ಸೋಮವಾರ, ಮಾರ್ಚ್ 12, 2012

ಆಶಯ

ಜೀವನವೆಂಬ ನಾಟಕದಲ್ಲಿ
ನೀವು ನಟಿಸಿದ ಪಾತ್ರಗಳೆಷ್ಟೋ
ಪಾತ್ರದ ಭಾವನೆಗಳೆಷ್ಟೋ -
ಒಮ್ಮೆ ಅಳು, ಒಮ್ಮೆ ನಗು.
ಒಮ್ಮೆ ದುಃಖ, ಒಮ್ಮೆ ಸುಖ

ಜೀವನವೆಂಬ ನಾಟಕದಲ್ಲಿ
ನೀವು ನಟಿಸಬೇಕಾಗಿರುವ ಪಾತ್ರಗಳೆಷ್ಟೋ
ಪಾತ್ರದ ನಿರೀಕ್ಷೆಗಳೆಷ್ಟೋ -
ತುಂಬು ಪ್ರೀತಿ, ಸದಾ ನೆಮ್ಮದಿ.
ಗಟ್ಟಿ ನೆಲೆ, ಆಶಯದ ಸೆಲೆ

ಪಾತ್ರದ ಆಯ್ಕೆ ಸೂತ್ರದಾರನದ್ದು
ನಟಿಸುವ ಸಾಮರ್ಥ್ಯ ಮಾತ್ರ ನಿಮ್ಮದು
ಪಾತ್ರ ಯಾವುದೇ ಇರಲಿ
ರಂಗ ಯಾವುದೇ ಇರಲಿ
ನಿಮ್ಮ ಸಾಮರ್ಥ್ಯ ಎಂದೂ ಕುಗ್ಗದಿರಲಿ
ಯಶಸ್ಸಿನ ಗರಿ ಸದಾ ನಿಮ್ಮೊಂದಿಗಿರಲಿ

2 ಕಾಮೆಂಟ್‌ಗಳು:

sunaath ಹೇಳಿದರು...

ತುಂಬ ಮಹತ್ವದ ಆಶಯ. ಈ ತತ್ವವನ್ನು ಅನುಸರಿಸಿದರೆ, ಬದುಕು ಹಸನಾಗುವದರಲ್ಲಿ ಸಂಶಯವಿಲ್ಲ.

Lakshmi Avina ಹೇಳಿದರು...

ಅನಿಸಿಕೆಯನ್ನು ಹಂಚಿಕೊಂಡ ಸುನಾಥ್ ಅವರಿಗೆ ಧನ್ಯವಾದಗಳು