ನಕ್ಷತ್ರಗಳು ಮಿನುಗುತ್ತಿವೆ
ತನ್ನ ಸುತ್ತ ಜೀವ ತುಂಬಿಸಿ
ಹಲವು ಭೂಮಿಗಳು ನಲಿದಿವೆ
ನೂರು ನೆನಪುಗಳ ಕೂಡಿಸಿ
ತಾರೆಗಳಿಗೂ ಮುಪ್ಪಾವರಿಸಿದೆ
ನಲಿವುಗಳು ನೆನಪುಗಳಾಗಿವೆ
ಸಣ್ಣ ತಾರೆಗದು ಸಿಡಿಯುವ ಚಕ್ರ
ದೊಡ್ಡ ನಕ್ಷತ್ರವಿನ್ನು ಕಪ್ಪು ರಂದ್ರ
ಕಪ್ಪುರಂದ್ರವದು ಬಹು ಸಾಂದ್ರ
ಭಾವನೆಗಳೂ ಹೊರನುಸುಳವಿನ್ನು
ಕಪ್ಪು ಗೋರಿಗಳು ಜಗಕೆ ನಿರ್ಜೀವ
ಆದರದಕೆ ತನ್ನೊಳಗೊಂದು ವಿಶ್ವ
ಇಲ್ಲಿ ಕಾಣುವುದೆಲ್ಲವೂ ಸಾಪೇಕ್ಷ
ಆದರೆ ಇರುವುದೆಲ್ಲವೂ ನಿರಪೇಕ್ಷ
ಕಪ್ಪುಗೋರಿಗಳೂ ಇಲ್ಲಿ ಸಾಯುತ್ತಿವೆ
ಭಾವಗಳು ವಿಕಿರಣವಾಗಿ ನಶಿಸುತ್ತಿವೆ
ತನ್ನ ಸುತ್ತ ಜೀವ ತುಂಬಿಸಿ
ಹಲವು ಭೂಮಿಗಳು ನಲಿದಿವೆ
ನೂರು ನೆನಪುಗಳ ಕೂಡಿಸಿ
ತಾರೆಗಳಿಗೂ ಮುಪ್ಪಾವರಿಸಿದೆ
ನಲಿವುಗಳು ನೆನಪುಗಳಾಗಿವೆ
ಸಣ್ಣ ತಾರೆಗದು ಸಿಡಿಯುವ ಚಕ್ರ
ದೊಡ್ಡ ನಕ್ಷತ್ರವಿನ್ನು ಕಪ್ಪು ರಂದ್ರ
ಕಪ್ಪುರಂದ್ರವದು ಬಹು ಸಾಂದ್ರ
ಭಾವನೆಗಳೂ ಹೊರನುಸುಳವಿನ್ನು
ಕಪ್ಪು ಗೋರಿಗಳು ಜಗಕೆ ನಿರ್ಜೀವ
ಆದರದಕೆ ತನ್ನೊಳಗೊಂದು ವಿಶ್ವ
ಇಲ್ಲಿ ಕಾಣುವುದೆಲ್ಲವೂ ಸಾಪೇಕ್ಷ
ಆದರೆ ಇರುವುದೆಲ್ಲವೂ ನಿರಪೇಕ್ಷ
ಕಪ್ಪುಗೋರಿಗಳೂ ಇಲ್ಲಿ ಸಾಯುತ್ತಿವೆ
ಭಾವಗಳು ವಿಕಿರಣವಾಗಿ ನಶಿಸುತ್ತಿವೆ
3 ಕಾಮೆಂಟ್ಗಳು:
ಭಾವರಂದ್ರದ ಭಾವವಂತೂ ಸುಂದರ...ಭಾವನೆಗಳೂ ಹೊರನುಸುಳವಿನ್ನು... (ಬಹುವಚನಕ್ಕೆ ತಕ್ಕ ಕ್ರಿಯಾ ಬಹುವಚನ..ಬರಬೇಕೇನೋ...ನನ್ನ ಅನುಮಾನ).. ಭೌತಶಾಸ್ತ್ರದ ಉತ್ತಮ ಕವಿತಾ ವಿವರಣೆ... ಬ್ಲಾಕ್ ಹೋಲ್, ಮಿಲ್ಕಿವೇ, ಎಲ್ಲಾ...
ಎರಡು ವರುಷಗಳ ನಂತರ ಬಾಳದೋಣಿಯಲ್ಲಿ ಮತ್ತೆ ಪಯಣಿಸುತ್ತಿದ್ದೇನೆ. ಧನ್ಯವಾದಗಳು. ಪುನರಾಗಮನಕ್ಕಾಗಿ ಬೃಹತ್ ವಿಶ್ವವನ್ನೇ ಆಯ್ದುಕೊಂಡಿದ್ದೀರಿ. ಸುಂದರವಾದ ಭಾವನೆ. ಆದರೆ, ಜಲನಯನರ ಅನುಮಾನಕ್ಕೆ ನಾನೂ ಸಹಮತನಿದ್ದೇನೆ. (ಅವರದು ಎಷ್ಟೆಂದರೂ ವಿಜ್ಞಾನಿಯ ಸೂಕ್ಷ್ಮ ಕಣ್ಣು!)
ಜಲನಯನ, ಸುನಾಥರಿಗೆ ಧನ್ಯವಾದಗಳು... ತಪ್ಪನ್ನು ಸರಿಪಡಿಸಿದ್ದೇನೆ....
ತಮಾಷೆಗಾಗಿ:
ಭಾವರಂದ್ರದ ಸ್ನೇಹಪರಿದಿಯೊಳಗೆ (event horizon) ಭಾವನೆಗಳು ತನ್ನ ಗುರುತನ್ನು ಕಳಚಿ ಏಕೀಕರಣಗೊಂಡಿದ್ದರಿಂದ(singularity) ಬಹುವಚನದಿಂದ ಮುಕ್ತವಾಗಿದದೆಯೆಂದು ವಾದಿಸಬಹುದು...
ಕಾಮೆಂಟ್ ಪೋಸ್ಟ್ ಮಾಡಿ