ಸೋಮವಾರ, ಏಪ್ರಿಲ್ 23, 2012

ಹಳೇ ಮಳೆ

ಬಿಸಿಗಾಲದಲ್ಲಿ ಖಗ ನೀಲದಲ್ಲಿ
ಹಿಂಡಾಗಿ ಬಂತು ಮೋಡ
ಮಳೆ ಬರುವುದೆಂಬ ಹೊಸ ಆಸೆಯೊಂದು
ಮೂಡಿತ್ತು ಮನದಿ ನೋಡ

ಕರಿಮೋಡ ಸುತ್ತ ಬರೆದಾನ ಬೆಳ್ಳಿ
ಗೆರೆಯಲ್ಲಿ ಸೂರ್ಯ ಚಿತ್ರ
ಮನೆಯಲ್ಲೆ ನಿಂತು ಸೊಬಗನ್ನ ನೋಡಿ
ನಲಿದಿತ್ತು ಮಗುವು ಮಿತ್ರ

ಕೋಲ್ಮಿಂಚಿನಾಟ ನೋಡುತ್ತ ಕಂದ
ಕೇಳಿತ್ತು ಗುಡುಗು ಸಿಡಿಲ
ಹೌಹಾರಿ ಬೆದರಿ ಕ್ಷಣದಲ್ಲಿ ತಾನು
ಸೇರಿತ್ತು ತಾಯಿ ಮಡಿಲ

ಬಾನನ್ನು ತೊರೆದು ಭುವಿಯತ್ತ ಹೊರಟು
ಸುರಿದಿತ್ತು ಮೊದಲ ಮಳೆಯು
ನೀರಲ್ಲಿ ಮಿಂದು ನೆಲವೆಲ್ಲ ನೆನೆದು
ಪಸರಿತ್ತು ಕಂಪ ಇಳೆಯು

6 ಕಾಮೆಂಟ್‌ಗಳು:

prashasti ಹೇಳಿದರು...

ಚೆಂದಿದ್ದೋ ಹರೀಶಣ್ಣ.. ನೆನ್ನೆ ಯಕ್ಷಗಾನ ನೋಡಿ ಮತ್ತೆ ಹಳೆ ಲಯ ನೆನ್ಪಾತನಾ? .. ಒಳ್ಳೇ ಲಯದಲ್ಲಿದ್ದೆ. ಸುಮಾರು ಸಮಯ ಆದ ಮೇಲೆ ಬರದಿದ್ದು ಓದಿ ಖುಷಿ ಆತು :-)

sunaath ಹೇಳಿದರು...

ಪ್ರಾಸಬದ್ಧವಾದ ಹಾಗು ಭಾವಪೂರ್ಣವಾದ ಈ ಕವನವನ್ನು ಓದಿ ಖುಶಿಯಾಯಿತು. ಇನ್ನಿಷ್ಟು ಇಂತಹ ರಚನೆಗಳು ಬರಲಿ.

Lakshmi Avina ಹೇಳಿದರು...

ಇಲ್ಲಿನ ಪ್ರತಿ ದಿನದ ಮಳೆಯಿಂದ ಬೇಸತ್ತಿದ್ದ ನನಗೆ ನಿಮ್ಮ ಮಳೆಯ ಕವನ ಬೆಂಗಳೂರಿನ ಮಣ್ಣಿನ ವಾಸನೆ ತರಿಸಿದೆ. ಇಲ್ಲಿನ ಮಳೆ ಸಹ್ಯವಾಗಿಸಿದೆ. ಧನ್ಯವಾದಗಳು.

Avinash Siddeshware ಹೇಳಿದರು...

ಕವನ ಚೆನ್ನಾಗಿ ಮೂಡಿ ಬಂದಿದೆ. ಕವಿ ಬೇಂದ್ರೆಯವರ ಪ್ರಭಾವನಾ?

ಶ್ರೀಪಾದು ಹೇಳಿದರು...

ಚನಾಗಿದ್ದು. ಪದ್ಯಕ್ಕೆ ಮಾತ್ರೆ ತಿನ್ನಿಸ್ದಂಗ್ ಇದ್ದಪ ;)

Unknown ಹೇಳಿದರು...

ತುಂಬಾ ಚೆನ್ನಾಗಿದೆ.. ಇಷ್ಟ ಆಯಿತು. :-)