ತಿಂಗಳಿನ ಬೆಳಕಿನಲಿ ಮಧುಮಾಸ ರಾತ್ರಿಯಲಿ
ತಂಗಾಳಿ ಬೀಸಿಹುದು ನನ್ನ ನಲ್ಲೆ
ಅಂಗಾಂಗದೊಳಗೆಲ್ಲ ಅವಿತಿರುವ ಬಯಕೆಗಳು
ಕಂಗಳಲಿ ತೋರುತಿವೆ ನನ್ನ ನಲ್ಲೆ
ಹಾವಭಾವದಿ ಮೆರೆದು ಕುಡಿನೋಟದಲ್ಲೆನ್ನ
ತಿವಿಯದಿರು ನೀನೀಗ ಕಣ್ಣಿನಲ್ಲೆ
ತಾವರೆಯ ಮೊಗವನ್ನು ಈಗ ತಾನೇ ನೋಡಿ
ಸಾವರಿಸಿಕೊಂಡಿಹೆನು ನನ್ನ ನಲ್ಲೆ
ಸಲ್ಲಾಪ ಸರಸಗಳ ಮಳೆ ಹನಿಯು ಉದುರಿಹುದು
ಮೆಲ್ಲ ಮೆಲ್ಲನೆ ನಿನ್ನ ಮಾತಿನಲ್ಲೆ
ಮಲ್ಲಿಗೆಯ ಕಂಪಿನೊಳು ಮೈ ಮರೆತು ನಿನ್ನನ್ನು
ಪಲ್ಲಂಗ ಕಾದಿಹುದು ನನ್ನ ನಲ್ಲೆ
ಸ್ಫೂರ್ತಿ: ಈಶ್ವರ ಕಿರಣ್ ಭಟ್ ಅವರ "ಏಳೆನ್ನ ನಲ್ಲೆ" ಎಂಬ ಕವನ
ತಂಗಾಳಿ ಬೀಸಿಹುದು ನನ್ನ ನಲ್ಲೆ
ಅಂಗಾಂಗದೊಳಗೆಲ್ಲ ಅವಿತಿರುವ ಬಯಕೆಗಳು
ಕಂಗಳಲಿ ತೋರುತಿವೆ ನನ್ನ ನಲ್ಲೆ
ಹಾವಭಾವದಿ ಮೆರೆದು ಕುಡಿನೋಟದಲ್ಲೆನ್ನ
ತಿವಿಯದಿರು ನೀನೀಗ ಕಣ್ಣಿನಲ್ಲೆ
ತಾವರೆಯ ಮೊಗವನ್ನು ಈಗ ತಾನೇ ನೋಡಿ
ಸಾವರಿಸಿಕೊಂಡಿಹೆನು ನನ್ನ ನಲ್ಲೆ
ಸಲ್ಲಾಪ ಸರಸಗಳ ಮಳೆ ಹನಿಯು ಉದುರಿಹುದು
ಮೆಲ್ಲ ಮೆಲ್ಲನೆ ನಿನ್ನ ಮಾತಿನಲ್ಲೆ
ಮಲ್ಲಿಗೆಯ ಕಂಪಿನೊಳು ಮೈ ಮರೆತು ನಿನ್ನನ್ನು
ಪಲ್ಲಂಗ ಕಾದಿಹುದು ನನ್ನ ನಲ್ಲೆ
ಸ್ಫೂರ್ತಿ: ಈಶ್ವರ ಕಿರಣ್ ಭಟ್ ಅವರ "ಏಳೆನ್ನ ನಲ್ಲೆ" ಎಂಬ ಕವನ
17 ಕಾಮೆಂಟ್‌ಗಳು:
ಭರ್ಜರಿ ಕವನ ...ಹರಿಗೆ ಮದ್ವೆಗೆ ಕಾಲ ಪಕ್ವ ಆಯ್ದು
ಸುಂದರ ಕವನ...
ಶ್ರೀಪಾದರ ಅಭಿಪ್ರಾಯವೇ ನನ್ನದೂ ಕೂಡ..
ಮೇಲಿನ ೨ ಅಭಿಪ್ರಾಯಗಳಿಗೆ ನನ್ನ +೧
+ಸೂಪರ್ ಲೈಕ್
ಹರೀಶ್, ಕ್ರಿಸ್ಪ್ ಅಂಡ್ ಸ್ಟ್ರಾಂಗ್ ಹಪ್ಪಳ ತಿಂದಹಾಗಾಯ್ತು..
ನಲ್ಲೆಯ ಬಲ್ಲೆ
ಅವಳಂದಕಿಲ್ಲ ಎಲ್ಲೆ
ಚನ್ನಾಗಿದೆ ಪದಬಳಕೆ..
ಸೂಪರ್ !!!!
ಹರೀಶ,
It is very romantic!
ಹರೀಶ ಬೇಗ ಮದುವೆ ಆಗು ;)
ನನ್ನ ಹೆಸರು ಹಾಕಿದ್ದು ನಿನ್ನ ದೊಡ್ದತನ. ಈ ಕವನ ಸೂಪರ್. ಆದಿಪ್ರಾಸ ಮತ್ತೆ ಅಂತ್ಯಪ್ರಾಸ ಎರಡೂ ಚೆನ್ನಾಗಿದೆ.
ಸೂಪರ್ ಹರೀಶ್ ..
ಕೆ.ಎಸ್.ಎನ್.ಅವರನ್ನು ನೆನಪಿಸುವಂತ ಕವನ ಬರದಿದ್ದಕ್ಕೆ ಮನಸ್ಸಿಗೆ ಮುದ ಕೊಟ್ಟಿತು..ಇಂತಹ ಕವನಗಳು ಇನ್ನೂ ಬರಲಿ..ಹರೀಶ...
ಆ ನಲ್ಲೆ ....
ಯಾರೆ೦ದು ಕೇಳಬಹುದಲ್ಲವೇ
Super Harish.. Madve date tilsodu maribeda.. :-)
ಶ್ರೀಪಾದು, ಧನ್ಯವಾದ.. ಮದುವೆ ಇನ್ನೂ ದೂರ ಇದ್ದು .. :)
ಪ್ರಕಾಶಣ್ಣ, ಧನ್ಯವಾದ ಪ್ರಕಾಶಣ್ಣ.. ಶ್ರೀಪಾದು ಹೇಳಿದ್ದೆಲ್ಲ ಕೇಳಡ...
ತೇಜಸ್, ಮೇಲಿನ ಅಭಿಪ್ರಾಯವೇ ನಿನಗೂ :-) ಧನ್ಯವಾದ
ಆಜಾದ್ (ಜಲನಯನ) ಅವರೇ, ಕವನ ನಿಮಗಿಷ್ಟವಾಗಿದ್ದು ಸಂತೋಷ :)
ಮಂಜು, ಧನ್ಯವಾದ :)
ಸುನಾಥ ಕಾಕಾ, :) :)
ರಂಗ, ನೀನು ಎಷ್ಟಂದ್ರೂ ದೊಡ್ಡೋನು.. ಮೊದಲು ನೀನೇ ಆಗು :)
ಕಿರಣಣ್ಣ, ಈ ಕವನಕ್ಕೆ ಸ್ಫೂರ್ತಿ ನಿನ್ನ ಕವನ. ಹಾಗಾಗಿ ನಿನ್ನ ಇಲ್ಲಿ ನಿನ್ನ ಹೆಸರು ಹಾಕದು ನನ್ನ ಕರ್ತವ್ಯ :)
ಕವನ, ಅಷ್ಟು ದೊಡ್ಡ ಕವಿಗೆ ಹೋಲಿಸಿ ನನ್ನನ್ನು ಮುಜುಗರಕ್ಕೆ ಒಳಪಡಿಸಬೇಡಿ.. ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದ :)
ಲಕ್ಷ್ಮತ್ತೆ, ಖಂಡಿತ ಕೇಳಬಹುದು! ಗೊತ್ತಾದಾಗ ತಿಳಿಸಲಾಗುವುದು :P
ವಿಶು, ನೀನು ಮೊದಲು ಭಾರತಕ್ಕೆ ವಾಪಸ್ ಬಾ.. ಆಮೇಲೆ ದಿನಾಂಕ ನೋಡೋಣ :)
ವಾಹ್ !
ಸೂಪರ್ ಆಗಿದ್ದು ಹರೀಶ ! ಇದನ್ನು ಓದಿ ಖಂಡಿತಾ ಓದಿಬರಲೇ ಬೇಕು ಆ " ನಿನ್ನ ನಲ್ಲೆ " ! ಮಸ್ತ್ ಇದ್ದು !
ಧನ್ಯವಾದ ಚಿತ್ರಕ್ಕಾ :-)
ನಿನ್ನ ಕವನ ಹೊಗಳಲು ನನ್ನ ಭಾಷೆ ಬಡವಾಗಿದೆ ಹರೀಶ ....
ಯಾರಾದರು ಶ್ರೀಮಂತರು ಸಾಲ ಕೊಡಿ plz
ಚನಾಗಿದ್ದೋ ಹರೀಶಣ್ಣ
Nice one..
ಕಾಮೆಂಟ್ ಪೋಸ್ಟ್ ಮಾಡಿ