ಸೋಮವಾರ, ಆಗಸ್ಟ್ 29, 2011

ಜ್ಞಾನದ ಹರಿವು

ನಕ್ಷತ್ರಗಳ ಮೊತ್ತ
ಎಣಿಸಿದಷ್ಟು ನೋಡ

ಅಬ್ಧಿಯ ಆಳ
ಮುಳುಗಿದಷ್ಟು ನೋಡ

ಭೂಮಿಯ ವಿಸ್ತಾರ
ಅಗೆದಷ್ಟು ನೋಡ

ಆಕಾಶದ ಅಗಲ
ಅಳೆದಷ್ಟು ನೋಡ

ಜ್ಞಾನದ ಹರಿವು
ನಕ್ಷತ್ರಾಬ್ಧಿಭೂಮ್ಯಾಕಾಶ ನೋಡ

5 ಕಾಮೆಂಟ್‌ಗಳು:

ತೇಜಸ್ ಜೈನ್ Tejas jain ಹೇಳಿದರು...

ಕಡೆಯ ಸಾಲು ತುಂಬಾ ಇಷ್ಟವಾಯಿತು.. ಅನುಭವದ ಸಾಲುಗಳು ಚೆನ್ನಾಗಿ ಮೂಡಿವೆ...

sunaath ಹೇಳಿದರು...

ಸತ್ಯವಾದ ಮಾತನ್ನು ಸುಂದರವಾಗಿ ಕವನಿಸಿದ್ದೀರಿ.

vishutk ಹೇಳಿದರು...

ಅನುಭವದ ಸುಂದರವಾದ ಹೆಣಿಕೆ.

ಸೋಮಶೇಖರ ಹುಲ್ಮನಿ ಹೇಳಿದರು...

ಸುನಾಥರವರಿಗೆ ,ವಿಶು, ತೇಜು ಗೆ
ನನ್ನ ಧನ್ಯವಾದಗಳು

Harisha - ಹರೀಶ ಹೇಳಿದರು...

ಅನುಭವದ ಸಾರ .. ಇಂಗ್ಲಿಷಿನ sonnet ಥರ ಮೊದಲ ಎಲ್ಲ ಸೊಲ್ಲುಗಳ ಸಾರಾಂಶ ಕೊನೆಯದರಲ್ಲಿ ಬರೆದಿದ್ದು ಇಷ್ಟವಾಯ್ತು :)