ಸೋಮವಾರ, ಜನವರಿ 2, 2012

ಜೀವನ ರೇಖೆ

ಹಲವು ರೇಖೆಗಳನು ಗೀಚಿ
                 ಮರಳಿ ಅಳಿಸಿ ಹಾಕಿದೆ,
ಹಲವು ಕನಸುಗಳನು ಕಂಡು
                 ನನಸ ಮರೆತು ಜಾರಿದೇ ||

ಮೊದಲ ಮಾತು ಮೊದಲ ಕನಸು
                 ಮನದಲಿನ್ನು ಉಳಿಯಿತೇ,
ಅದಕೆ ಏನೋ ಇಂದು ಮನವು
                 ನಿನ್ನ ಕಡೆಯೇ ಜಾರಿದೇ||

ನಲಿವ ಹಾದಿಯಲ್ಲಿ ನಾನು
                ನಗದೆ ಹೋದೆನಲ್ಲವೇ,
ನಿನ್ನ ಪ್ರೀತಿಯಲ್ಲಿ ನಾನು
                ಕರಗಿ ಹೋದೆನಲ್ಲವೇ||

ನಲ್ಲೆ ನಿನ್ನ ಕೊರಗು ಎನಗೆ
                 ಕನಸಿನಲ್ಲೂ ಕಾಡಿತು,
ಅದಕೆ ಏನೋ ಇಂದು ನಲಿವ
                 ನನಸನೊಂದು ನೀಡಿದೇ||

ನಲ್ಲೆ ಏಕೋ ಇಂದು ಮನವು ನಿನ್ನ ಕಡೆಯೇ ಜಾರಿದೇ..
                 

5 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ನಿನಗೆ ವಿಯೆಟ್ನಾಮಲ್ಲಿ ಯಾವ ನಲ್ಲೆ ಸಿಕ್ಕಿದ್ಲೋ?!

ಜಲನಯನ ಹೇಳಿದರು...

ಕನಸ ಕಾಣೊದು ಅದನ್ನ ನನಸಾಗಿಸೋ ಛಲ ಎಲ್ಲಾ ಇರ್ಬೇಕು ಆದ್ರೆ ಕನಸು ನನಸಾಗ್ಲಿಲ್ಲವಲ್ಲಾ ಅನ್ನೋ ಭಾವ ಮತ್ತೆ ಕನಸು ಕಾಣೋ ಹಂಬಲಕ್ಕೆ ಅಡ್ದ ಬರಬಾರದು...ಬಹಳ ಚನ್ನಾಗಿದೆ ನಿಮ್ಮ ಕನಸು. (ಓಹ್ ಇದು ನೀವು ವಿಯಟ್ನಾಂ ನಲ್ಲಿ ಬರೆದಿದ್ದಾ??)...ಹಹಹಹ

sunaath ಹೇಳಿದರು...

ಪ್ರಭಾವಶಾಲಿಯಾದ ಸರಾಗ ಭಾವಗೀತೆ. ನಿಮ್ಮ ಭಾವಕ್ಕೆ ತಕ್ಕ ಫಲ ಸಿಗಲಿ, ಹೊಸ ವರ್ಷವು ಶುಭದಾಯಕವಾಗಲಿ!

vishutk ಹೇಳಿದರು...

ಹರೀಶ್, ಹಾಗೇನಿಲ್ವೋ.. ಕವನ ಬರೆಯೋಕೆ ಪ್ರತ್ಯಕ್ಷ್ವವಾಗಲ್ಲದಿದ್ರು ಪರೋಕ್ಷವಗಿರೋ ಭಾವನೆಗಳ ಹಿಡಿತ ಮುಖ್ಯವಾಗಿರುತ್ತೆ ಅಸ್ಟೆ.

ಜಲನಯನರವರಿಗೂ ಹಾಗೂ ಸುನಾಥರವರಿಗೂ ಧನ್ಯವಾದಗಳು.

ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
:-)

ಈಶ್ವರ ಹೇಳಿದರು...

ಚೆನ್ನಾಗಿದೆ ಕವನ :)