ಸೋಮವಾರ, ಆಗಸ್ಟ್ 8, 2011

ಬರಬಾರದೇ ಒಮ್ಮೆ

ಬರಬಾರದೇ ಒಮ್ಮೆ
ಕಳೆದು ಹೋದ ನನ್ನ ಬಾಲ್ಯ
ತರಬಾರದೇ ಒಮ್ಮೆ
ಮೊಗದಿ ಮುಗ್ಧ ನಗುವಿನ ಲಾಸ್ಯ |ಪ|

ಮರ ಕೋತಿ ಕಣ್ಣಾ ಮುಚ್ಚಾಲೆ
ಕಳ್ಳ ಪೊಲೀಸ್ ರಾಜ ರಾಣಿ
ನಾಗರ ಪಂಚಮಿಗೆ ಉಯ್ಯಾಲೆ
ಮಳೆ ಬಂದರೆ ಕಾಗದ ದೋಣಿ |೧|

ಯಾರಿಗೆ ಬೇಕು ತೆಂಗಿನ ಕಾಯಿ
ಬೇಕಿದ್ದಿದ್ದು ಕೇವಲ ಕರಟ
ಬಯ್ತಾ ಇದ್ರೂ ತಂದೆ ತಾಯಿ
ಆಡ್ತಾ ಇದ್ದೆ ಲಗೋರಿ ಆಟ |೨|

ಇದ್ದರಾಯ್ತು ಬಾಲು ಬ್ಯಾಟು
ಇಲ್ದೇ ಹೋದರೆ ಚಿನ್ನಿ ದಾಂಡು
ಬೇಕೇ ಇಲ್ಲ ಗರಿಗರಿ ನೋಟು
ಅದು ಕೇವಲ ಕಾಗದ ತುಂಡು |೩|

6 ಕಾಮೆಂಟ್‌ಗಳು:

sunaath ಹೇಳಿದರು...

ಬಾಲ್ಯದ ಮಧುರ ನೆನಪುಗಳನ್ನು ಸುಂದರವಾಗಿ ಪೋಣಿಸಿದ್ದೀರಿ. ಮನಕ್ಕೆ ಮುದ ಕೊಡುವ ಗೀತ. ಅಭಿನಂದನೆಗಳು.

Harisha - ಹರೀಶ ಹೇಳಿದರು...

ಧನ್ಯವಾದಗಳು ಸುನಾಥ ಕಾಕಾ :-)

ಸೋಮಶೇಖರ ಹುಲ್ಮನಿ ಹೇಳಿದರು...

ಹರೀಶ
ನಂಗೆ ಬಾಲ್ಯದ ನೆನಪಿನ ಬಗ್ಗೆ ಇರೋ ಪದ್ಯಗಳಲ್ಲಿ ಇಷ್ಟವಾಗಿರೋದು ೨ ಪದ್ಯಗಳು
ಒಂದು ಸುಭಾದ್ರಕುಮಾರಿ ಚೌಹಾನ್ ರ ಬಾರ್ ಬಾರ್ ಆತೀ...... ಮತ್ತೊಂದು ಈಗ ನೀನ್ ಬರ್ದಿರೋದು !
superrrrrrrrrrrrrrrrrrrrrr

Harisha - ಹರೀಶ ಹೇಳಿದರು...

ಸೋಮ, ನನಗೆ ಈ ಕವನ ಬರೆಯೋದಕ್ಕೆ ಆ ಕವನವೂ ಕೂಡ ಒಂದು inspiration!
ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದ :-)

vishutk ಹೇಳಿದರು...

ಹರೀಶ್ ನನಗು ಸೋಮನ ಥರನೆ ಅನ್ಸಿದ್ದು. ಚೆನ್ನಾಗಿದೆ.

Harisha - ಹರೀಶ ಹೇಳಿದರು...

ಹಾಗಾದ್ರೆ ನಿಂಗೂ ಸೋಮಂಗೆ ಹೇಳಿದ್ನೇ ಹೇಳ್ತೀನಿ :-)

ಧನ್ಯವಾದ