ಸೋಮವಾರ, ಜನವರಿ 30, 2012

ಸ್ನೇಹ ಬಂಧ



ಮೌನಿಯಾದಾಗ
ಮಾತಾಗಿತ್ತು
ಒಂಟಿಯಾದಾಗ
ಜೊತೆಗಾರನಾಗಿತ್ತು
ದುಗುಡಗೊಂಡಾಗ
ಶಾಂತಗೊಳಿಸಿತ್ತು
ಆತುರಬಿದ್ದಾಗ
ತಡೆಹಿಡಿದಿತ್ತು
ಕೆಳಗೆ ಬಿದ್ದಾಗ
ಏಣಿಯಾಗಿತ್ತು
ಮೇಲೇರಿದಾಗ
ಬೆನ್ನು ತಟ್ಟಿತ್ತು
ಪ್ರತಿ ಕ್ಲಿಷ್ಟತೆಯಲೂ
ಜೊತೆಯಾಗಿತ್ತು
ಯಾರದೋ ವಕ್ರದೃಷ್ಟಿಗೆ
ಬಲಿಯಾಗಿತ್ತು
ನಿನ್ನ ನನ್ನಿಂದ ಮಾಡಿ ದೂರ
`ಸ್ನೇಹ ಬಂಧ ` ಕಳಚಿತ್ತು.

6 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಏನಾಯ್ತೋ ನಿನಗೆ?

Ittigecement ಹೇಳಿದರು...

ಚಂದದ ಸಾಲುಗಳು.....

ಸೋಮಶೇಖರ ಹುಲ್ಮನಿ ಹೇಳಿದರು...

ಹರೀಶ್ ....
ಇನ್ನು ಏನು ಆಗಿಲ್ಲ ಏನಾದ್ರು ಆದ್ರೆ ಹೇಳ್ತೀನಿ
ಸಿಮೆಂಟು ಮರಳಿನ ಮಧ್ಯೆ ರವರಿಗೆ ಧನ್ಯವಾದಗಳು

sunaath ಹೇಳಿದರು...

ಸ್ನೇಹದ ಬಗೆಗಿನ ಕಲ್ಪನೆ ಹಾಗು ಕವನ ಚೆನ್ನಾಗಿವೆ. ಆದರೆ ಏಣಿಯೇ ಬಿದ್ದು ಹೋಯಿತು ಅಂತೀರಲ್ಲ! ಪುನಃ ಜೋಡಿಸೋಕೆ ಪ್ರಯತ್ನಿಸಿ!

ಸೋಮಶೇಖರ ಹುಲ್ಮನಿ ಹೇಳಿದರು...

ಸುನಾಥರವರಿಗೆ ಧನ್ಯವಾದಗಳು

@spn3187 ಕನ್ನಡಿಗ ಶಿವಕುಮಾರ ನೇಗಿಮನಿ ಹೇಳಿದರು...

ಸ್ನೇಹದ ಬಂದ ದೂರಾದಾಗ......
...
http://spn3187.blogspot.in/