ಶುಕ್ರವಾರ, ಸೆಪ್ಟೆಂಬರ್ 18, 2009

ಮರಳಿ ಮರೆಯಾಗಿ...

ಬಾಳ ದೋಣಿ ಅಂಬಿಗರಿಲ್ಲದೆ ಅನಾಥವಾಗಿ ಬರೋಬ್ಬರಿ ಏಳು ತಿಂಗಳಾಯಿತು. ಕೆಲಸದ ಒತ್ತಡ, ಬರೆಯಬೇಕೆಂದರೂ ಬೇಡವೆನ್ನುವ ಮನಸು, ಓದುವುದರಲ್ಲೂ ಕಂಡುಬಂದ ನಿರಾಸಕ್ತಿ - ಹೀಗೆ.. ಕಾರಣಗಳು ಹಲವಾರು. ಇಲ್ಲಿಯವರೆಗೆ ನಡೆದಿದ್ದನ್ನು ಸಂಕ್ಷಿಪ್ತವಾಗಿ ಹೇಳಿಕೊಳ್ಳುವ ಬಯಕೆ:
  • ಫೆಬ್ರುವರಿಯಲ್ಲಿ ಬೆಂಗಳೂರಿನ ಸಮೀಪವಿರುವ ಸ್ಕಂಧಗಿರಿಗೆ ಹೋಗಿದ್ದೆವು. ಆದರೆ ನಾವು ಹೋದ ದಿನ ಮೋಡವೇ ಇಲ್ಲದೆ ನನಗೆ ಮತ್ತೆ ನಿರಾಸೆಯಾಯಿತು.
  • ಮಾರ್ಚಿನಲ್ಲಿ ಊರಿನಿಂದ ಬರುವಾಗ ಬಸ್ಸಿನಲ್ಲಿ "ದಟ್ಸ್-ಕನ್ನಡ"ದ ಶ್ಯಾಮಸುಂದರ್ ಅವರನ್ನು ಭೇಟಿಯಾಗಿದ್ದೆ. ಬ್ಲಾಗಿಗರ ಕೂಟ ನಡೆದು ಅಂದಿಗೆ ಸರಿಯಾಗಿ ಒಂದು ವರ್ಷವಾಗಿತ್ತು. ಇಬ್ಬರೂ ಅದನ್ನು ನೆನಪಿಸಿಕೊಂಡೆವು.
  • ಏಪ್ರಿಲ್ ನಲ್ಲಿ ಸ್ನೇಹಿತರೆಲ್ಲ ಸೇರಿ ಕೇರಳದ ವಯನಾಡಿಗೆ ಹೋಗಿದ್ದೆವು. ಅದೊಂದು ಅಭೂತಪೂರ್ವ ಅನುಭವ.
  • ಈಗ ಸುಮಾರು ಎರಡು ತಿಂಗಳಿನಿಂದ ಸಂಪೂರ್ಣವಾಗಿ ಲಿನಕ್ಸ್ ಅನ್ನೇ ಉಪಯೋಗಿಸುತ್ತಿದ್ದೇನೆ. ವಿಂಡೋಸ್ ಇಲ್ಲದೆಯೇ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇನೆ. ಈ ಲೇಖನವನ್ನು ಬರೆಯುತ್ತಿರುವುದೂ ಉಬುಂಟು ಲಿನಕ್ಸ್ ನಲ್ಲಿಯೇ. ಆರಂಭದಲ್ಲಿ ಕನ್ನಡ ಬಳಸುವಲ್ಲಿ ಸ್ವಲ್ಪ ತೊಡಕಾದಾಗ ಸಹಕರಿಸಿದ ಓಂ ಶಿವಪ್ರಕಾಶ್ ಅವರಿಗೆ ಧನ್ಯವಾದಗಳು.
  • ಮುಂಚೆ ಸೌಹಾರ್ದಯುತವಾಗಿದ್ದ ಕನ್ನಡ ಬ್ಲಾಗ್ ಲೋಕಕ್ಕೆ ಈಗ ಗುಂಪುಗಾರಿಕೆ ತಲೆದೋರಿದಂತೆ ಕಾಣುತ್ತಿದೆ. (ಇದು ನನ್ನ ಸ್ವಂತ ಅನಿಸಿಕೆ ಮಾತ್ರ) ಇದು ನಿಜವಾಗಿದ್ದರೆ ನಿಜಕ್ಕೂ ಇದೊಂದು ಅಪಾಯಕಾರಿ ಬೆಳವಣಿಗೆ.
  • ಸಾವಿರದಷ್ಟು ಬ್ಲಾಗ್ ಬರಹಗಳನ್ನು ಓದುವುದು ಬಾಕಿ ಇದೆ. ಎಂದು ಓದಿ ಮುಗಿಸುವೆನೋ ತಿಳಿದಿಲ್ಲ. ಬ್ಲಾಗ್ ಓದುವಲ್ಲಿ, ಬರೆಯುವಲ್ಲಿ ಈಗೆರಡು ವರ್ಷಗಳ ಹಿಂದೆ ಇದ್ದ ಆಸಕ್ತಿ, ಹುರುಪು ಈಗ ಉಳಿದಿಲ್ಲ.

11 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಮತ್ತೆ ಹುರುಪು ಬರಲಿ , happy blogging.. :)

sunaath ಹೇಳಿದರು...

ಹರೀಶ,
ನೀವು ಇಲ್ಲದೆ ನಮಗೂ ಬೇಜಾರಾಗುತ್ತೆ. ದಯವಿಟ್ಟು ಚೇತರಿಸಿಕೊಳ್ಳಿ!

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಹರೀಶ...
ಮರಳಿ ಬಂದಿದ್ದು ಖುಷಿ. ಬ್ಲಾಗ್ ಬಗೆಗಿನ ಆಸಕ್ತಿ ಮರೆಯಾಗದಿರಲಿ. ಹೆಚ್ಚುತ್ತಲೇ ಇರಲಿ.
ಬರೆಯುತ್ತಿರು.

ತೇಜಸ್ವಿನಿ ಹೆಗಡೆ ಹೇಳಿದರು...

ಪುನರಾಗಮನಕ್ಕೆ ಸ್ವಾಗತ:) ಆದಷ್ಟು ಬೇಗ ಬಾಳದೋಣಿ ಅಪ್‌ಡೇಟ್ ಆಗ್ಲಿ ಎಂದು ಆಶಿಸ್ತೆ... ಬರವಣಿಗೆ ನಿಲ್ಸಡ...

ಸಂದೀಪ್ ಕಾಮತ್ ಹೇಳಿದರು...

ಪ್ರೀತಿಯ ಹರೀಶ್,

ನಾನು ಬೇರೆ ಬ್ಲಾಗ್ ಗೆ ಹೋಗೋದು ’ಬಾಳದೋಣಿ’ಯ ಮೂಲಕವೇ! ಯಾಕೋ ಮುಂಚಿನಿಂದ ನನಗೆ ಇದೇ ಅಭ್ಯಾಸ.ನಿಮ್ಮ ಬ್ಲಾಗ್ನಲ್ಲಿ ಬೇರೆ ಬ್ಲಾಗ್ ಗಳ ಅಪ್ ಡೇಟ್ಸ್ ದಿನಾ ಬರೋದೇ ಇದಕ್ಕೆ ಕಾರಣ.

ಆಲ್ ದಿ ಬೆಸ್ಟ್ !

ಅಂತರ್ವಾಣಿ ಹೇಳಿದರು...

harish,
sakkth simple aagi mugisiddeeya.nannadu hechchu kaDime nin kathene.. modale doDDa article andre nanage allergy. haagaagi eshto article odoke aagtha illa.

ಸುಧೇಶ್ ಶೆಟ್ಟಿ ಹೇಳಿದರು...

Adashtu bega mundia lekhana barali....

Happy coming back :)

Harisha - ಹರೀಶ ಹೇಳಿದರು...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ನನ್ನ ಮೇಲೆ ನೀವೆಲ್ಲ ಇಟ್ಟಿರುವ ಪ್ರೀತಿಗೆ ನಾನು ಚಿರಋಣಿ.

ರಾಜೇಶ್ ನಾಯ್ಕ ಹೇಳಿದರು...

ಎಷ್ಟು ದಿವಸ ಆಯ್ತು ಮಾರಾಯ್ರೆ ನಿಮ್ಮ ಮಾತು ಕೇಳಿ...
ಬ್ಲಾಗ್ ಮುಂದುವರಿಸಲು ಮತ್ತೆ ಆಸಕ್ತಿ, ಹುರುಪು ಬರಲಿ ಎಂಬ ಆಶಯ.

ಬಾಲು ಹೇಳಿದರು...

ನೀವು ಮರಳಿ ಬ೦ದಿದ್ದು ಕುಶಿ.
happy blogging. :)

shivu.k ಹೇಳಿದರು...

ಹರೀಶ್,

ತುಂಬಾ ದಿನವಾಯ್ತು. ನಿಮ್ಮ ಬ್ಲಾಗಿನಲ್ಲಿ ಹೊಸ ಲೇಖನವನ್ನು ಓದಿ. ಬಿಡುವು ಮಾಡಿಕೊಂಡು ಬರೆಯಿರಿ...