸಿಡಿಲು ಬಡಿದು ಆ ಕಟ್ಟಡ ಧ್ವಂಸವಾಯಿತು.
ದೇವಸ್ಥಾನದ ಜನರು ತಮ್ಮ ಅಭೀಷ್ಟ ಈಡೇರಿದವರಂತೆ ಕಂಡು ಬಂದರು. ಆದರೆ ಅವರ ಸಂತೋಷ ಅಲ್ಪಕಾಲದ್ದಾಗಿತ್ತು. ಆ ವ್ಯಕ್ತಿ ದೇವಸ್ಥಾನದ ಮಂಡಳಿಯ ಮೇಲೆ ಮೊಕದ್ದಮೆ ದಾಖಲಿಸಿದ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ದೇವಸ್ಥಾನದವರ ಸಾಂಘಿಕ ಪ್ರಾರ್ಥನೆಯೇ ತನ್ನ ಅಂಗಡಿಯ ನಾಶಕ್ಕೆ ಕಾರಣವೆಂಬುದು ಅವನ ಆಪಾದನೆಯಾಗಿತ್ತು.
ನ್ಯಾಯಾಲಯದ ಪ್ರಶ್ನೆಗೆ ಉತ್ತರವಾಗಿ ದೇವಾಲಯದ ಮಂಡಳಿಯು ಈ ಪ್ರಕರಣಕ್ಕೆ ತಾನು ಹೊಣೆಯಲ್ಲವೆಂದೂ, ತಮ್ಮ ಪ್ರಾರ್ಥನೆಗಳಿಗೂ ಆ ಕಟ್ಟಡದ ನಾಶಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ವಾದಿಸಿತು. ಹೀಗೆ ಬಂದ ವಾದ-ಪ್ರತಿವಾದಗಳೆರಡನ್ನೂ ಅಭ್ಯಸಿಸಿದ ನ್ಯಾಯಾಧೀಶರ ತೀರ್ಪು ಹೀಗಿತ್ತು:
ಈ ಕಥೆಯನ್ನು ಕೇಳಿದರೆ ನಿಮಗೇನೆನಿಸುತ್ತದೆ?
*****

ಈ ಪ್ರಕರಣದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಆದರೆ ದಾಖಲೆಗಳ ಮೂಲಕ ತಿಳಿದುಬರುವುದೇನೆಂದರೆ ಇಲ್ಲಿ ಇರುವವರು ಇಬ್ಬರು: ಪ್ರಾರ್ಥನೆಯ ಸಾಮರ್ಥ್ಯದಲ್ಲಿ ಬಲವಾಗಿ ನಂಬಿರುವ ಅಂಗಡಿಯ ಮಾಲೀಕ ಹಾಗೂ ಅದರಲ್ಲಿ ಒಂದಿನಿತೂ ನಂಬಿಕೆಯಿರದ ದೇವಾಲಯದ ಮಂದಿ.
*****
ಈ ಕಥೆಯನ್ನು ಕೇಳಿದರೆ ನಿಮಗೇನೆನಿಸುತ್ತದೆ?
ಸೋಮವಾರ, ಮೇ 26, 2008
ಶನಿವಾರ, ಮೇ 3, 2008
ಜೋಗದ ಸಿರಿ ಬೆಳಕಿನಲ್ಲಿ ಮಬ್ಬಾದ ಜಲಪಾತ
ವಿಶ್ವದ ಅತಿ ಎತ್ತರದ ಜಲಪಾತ ಯಾವುದು ಎಂದು ಯಾರನ್ನಾದರೂ ಕೇಳಿ ನೋಡಿ. ಬಹುತೇಕ ಜನರು ಏಂಜೆಲ್ ಎಂದು ಹೇಳುತ್ತಾರೆ. ಅದೇ ಒಬ್ಬ ಭಾರತೀಯನನ್ನುಈ ದೇಶದ ಅತಿ ಎತ್ತರದ ಜಲಪಾತ ಯಾವುದೆಂದು ಕೇಳಿ. ನಿಮಗೆ ಸರಿ ಉತ್ತರ ನೀಡುವವರು ಸಾವಿರಕ್ಕೊಬ್ಬರು ಸಿಕ್ಕರೂ ನೀವು ಅದೃಷ್ಟವಂತರೇ. ಇದೇನಪ್ಪ ಹೀಗೆ ಹೇಳ್ತಿದೀನಿ ಅಂದ್ಕೊಂಡ್ರಾ? ನಮ್ಮ ಕರ್ನಾಟಕದವ್ರಿಗೆನೋ ಗೊತ್ತಿರಬಹುದು. ಆದರೆ ನಾನು ಹೇಳಿದ್ದು ಭಾರತೀಯರ ಬಗ್ಗೆ. ಕರ್ನಾಟಕದವ್ರಲ್ವ, ನೀವೇ ಹೇಳಿ, ಯಾವುದು ಆ ಜಲಪಾತ? ಆಹ ಇದೆಂಥ ಪ್ರಶ್ನೆ ಅಷ್ಟು ಪ್ರಸಿದ್ಧ ಜಲಪಾತ ನಂಗೊತ್ತಿಲ್ದೆ ಏನು ಅಂತಿದೀರ? ಇರ್ಲಿ ಹೇಳ್ಬಿಡಿ... ಊಹುಂ ಕೇಳ್ಲಿಲ್ಲ.. ಸ್ವಲ್ಪ ಜೋರಾಗಿ ಹೇಳಿ... ಆಂ.. ಜೋಗ್ ಫಾಲ್ಸ್ ಅಂದ್ರಾ?
ಎಂಥ ಮಧುರ ಗೀತೆ ಅಲ್ವ? ಹಮ್.. ಅದಿರ್ಲಿ, ನೀವ್ ಹೇಳಿದ ಉತ್ತರ ತಪ್ಪು! ಅದ್ಕೇ ಹೇಳಿದ್ದು ಸಾವಿರಕ್ಕೊಬ್ಬರೂ ಸಿಗಲ್ಲ ಅಂತ. ಜೋಗ ನೋಡಕ್ಕೆ ಸುಂದರವಾಗಿರಬಹುದು, ಜಗತ್ಪ್ರಸಿದ್ಧ ಇರಬಹುದು, ಅದರ ಬಗ್ಗೆ ಕೆ.ಎಸ್. ನಿಸ್ಸಾರ್ ಅಹಮದ್ ಅವರು ಅದ್ಭುತವಾಗಿ ವರ್ಣಿಸಿ ಕವಿತೆ ಬರ್ದಿರಬಹುದು, ಮುಂಗಾರು ಮಳೆಯಲ್ಲಿ ಅಭೋ ಎನಿಸುವಂತೆ ಚಿತ್ರಿಸಿರಬಹುದು. ಹಾಗಂತ ಅದೇ ಎತ್ತರದ್ದು ಅನ್ನೋಕಾಗುತ್ತಾ? ನೀವೇ ಹೇಳಿ.
ಜೋಗ ಅಲ್ದೇ ಹೋದ್ರೆ ಮತ್ತಿನ್ಯಾವ ಜಲಪಾತ ಅದು ಅಂತಿದೀರಾ? ಹಾಗೆ ಬನ್ನಿ ದಾರಿಗೆ; ಅದರ ಹೆಸರು ಕುಂಚಿಕಲ್ ಜಲಪಾತ ಅಂತ, ನಂಗೂ ಗೊತ್ತಿರ್ಲಿಲ್ಲ; ಹೀಗೇ ಗೂಗ್ಲಿಂಗ್ ಮಾಡ್ತಿರ್ಬೇಕಾದ್ರೆ ಸಿಗ್ತು. ಕೆಟ್ಟ ಕುತೂಹಲ ನೋಡಿ, ಮತ್ತಷ್ಟು ವಿವರ ಹುಡುಕಿದೆ. ವಿಕಿಪೀಡಿಯಾದಲ್ಲಿ ಆಗುಂಬೆಯ ಹತ್ರ ಇದೆ, ವರಾಹಿ ನದಿಯ ಜಲಪಾತ ಅಂತ ಗೊತ್ತಾಯ್ತು. ಮ್ಯಾಪ್ ನೋಡಿದೆ. ಹೊಸಂಗಡಿ ಮತ್ತು ಮಾಸ್ತಿಕಟ್ಟೆ ಮಧ್ಯೆ ಎಲ್ಲೋ ಬರುತ್ತೆ ಅಂತ ತಿಳೀತು. ಹಾಗೆ ಒಂದು ಫೋಟೋ ಇದ್ರೆ ನೋಡೋಣ ಅಂತ ಗೂಗಲ್ ಇಮೇಜ್ ಸರ್ಚ್ ಮಾಡಿದ್ರೆ ಹೇಳ್ಕೊಳ್ಳಕ್ಕಾದ್ರೂ ಒಂದೇ ಒಂದು ಫೋಟೋ ಸಿಗ್ಬಾರ್ದಾ?? (ನನ್ನದೊಂದು ವಿನಂತಿ: ಕುಂಚಿಕಲ್ ಜಲಪಾತದ ಚಿತ್ರ ನಿಮ್ಮಲ್ಲಿ ಯಾರ ಬಳಿಯಾದರೂ ಇದ್ದರೆ ದಯವಿಟ್ಟು ವಿಕಿಪೀಡಿಯಾದಲ್ಲಿ ಸೇರಿಸಿ)
ಹೋಗಲಿ, ಇದಕ್ಕೆ ಕಾರಣ ಏನಿರಬಹುದು? ೧೪೯೩ ಅಡಿ ಎತ್ತರದಿಂದ ಧುಮ್ಮಿಕ್ಕುವ ಭಾರತದ ಅತಿ ಎತ್ತರದ ಜಲಪಾತದ ಹೆಸರನ್ನೇ ಎಷ್ಟೋ ಜನ ಕೇಳಿಲ್ಲ ಅಂದ ಮೇಲೆ ನಮ್ಮ ಸರ್ಕಾರ ಏನ್ ಮಾಡ್ತಿದೆ? ಜೋಗಕ್ಕಾದ್ರೆ ಸುಮಾರು ೧ ಕಿಲೋಮೀಟರ್ ದೂರದವರೆಗೆ ರಾಷ್ಟ್ರೀಯ ಹೆದ್ದಾರಿ ಇದೆ. ಕುಂಚಿಕಲ್ಲಿಗೆ? ಮೊದಲೇ ಘಾಟಿ ಹತ್ರ ಇರೋ ಜಾಗ, ಅಂಥದ್ರಲ್ಲಿ ರಸ್ತೆ ಬೇರೆ ಸರಿ ಇಲ್ಲ ಅಂದ್ರೆ ಯಾರ್ ಹೋಗ್ತಾರೆ ಹೇಳಿ? ಇನ್ನು ಚಾರಣಕ್ಕೆ ಹೋಗುವವರಿಗಾದರೂ ಆ ಸ್ಥಳದ ಬಗ್ಗೆ ಮಾಹಿತಿ ಬೇಡವೆ? ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ದೃಷ್ಟಿಗೆ ಇನ್ನೂ ಈ ಕುಂಚಿಕಲ್ ಜಲಪಾತ ಬಿದ್ದಿಲ್ವೆ? ನಮ್ಮ ಸುತ್ತಮುತ್ತಲಿನ ಸ್ಥಳಗಳು ನಮಗೇ ಗೊತ್ತಿಲ್ಲದಿದ್ದರೆ ಇತರರಿಗೆ ತಿಳಿಯುವುದಾದರೂ ಹೇಗೆ? ಜೋಗದ ಸಿರಿ ಬೆಳಕಿನಲ್ಲಿ ಇಂಥ ಎಷ್ಟೋ ಜಲಪಾತಗಳು ಮಬ್ಬಾಗಿವೆ. ಇಷ್ಟು ಸುಂದರ ಪರಿಸರವನ್ನು ಇಲ್ಲೇ ಇಟ್ಟುಕೊಂಡು ಪ್ರವಾಸಕ್ಕೆಂದು ಯೂರೋಪ್, ಅಮೇರಿಕಾ, ಸ್ವಿಝರ್ಲೆಂಡ್ ಗೆ ಹೋಗಿ ಬರುವ ಐಷಾರಾಮಿಗಳಿಗೆ ಏನು ಹೇಳಬೇಕು? ಹಿತ್ತಲ ಗಿಡ ಮದ್ದಲ್ಲ ಎಂಬುದು ಸುಳ್ಳಲ್ಲ! ಏನಂತೀರಾ?
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)