ನಮ್ಮೂರ ಜಾತ್ರೆಲ್ಲಿ ಕಪ್ಪಡರೋ ಹೊತ್ತಲ್ಲಿ
ನನಗಾಗಿ ಕಾದಿದ್ದು ನಿಜವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ
ರಥಬೀದಿ ಬದಿಯಲ್ಲಿ ಗೆಳತಿಯರ ಸಂದಲ್ಲಿ
ಕುಡಿನೋಟ ಬೀರಿದ್ದು ದಿಟವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ
ಮುಸ್ಸಂಜೆ ಮಬ್ಬಲ್ಲಿ ನಿನ್ನ ತುಟಿಯಂಚಲ್ಲಿ
ನನಗಲ್ಲಿ ಕಂಡಿದ್ದು ನಗುವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ
ಮರೆಯಾಗೋ ಮೊದಲಲ್ಲಿ ನಿನ್ನ ಕಣ್ಣಂಚಲ್ಲಿ
ಮಿಂಚಾಗಿ ಮೂಡಿದ್ದು ಒಲವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ
28 ಕಾಮೆಂಟ್ಗಳು:
ಕವನಕನ್ಯೆಯು ಒಲಿದಿಹಳು ನಿಮಗೆ,
ನಿಜದ ಕನ್ಯೆಯು ಕೂಡ ಒಲಿದಿರುವಳೆ?
ಹೌದೆಂದರಾ ಚೆಲುವೆ, ನಿಮ್ಮ ಜೊತೆಗೆ ನಾನೂ
ನಲಿಯುವೆನು, ಹರೀಶ, ಸರಿಯೆ?
ಹರೀಶ.
ಹೇಳಿ ಬಿಡು ಅವಳ್ಯಾರು ಚೆಲುವೆ ?
ವಿಳಾಸವನ್ನು ತಿಳಿದು ಬರುವೆ , ನಿನಗೆ ಕೊಡುವೆ !!!
ಚೆನಾಗಿದ್ದು ಬಿಡು !
ಅಯ್ಯೋ ಸುನಾಥ ಕಾಕ,
ಚೆಲುವೆ ಗಿಲುವೆ ಯಾಕ್ ಬೇಕ?
ಹಿಂಗೇ ಕವನ ಬರ್ಯಾಕ ..
ನಿಮ್ ಆಶೀರ್ವಾದ ಇದ್ರ ಸಾಕ :-)
ಚಿತ್ರಕ್ಕಾ.. ಜಾತ್ರೆಲ್ಲಿ ಸಿಕ್ಕಿದ್ರೆ ಯಾರು ಅಂತ ಹ್ಯಾಂಗೆ ಗೊತ್ತಾಗ್ತು?!
ತುಂಬಾ ಚೆನ್ನಾಗಿದೆ ಹರೀಶ್... ಸಕ್ಕತ್ ಇಷ್ಟವಾಯ್ತು
ದಿಲೀಪ, ಧನ್ಯವಾದ :-)
ಬರ್ತಾ ಇರು ಬ್ಲಾಗಿಗೆ..
ತುಂಬಾ ಚೆನಾಗಿದೆ ಪುಟ್ಟ! ಯಾರು ಆ ಬಾಲೆ ಅಂತ ತಿಳ್ಕೋ ಬಹುದಾ?? :-)
ಪುಟ್ಟಿ, ಕವನ ಮೆಚ್ಚಿದ್ದಕ್ಕೆ ಧನ್ಯವಾದ. ಆ ಬಾಲೆ ಯಾರು ಅಂತ ಹಾಗೆಲ್ಲ ಹೇಳಕ್ಕಾಗಲ್ಲ ;-)
Harish ಅವರೇ,
ಚೆನ್ನಾಗಿದೆ ನಿಮ್ಮ ಕವನ..
ಚೆಲುವೆ ಎಂದಿರುವಲ್ಲೆಲ್ಲ.. "ಚೆಲುವ".. ಎಂದು ಓದಿಕೊಂಡು ನಾನು ನಲಿಯುತ್ತೇನೆ ..:-)
ಪುಟ್ಟ, ಇದು ಸರಿ ಇಲ್ಲ ... ನೀನು ನನಗೆ ಹೇಳ ಬೇಕು ಯಾರು ಆ ಚಲುವೆ ಅಂತ! ;-)
ದಿವ್ಯಾ, ಖಂಡಿತ :-) ನೀವು ನಲಿದರೆ ನಾ ಕೂಡ ನಲಿವೆ :P ನಮ್ಮ ಬ್ಲಾಗಿಗೆ ಬಂದಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ
ಪುಟ್ಟಿ, ಹಾಗೆಲ್ಲ ಹಠ ಮಾಡ್ಬಾರ್ದು :D
ಬಹಳ ದಿನಗಳ ನಂತರ ಈ ಧಾಟಿಯ, ಈ ವಸ್ತುವಿನ ಕವನ ಮನಸ್ಸಿಗೆ ಮುದ ನೀಡಿತು. ಕೆ.ಎಸ್.ನರಸಿಂಹಸ್ವಾಮಿ ಯವರ ಮೈಸೂರ್ ಮಲ್ಲಿಗೆ ನೆನಪಾಯಿತು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹರೀಶ್ ಭಟ್ಟರೆ...ಮತ್ತಷ್ಟು ಸುಂದರ ಕವನಗಳ ನಿರೀಕ್ಷೆಯಲಿ
~ಬಸವರಾಜ್
ಹರಿಷ್...
ಕವನ ಭಾವ ಪೂರ್ಣವಾಗಿ..
ಪ್ರಾಸ ಬದ್ಧವಾಗಿದೆ...
ಯಾರದು ??? !!!
ಕವನ ತುಂಬಾ ಅಂದರೆ ತುಂಬಾ ಇಷ್ಟವಾಯಿತು
ಆದರೆ ಚೆಲುವೆ ನಿನ್ನ ನೋಡಿ ನಕ್ಕಿದ್ದು ಕಷ್ಟವಾಯಿತು !!
ಬಸವರಾಜ, ಧನ್ಯವಾದ .. ನಮ್ಮ ಬ್ಲಾಗಿಗೆ ಬಂದಿದ್ದು, ಕಮೆಂಟಿಸಿದ್ದು ಸಂತೋಷ :-) ಆದರೆ ಮೈಸೂರ ಮಲ್ಲಿಗೆಗೆ ಹೋಲಿಸಿ ತುಂಬಾ ಹತ್ತಿಸಿಬಿಟ್ಟಿದ್ದೀಯ..
ಪ್ರಕಾಶಣ್ಣ, ಧನ್ಯವಾದ.
> ಯಾರದು?!
ಯಾರೋ...
ಸೋಮ, ಕವನ ಮೆಚ್ಚಿದ್ದಕ್ಕೆ ಧನ್ಯವಾದ. ಅವಳು ನನ್ನ ನೋಡಿ ನಕ್ರೆ ನಿಂಗೇನ್ ಹೊಟ್ಟೆ ಉರಿ? ಚೆನ್ನೈ ಉರಿ ಸಾಕಾಗಿಲ್ವಾ? ;-)
ಗುಂಡಾ , ಕವನ ತುಂಬಾ ಚೆನ್ನಾಗಿದೆ . ಎದರ್ಗಡೆ ಇರೋ PG ಹುಡುಗಿ ನೋಡಿ ಬರ್ದಿರೋದ ಇದು ??
ವೇದು, ಪಬ್ಲಿಕ್ಕಾಗಿ ಏನೇನೋ ಹೇಳಿ ನನ್ನ ಮಾನ ಮರ್ಯಾದೆ ತೆಗೀಬೇಡ ;-)
PG ಹುಡುಗಿ ಮನೆ ಮುಂದೇ ಸಿಗ್ತಾಳೆ.. ಅದಕ್ಕೆ ಜಾತ್ರೆಗೆ ಯಾಕೋ ಹೋಗ್ಲಿ??
ಚೆಲುವೆ ಎಲ್ಲಿ ಇದ್ರೂ ಚೆಲುವೇನೇ..ಆಕೆ ನಿಮ್ಮ ಕೈಲಿ ಕವನ್ ಗೀಚಿಸಿದ್ರೂ ಇಲ್ಲ ಮನದ ಬಾಗಿಲು ತಟ್ಟಿದ್ರೂ...ಹಹಹ ಚನ್ನಾಗಿದೆ ಕವನ ಹರೀಶ್...ಸ್ಫೂರ್ತಿ ಯಾರು ಅಂತ ಕೇಳಬಹುದಾ..?
ಅದ್ಬುತವಾದ ಕವನ ಹರೀಶ್.ಈ ಕವನ ನನ್ನ ಮನ್ಸಿಗೆ ನಾಟಿ ಬಿಡ್ತು.ತುಂಬ ಸೊಗಸಾಗಿದೆ. ಆ ಚೆಲುವೆ ನಿನಗೆ ಬೇಗ ಸಿಗಲಿ.
ಜಲನಯನ ಅವರೇ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಎಲ್ಲೇ ಇರಲಿ, ಹೇಗೇ ಇರಲಿ, ಚೆಲುವೆ ಚೆಲುವೆಯೇ! ೧೦೦% ನಿಜ :-)
ಸ್ಫೂರ್ತಿ? ಹಾಗಂದ್ರೆ ಯಾರು?!
ಪ್ರಕಾಶ, ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು :-)
ಬ್ಲಾಗಿಗೆ ಬರ್ತಾ ಇರು.. ಚೆಲುವೆ ಸಿಕ್ರೆ ನಿಂಗೆ ಟ್ರೀಟ್ ;-)
ಚೆಲುವೆಯ ಚೆಲುವು,ಮನಸಿನ ನಲಿವು ಕವನಕ್ಕೆ ಚೆಲುವನ್ನು ಕೊಟ್ಟಿದೆ. ಸು೦ದರವಾದ ಕವನ..!
Hey Harish .... did u compose this poem? hmmm it's romantic :)
So tell me who the 'Cheluve' :) ?
ಮನಮುಕ್ತಾ ಅವರೇ, ಕವನ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಬ್ಲಾಗಿಗೆ ಬರುತ್ತಿರಿ.
ಶಿಲ್ಪಾ (neelu), ಹ್ಮ್.. ಸುಮ್ನೆ ಏನೋ ಯೋಚನೆ ಮಾಡ್ತಾ ಹಾಗೆ ಬರೆದ್ಬಿಟ್ಟೆ.. :-)
ಹರೀಶ್ ಬಾಸ್ , ನಿನಗಾಗಿ ಕಾದಿದ್ದು ಚೆಲುವೆ :) :) ಸೂಪರ್ ಕವನ , ಒಲವಿನ ಆಗಮನ !
ಹರೀಶನ ಪ್ರೇಮದ ಪರಿ ಚೆನ್ನಾಗಿ ಮೂಡಿಬೈಂದು...ಪ್ರೇಮ ಕವಿಯಾಗಿ,ಒಳ್ಳೊಳ್ಳೇ ಕವನಗಳು ಹೀಗೇ ಹರಿದು ಬರುತ್ತಿರಲಿ..
ನಿನ್ನ ಪ್ರೇಮದ ಪರಿಯ ನಿವೇದನೆ ಚೆನ್ನಾಗಿದ್ದು ಹರೀಶ...ಹಿಂಗೇ ಪ್ರೇಮಕವಿಯಾಗಿ ಕವನಗಳು ಬರುತ್ತಿರಲಿ...
ಹರಿ ಲೇಟ್ ಆಗಿ ನೋಡದಿ ..... :P ಮಸ್ತಿದ್ದು ನೀ ಕೂಡಿ ನಲಿದಿದ್ದು ...! ;)
ಕಾಮೆಂಟ್ ಪೋಸ್ಟ್ ಮಾಡಿ