ಬುಧವಾರ, ನವೆಂಬರ್ 5, 2008

ಮಹಾಭಾರತ ನಿರ್ಮಾಪಕ ಬಿ.ಆರ್.ಚೋಪ್ರಾ ಇನ್ನಿಲ್ಲ

ಎಂಭತ್ತರ ದಶಕದ ಕೊನೆ ಹಾಗೂ ತೊಂಭತ್ತರ ದಶಕದ ಆದಿಯಲ್ಲಿ ಪ್ರತಿ ಭಾನುವಾರ ದೂರದರ್ಶನದಲ್ಲಿ ಬರುತ್ತಿದ್ದ ಮಹಾಭಾರತ ಧಾರಾವಾಹಿ ಯಾರಿಗೆ ತಿಳಿದಿಲ್ಲ ಹೇಳಿ? ಭಾರತೀಯ ದೂರದರ್ಶನ ಇತಿಹಾಸದ ಅತ್ಯಂತ ಯಶಸ್ವಿ ಧಾರಾವಾಹಿಯಾಗಿದ್ದ ಮಹಾಭಾರತದ ನಿರ್ಮಾಪಕ ಬಿ. ಆರ್. ಚೋಪ್ರಾ ಇಂದು ಮುಂಬಯಿಯಲ್ಲಿ ನಿಧನರಾದರು.

ಅವರಿಗೆ ೯೪ ವರ್ಷ ವಯಸ್ಸಾಗಿತ್ತು. ಹಿಂದಿ ಚಿತ್ರರಂಗ ಕಂಡ ಉತ್ತಮ ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದ ಬಲದೇವ್ ರಾಜ್ ಚೋಪ್ರಾ (ಬಿ. ಆರ್. ಚೋಪ್ರಾ) ೧೯೫೫ ರಲ್ಲಿ ತಮ್ಮದೇ ಆದ ಬಿ.ಆರ್.ಫಿಲ್ಮ್ಸ್ ಪ್ರಾರಂಭಿಸಿದ್ದರು.

ಕಾಕತಾಳೀಯವೆಂಬಂತೆ ಅವರು ನಿರ್ಮಿಸಿದ ಮಹಾಭಾರತ ಕೂಡ ೯೪ ಕಂತುಗಳನ್ನು ಹೊಂದಿದ್ದು, ಅದನ್ನು ಉಚಿತವಾಗಿ ನೋಡಲು ಅಥವಾ ಕೊಳ್ಳಲು ಇಲ್ಲಿಗೆ ಹೋಗಬಹುದು:
http://www.rajshri.com/mahabharat/index.asp

7 ಕಾಮೆಂಟ್‌ಗಳು:

ಮನಸ್ವಿ ಹೇಳಿದರು...

ಹೂ ಹೌದು ಹರೀಶ.. ಬಿ. ಅರ್ ಚೋಪ್ರಾರನ್ನು ನೆನಪು ಮಾಡಿದ್ದಕ್ಕೆ ದನ್ಯವಾದಗಳು.. ಹಾಗು ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಕೇಳ್ಕ್ಯತ್ತಿ....

yajna ಹೇಳಿದರು...

ಮಹಾಭಾರತವನ್ನು ನಮ್ಮ ಮನಸ್ಸಲ್ಲಿ ಹೆಚ್ಚು ಕಾಲ ಉಳಿಯಲಿಕ್ಕೆ ದೃಶ್ಯ ಮಾಧ್ಯಮ ಕಾರಣ ಎನ್ನಬಹುದು. ನಾನು ತೊಂಬತ್ತರ ದಶಕದಲ್ಲಿ ಮಹಾಭಾರತವನ್ನು ಟಿ.ವಿ ಯಲ್ಲಿ ನೋಡಿದ್ದೆ. ಆಗ ನಾನು ಸಾಗರದಲ್ಲಿ ಓದುತ್ತಿದ್ದೆ. ಮಾವನ ಮನೆಯಲ್ಲಿ ಟಿ.ವಿ ಇರಲಿಲ್ಲ. ನಾವೆಲ್ಲಾ ಒಂದು ಕಿಲೋ ಮೀಟರ್ ದೂರದಲ್ಲಿದ್ದ ಒಬ್ಬರ ಮನೆಗೆ ಮಹಾಭಾರತ ನೋಡಲು ಹೋಗ್ತಾಯಿದ್ದೆವು. ಅಲ್ಲಿ ನಮ್ಮಂತೆ ಬಹಳ ಜನರು ನೋಡಲು ಬರುತ್ತಿದ್ದರು. ಆ ಮನೆಯವರು ಸ್ವಲ್ಪಾನೂ ಬೇಸರ ಮಾಡ್ಕೊತಾಯಿರಲಿಲ್ಲ. ಮಹಾಭಾರತ ನಮ್ಮನ್ನು ಅಷ್ಟು ಸೆಳೆದಿತ್ತು.

ಮಹಾಭಾರತದ ಪ್ರಾರಂಭದಲ್ಲಿ ಬರ್ತಾಯಿದ್ದ ಶ್ಲೋಕ ಇನ್ನೂ ನೆನಪಿದೆ " ಯದಾ ಯದಾ ಹಿ ಧರ್ಮಸ್ಯ....."
ಶಂಖ ಊದುವುದು, ಚಕ್ರ ಮುಂತಾದವು ಇನ್ನು ಮನಸ್ಸಲ್ಲಿ ಮನೆ ಮಾಡಿದೆ. ಆಗ ಹಿಂದಿ ಬರುತ್ತಾಯಿರಲ್ಲಿ. ಕಥೆ ಗೊತ್ತಿದ್ದರಿಂದ ಭಾಷೆಯ ಸಮಸ್ಯೆ ನಮಗೆ ಕಾಡ್ತಾಯಿರಲಿಲ್ಲ. ಮಹಾಭಾರತ ಇನ್ನೊಂದು ಶಬ್ದ "ಪರಂತೂ" ಇನ್ನೂ ನೆನಪಿಂದ ಮಾಸಿಲ್ಲ(ಶಕುನಿ ಹೆಚ್ಚಾಗಿ ಹೇಳ್ತಾಯಿದ್ದ ಅನ್ಸತ್ತೆ..ಪರಂತೂ ಮಹಾರಾಜ್).

ಒಂದು ಒಳ್ಳೆಯ ಸದಭಿರುಚಿ ದಾರವಾಹಿ ನೀಡಿ ಜನರ ಮನಸ್ಸಲ್ಲಿ ಮಹಾಭಾರತ ಇನ್ನೂ ಹಸಿರಾಗುವಂತೆ ಮಾಡಿದ ಶ್ರೀ ಬಿ.ಆರ್ ಚೋಪ್ರಾರವರ ಆತ್ಮಕ್ಕೆ ಶಾಂತಿ ಸಿಗಲಿ.

ಹಿಂದಿನ ಘಟನೆಯನ್ನು ನೆನಪು ಮಾಡಿಕೊಳ್ಳಲು ಅನುವು ಮಾಡಿದ ಮತ್ತು ಮಹಾಭಾರತದ ಅಂತರಜಾಲದ ಕೊಂಡಿಯನ್ನು ನೀಡಿದ್ದಕ್ಕೆ ಧನ್ಯವಾದಗಳು.

Ittigecement ಹೇಳಿದರು...

ಹರೀಶ್.. ಸಮಯೋಚಿತ ಲೇಖನ. ಮಹಭಾರತ ಧಾರವಾಹಿ ಅಂದಿನ ಸಮಯದಲ್ಲಿ ಜನಜೀವನದ ಮೇಲೆ ಬಹಳ ಪ್ರಭಾವ ಬೀರಿತ್ತು. ಆಗ ಟಿವಿ ಬಹಳ ಕಡಿಮೆ. ಯರ್ಯಾರದೊ ಮನೆಗೆ ಹೋಗಿ ನೋಡಿಕೊಂಡು ಬರುತಿದ್ದೇವು.. ಚೊಪ್ರಾರವರ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೊಮ್ಮೆ ಧನ್ಯವಾದಗಳು. ವೆಬ್ ಸೈಟ್ ತಿಳಿಸಿದ್ದಕ್ಕೆ.

Harisha - ಹರೀಶ ಹೇಳಿದರು...

ಮಹಾಭಾರತ ಬರುವಾಗ ನಾನಿನ್ನೂ ಚಿಕ್ಕವ. ಆಗ ನಮ್ಮನೆಯಲ್ಲಿ ಟಿವಿ ಇರಲಿಲ್ಲ. ಹಾಗಾಗಿ ಅಜ್ಜನ ಮನೆಗೆ (ಶಿರಸಿ) ಹೋದಾಗ ಅಲ್ಲಿದ್ದ ಕ್ಯಾಸೆಟ್ ತರಿಸಿ ವಿಸಿಪಿಯಲ್ಲಿ ಹಾಕಿ ನೋಡುತ್ತಿದ್ದೆವು. ನನ್ನ ಮನಸ್ಸಿನಲ್ಲಿ ಬಹುವಾಗಿ ಪರಿಣಾಮ ಬೀರಿದ ಅಂಶಗಳಲ್ಲಿ ರಾಮಾಯಣ/ಮಹಾಭಾರತಗಳು ಪ್ರಮುಖವಾದವು. ಪ್ರತಿಕ್ರಿಯಿಸಿರುವ ಎಲ್ಲರಿಗೂ ಧನ್ಯವಾದಗಳು.

ಹರೀಶ ಮಾಂಬಾಡಿ ಹೇಳಿದರು...

ಅವರ ಧಾರಾವಾಹಿ ನೋಡಲು ಮನೆಯಲ್ಲಿ ಜಗಳ ಮಾಡಿ ಟಿ.ವಿ.ಮುಂದೆ ಕುಳಿತುಕೊಳ್ಳುತ್ತಿದ್ದದ್ದು ನೆನಪಿಗೆ ಬಂತು..

ರಾಘವೇಂದ್ರ ಕೆಸವಿನಮನೆ. ಹೇಳಿದರು...

ಹಲೋ ಹರೀಶ್.!!!ನನ್ನ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.
- ರಾಘವೇಂದ್ರ ಕೆಸವಿನಮನೆ.

shivu.k ಹೇಳಿದರು...

ಮಹಾಭಾರತವನ್ನು ಪುಸ್ತಕದಲ್ಲಿ ಓದಿದ್ದರೂ ಅದರ ಬಣ್ಣ ಬಣ್ಣದ ದೃಶ್ಯ ಕಲ್ಪನೆಯನ್ನು ಕಟ್ಟಿಕೊಟ್ಟು ಹೊಸ ಆಯಾಮವನ್ನು ತಂದವರು ಬಿ.ಆರ್‍. ಚೋಪ್ರ. ಅವರ ನೆನಪು ಮಾಡಿಕೊಟ್ಟಿದ್ದಕ್ಕೆ Thanks. ಅವರ ಆತ್ಮಕ್ಕೆ ಶಾಂತಿ ಸಿಗಲಿ.