ಭಾರತ ಮಾತೆಯ ಕೆಚ್ಚದೆಯ ಕರುಳ ಕುಡಿಗಳೇ, 
ಮನವ ಮಾತೃಭೂಮಿಗೆ ಮುಡಿಸಿ, 
ನೈಜ ಬದುಕ ಬಿಂಬಿಸುವ ಆಚರಣೆ ಎಲ್ಲಿಹುದು, 
ಸ್ವಂತ ಸಂಸ್ಕೃತಿಯ ಪರಿಭಾಷೆ ಎನಿಸುವ ನಡತೆ ಎಲ್ಲಿಹುದು, 
ಒಗ್ಗಟ್ಟ ಬಲವು ಮೆರೆಸುವ ಆ ಏಕಮತವೆಲ್ಲಿಹುದು, 
ಸಹನೆಯ ಸರಿಯಾದ ಅರ್ಥವೆಲ್ಲಿಹುದು, 
ಪ್ರಶ್ನಿಸು ನಿನ್ನನೊಮ್ಮೆ ನೀ,
ತಿರುಗಿ ನೋಡೊಮ್ಮೆ ವೀರ ಮನಗಳ ನಡೆದ ದಾರಿಯನು, 
ಗುರಿಯೊಂದೆ ಬದುಕಿನಲಿ, 
ಬಲವೊಂದು ಮುಷ್ಟಿಯಲಿ, 
ಕಠಿಣ ದಾರಿಯ ಕರಗಿಸಿ, 
ರಕ್ತದೋಕುಳಿಯ ಹರಿಸಿ, 
ಎಲ್ಲಿರುವರಲ್ಲಿಂದ ಸ್ವಂತ ಜೀವನ ಮರೆತು, 
ಸ್ವಾತಂತ್ರ ಪಡೆದ ವೀರ ಜನತೆಯರತ್ತ, 
ಈ ಮಾತೃಭೂಮಿಯ ಮುದ್ದಿನ ಕಂದಗಳತ್ತ. 
ಪ್ರಶ್ನಿಸೊಮ್ಮೆ ನಿನ್ನ ನೀ,
ಎಲ್ಲಿರುವೆವು ಇಂದು ನಾವು ಸ್ವಾತಂತ್ರ್ಯದ ಅರ್ಥದಲಿ...
 
 
4 ಕಾಮೆಂಟ್‌ಗಳು:
ಈ ಮಾತೃಭೂಮಿಯ ಮುದ್ದಿನ ಕಂದಮ್ಮಗಳಾಗಿ ನಾವು ಮಾಡಬೇಕಿರುವ ಕೆಲಸವನ್ನು
ನೆನೆಸುವ ಈ ದೇಶಭಕ್ತಿ ಗೀತೆ ಮನಮುಟ್ಟುವಂತೆ ಬಂದಿದೆ ....
ಸ್ವಾತಂತ್ರೋತ್ಸವದ ಶುಭಾಶಯಗಳು
ಹುರುಪು ತುಂಬುವ ಕವನ.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಅನ್ನೋ ಕವಿವಾಣಿ ನೆನಪಾಗ್ತಾ ಇದೆ :) :(
ಸೋಮು, ಸುನಾಥರವರಿಗೆ ಹಾಗೂ ಹರೀಶ್.. ಎಲ್ಲರಿಗೂ ಧನ್ಯವಾದಗಳೊಂದಿಗೆ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
ನನ್ನ ಸಣ್ಣ ಅನಿಸಿಕೆ.. ಯಾವಾಗ ನಾವು ಸ್ವಂತ ಶಕ್ತಿಯನ್ನು ಹೆಚ್ಚಿಸುತ್ತೆವೋ ಆಗ ದೇಶದ ಶಕ್ತಿ ಹೆಚ್ಚುತ್ತದೆ.
ಕಾಮೆಂಟ್ ಪೋಸ್ಟ್ ಮಾಡಿ