ಬಾನಲಿ ಸುಂದರ ಚಂದಿರನೋಟ
ನಿಲ್ಲದ ಕಾಲವ ಸೂಚಿಸಿದೆ
ಮೈಮರೆಸುವ ಈ ನಿನ್ನಯ ನೋಟ
ಚಂದಿರನನ್ನೂ ನಾಚಿಸಿದೆ
ಗುಡುಗಿನ ಜೊತೆಗೆ ಮಿಂಚಿನ ಆಟ
ಭೂಮಿಗೆ ಮಳೆಯನು ಸುರಿಸುತಿದೆ
ಮಿಂಚಿನ ನೋಟದ ನಿನ್ನೊಡನಾಟ
ನನ್ನಲಿ ಪ್ರೀತಿಯ ಹರಿಸುತಿದೆ
ನಡೆಸುವೆ ನಾನು ಬಲು ಹುಡುಕಾಟ
ಮರೆಯಾದರೆ ನೀನೊಂದೊಪ್ಪೊತ್ತು
ಹಗಲಿರುಳೆನ್ನದೆ ನಿನ್ನದೆ ಕಾಟ
ಕಾರಣ ವಯಸ್ಸಿದು ಇಪ್ಪತ್ತು!
ಒಲವಿನ ದಾಹ, ಸ್ನೇಹದ ಕೂಟ
ಸೋತಿತು ಹೇಗೋ ಈ ಮನಸು
ಬಾರದು ನಿದ್ದೆ, ರುಚಿಸದು ಊಟ
ಮನದಲಿ ಬರಿ ನಿನದೇ ಕನಸು
15 ಕಾಮೆಂಟ್ಗಳು:
ಹರೀಷ...
ಬೆಳಿಗ್ಗೆ.. ಬೆಳಿಗ್ಗೆ ಒಂದು ಒಳ್ಳೆಯ ಪ್ರೇಮ ಕವಿತೆ ಓದಿ ಖುಷಿಯಾಯ್ತು...
ನೀನು ಮತ್ತೆ ಬ್ಲಾಗ್ ಲೋಕಕ್ಕೆ ಬಂದಿದ್ದು ಬಹಳ ಸಂತೋಷ..
ನನಗೆ ತಿಳಿದ ಹಾಗೆ ಇಲ್ಲಿ ಯಾವ ಗುಂಪೂ ಇಲ್ಲ..
ಎಲ್ಲರೂ ಅವರವ ಕಾಯಕದಲ್ಲಿ ವ್ಯಸ್ತರು...
ಸುಂದರವಾದ ಪ್ರೇಮ ಕವಿತೆ...
ಸ್ಪೂರ್ತಿ ಯಾರೆಂದು ಕೇಳ ಬಹುದೆ...?
jai ho!
hmm. gooddu
ಹರೀಶ,
ಭಾವಪೂರ್ಣವಾದ ಸೊಬಗಿನ ಭಾವಗೀತೆ.
ಹರೀಶ್,
ಇವತ್ತು ಬೆಳಿಗ್ಗೆ ಪ್ರಕಾಶ್ ಹೆಗಡೆ ಹೇಳಿದರು ಹರೀಶ್ ಅಪರೂಪಕ್ಕೆ ಒಂದು ಕವನ ಬರೆದಿದ್ದಾರೆ ಅಂತ. ಅದಕ್ಕೆ ಬಂದೆ. ನಿಮ್ಮ ಪ್ರೇಮ ಕವನ ತುಂಬಾ ಚೆನ್ನಾಗಿದೆ. ನೀವು ಮತ್ತೆ ಸಕ್ರೀಯವಾಗಿ ಬ್ಲಾಗ್ ಲೋಕಕ್ಕೆ ಬರುತ್ತಿರುವುದು ನನಗಂತೂ ಖುಷಿ.
ಕವನ ತುಂಬಾ ಚೆನ್ನಾಗಿದ್ದು.
hari,
ishtu sundara kavana bariteeya antha gotte iralilla. kavana tumbaa chennagide.
ninna manasalli kanasu 'hari'sidavaraaru?
nanu ninna abhimani.. ninnanta geleya erodu nange hemmeya vishaya..
ಪ್ರಕಾಶಣ್ಣ, ನಿಂಗೆ ಖುಷಿಯಾಗಿದ್ದು ನಂಗೂ ಖುಷಿ :-)
ಗುಂಪುಗಾರಿಕೆ ಇದೆ ಅಂತ ನಾನು ಹೇಳಿದ್ದು ನನ್ನ ಸ್ವಂತ ಅನಿಸಿಕೆ! ಅದು ಇಲ್ದೇ ಇದ್ರೆ ಬಹಳ ಒಳ್ಳೇದು :-)
ಸ್ಫೂರ್ತಿ? ಯಾರದು??
ಸುಶ್, thanks ho!
ವಿಕಾಸ, thanksu :-)
ಸುನಾಥಂಕಲ್, ಕವಿತೆ ಮೆಚ್ಚಿಕೊಂಡಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಶಿವು, ಕವನ ನಿಮಗೆ ಮೆಚ್ಚುಗೆಯಾಗಿದ್ದು ಸಂತೋಷ. ಬ್ಲಾಗಿಗೆ ಬರುತ್ತಿರಿ, ಬರೆಯುತ್ತಿರಿ.
ತೇಜಕ್ಕಾ, ಇದು ಸುಮ್ಮನೆ ಕಲ್ಪನೆ ಮಾಡಿ ಬರ್ದಿದ್ದು. ನಿಂಗಕ್ಕೆಲ್ಲ ಇಷ್ಟ ಆಗಿದ್ದು ನೋಡಿ ಖುಷಿ ಆಗ್ತಾ ಇದ್ದು :-)
ಜಯ್ (ಅಂತರ್ವಾಣಿ), ನಂಗೆ ಈ ರೀತಿ ಕವನ ಬರಿಯೋದಕ್ಕೆ ಬರುತ್ತೆ ಅಂತ ನನಗೂ ಗೊತ್ತಿರ್ಲಿಲ್ಲ.. ಏನೋ ಸುಮ್ನೆ ಬರಿಯೋಣ ಅಂತ ಬರೆದೆ.. ಆ ದಿನ ನಡು ರಾತ್ರಿ ನೀನು ಕೇಳ್ದಾಗ ಬರೀತಿದ್ನಲ್ಲ.. ಅದೇ ಇದು.. ಮನಸ್ಸಿನಲ್ಲಿ ಕನಸು ಹರಿಸಿದವರಿಗೇನು ಕಡಿಮೆ.. ಬಹಳ ಜನ ಇದ್ದಾರೆ.. ಅವೆಲ್ಲದರ ಸಂಗಮ ಇದು :-)
ಅವಿ (Happy Days), ಏನೋ ಇದು.. ನನ್ನ ಪ್ರೇಮ ಕವನ ನೋಡಿ ನಿಂಗೆ ಸ್ನೇಹ ಉಕ್ಕಿ ಬಂದಿದೆ!! ನಿನ್ನಂಥ ಸ್ನೇಹಿತ ಇರೋದು ನನಗೂ ಹೆಮ್ಮೆಯ ವಿಷಯ. ನೀನೂ ಬ್ಲಾಗಲ್ಲಿ ಏನಾದ್ರೂ ಬರೀತಿರು.
ಸಯ್ಯನ ನಿಂಗೆ ಇಪ್ಪತ್ತೆ!?? ಪ್ರಾಸ ಬದ್ದ ಕವಿತೆ.. ಸುಂದರ ಕವಿತೆ
ಹೋಯ್ ಹರೀಶ ,
ಅಪರೂಪಕ್ಕೆ ಬರೆದರೂ ಬರೆದಿದ್ದು ಪ್ರೇಮಕವಿತೆ ! ಚೆನಾಗಿದ್ದು !
ಆಫೀಸಿಗೆ ಯಾರಾದರೂ ಹೊಸದಾಗಿ ಜಾಯಿನ್ ಆಯದ್ವಾ? ;) ಮತ್ತೆ ನಿನ್ನ ವಯಸ್ಸು ಬೇರೆ ಇನ್ನೂ ಇಪ್ಪತ್ತೆಯಾ ಹೇಳ್ತಿದ್ದೆ !!! ಏನೋ ಡೌಟು ನಂಗೆ !!
ಅದೇನೇ ಇದ್ರೂ , ಕವನ ಮಾತ್ರ ಇಷ್ಟ ಆತು ನೋಡು !
ಮನಸ್ವಿ (ಆದಿತ್ಯ), ಸಯ್ಯಪ ನೀನೂವ.. ಕವನ ಇಷ್ಟ ಆತಲ, ವಯಸ್ಸು ತಗಂಡು ಎಂತ ಮಾಡ್ತೆ ಬಿಡು ;-) ಪ್ರತಿಕ್ರಿಯೆಗೆ ಧನ್ಯವಾದ..
ಚಿತ್ರಕ್ಕಾ, ಧನ್ಯವಾದ... ಆಫೀಸಿಗೆ ಸುಮಾರು ಜನ ಸೇರಿದ್ದ!! ಆದರೆ ಅದಕ್ಕೂ ಇದಕ್ಕೂ ಹ್ಯಾಂಗೆ ಲಿಂಕ್ ಮಾಡಿದೆ ಅಂತ?
ಹರೀಶ,ಕವಿಯಾಗಿ ಕವಿತೆ ಬರೆದ ಪರಿ ಬಹಳ ಸೊಗಸಾಗಿ ಮನದಾಳದಿಂದ ಮೂಡಿಬಂದು ನಮಗೆ ಖುಶಿಕೊಟ್ಟಿದ್ದಂತೂ ಅಪ್ಪಟ ಸತ್ಯ...ಕವಿತೆ ಹೀಗೇ ಮುಂದುವರಿಯಲಿ...
ಕಾಮೆಂಟ್ ಪೋಸ್ಟ್ ಮಾಡಿ