ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
ಎಂಥ ಮಧುರ ಗೀತೆ ಅಲ್ವ? ಹಮ್.. ಅದಿರ್ಲಿ, ನೀವ್ ಹೇಳಿದ ಉತ್ತರ ತಪ್ಪು! ಅದ್ಕೇ ಹೇಳಿದ್ದು ಸಾವಿರಕ್ಕೊಬ್ಬರೂ ಸಿಗಲ್ಲ ಅಂತ. ಜೋಗ ನೋಡಕ್ಕೆ ಸುಂದರವಾಗಿರಬಹುದು, ಜಗತ್ಪ್ರಸಿದ್ಧ ಇರಬಹುದು, ಅದರ ಬಗ್ಗೆ ಕೆ.ಎಸ್. ನಿಸ್ಸಾರ್ ಅಹಮದ್ ಅವರು ಅದ್ಭುತವಾಗಿ ವರ್ಣಿಸಿ ಕವಿತೆ ಬರ್ದಿರಬಹುದು, ಮುಂಗಾರು ಮಳೆಯಲ್ಲಿ ಅಭೋ ಎನಿಸುವಂತೆ ಚಿತ್ರಿಸಿರಬಹುದು. ಹಾಗಂತ ಅದೇ ಎತ್ತರದ್ದು ಅನ್ನೋಕಾಗುತ್ತಾ? ನೀವೇ ಹೇಳಿ.
ಜೋಗ ಅಲ್ದೇ ಹೋದ್ರೆ ಮತ್ತಿನ್ಯಾವ ಜಲಪಾತ ಅದು ಅಂತಿದೀರಾ? ಹಾಗೆ ಬನ್ನಿ ದಾರಿಗೆ; ಅದರ ಹೆಸರು ಕುಂಚಿಕಲ್ ಜಲಪಾತ ಅಂತ, ನಂಗೂ ಗೊತ್ತಿರ್ಲಿಲ್ಲ; ಹೀಗೇ ಗೂಗ್ಲಿಂಗ್ ಮಾಡ್ತಿರ್ಬೇಕಾದ್ರೆ ಸಿಗ್ತು. ಕೆಟ್ಟ ಕುತೂಹಲ ನೋಡಿ, ಮತ್ತಷ್ಟು ವಿವರ ಹುಡುಕಿದೆ. ವಿಕಿಪೀಡಿಯಾದಲ್ಲಿ ಆಗುಂಬೆಯ ಹತ್ರ ಇದೆ, ವರಾಹಿ ನದಿಯ ಜಲಪಾತ ಅಂತ ಗೊತ್ತಾಯ್ತು. ಮ್ಯಾಪ್ ನೋಡಿದೆ. ಹೊಸಂಗಡಿ ಮತ್ತು ಮಾಸ್ತಿಕಟ್ಟೆ ಮಧ್ಯೆ ಎಲ್ಲೋ ಬರುತ್ತೆ ಅಂತ ತಿಳೀತು. ಹಾಗೆ ಒಂದು ಫೋಟೋ ಇದ್ರೆ ನೋಡೋಣ ಅಂತ ಗೂಗಲ್ ಇಮೇಜ್ ಸರ್ಚ್ ಮಾಡಿದ್ರೆ ಹೇಳ್ಕೊಳ್ಳಕ್ಕಾದ್ರೂ ಒಂದೇ ಒಂದು ಫೋಟೋ ಸಿಗ್ಬಾರ್ದಾ?? (ನನ್ನದೊಂದು ವಿನಂತಿ: ಕುಂಚಿಕಲ್ ಜಲಪಾತದ ಚಿತ್ರ ನಿಮ್ಮಲ್ಲಿ ಯಾರ ಬಳಿಯಾದರೂ ಇದ್ದರೆ ದಯವಿಟ್ಟು ವಿಕಿಪೀಡಿಯಾದಲ್ಲಿ ಸೇರಿಸಿ)
ಹೋಗಲಿ, ಇದಕ್ಕೆ ಕಾರಣ ಏನಿರಬಹುದು? ೧೪೯೩ ಅಡಿ ಎತ್ತರದಿಂದ ಧುಮ್ಮಿಕ್ಕುವ ಭಾರತದ ಅತಿ ಎತ್ತರದ ಜಲಪಾತದ ಹೆಸರನ್ನೇ ಎಷ್ಟೋ ಜನ ಕೇಳಿಲ್ಲ ಅಂದ ಮೇಲೆ ನಮ್ಮ ಸರ್ಕಾರ ಏನ್ ಮಾಡ್ತಿದೆ? ಜೋಗಕ್ಕಾದ್ರೆ ಸುಮಾರು ೧ ಕಿಲೋಮೀಟರ್ ದೂರದವರೆಗೆ ರಾಷ್ಟ್ರೀಯ ಹೆದ್ದಾರಿ ಇದೆ. ಕುಂಚಿಕಲ್ಲಿಗೆ? ಮೊದಲೇ ಘಾಟಿ ಹತ್ರ ಇರೋ ಜಾಗ, ಅಂಥದ್ರಲ್ಲಿ ರಸ್ತೆ ಬೇರೆ ಸರಿ ಇಲ್ಲ ಅಂದ್ರೆ ಯಾರ್ ಹೋಗ್ತಾರೆ ಹೇಳಿ? ಇನ್ನು ಚಾರಣಕ್ಕೆ ಹೋಗುವವರಿಗಾದರೂ ಆ ಸ್ಥಳದ ಬಗ್ಗೆ ಮಾಹಿತಿ ಬೇಡವೆ? ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ದೃಷ್ಟಿಗೆ ಇನ್ನೂ ಈ ಕುಂಚಿಕಲ್ ಜಲಪಾತ ಬಿದ್ದಿಲ್ವೆ? ನಮ್ಮ ಸುತ್ತಮುತ್ತಲಿನ ಸ್ಥಳಗಳು ನಮಗೇ ಗೊತ್ತಿಲ್ಲದಿದ್ದರೆ ಇತರರಿಗೆ ತಿಳಿಯುವುದಾದರೂ ಹೇಗೆ? ಜೋಗದ ಸಿರಿ ಬೆಳಕಿನಲ್ಲಿ ಇಂಥ ಎಷ್ಟೋ ಜಲಪಾತಗಳು ಮಬ್ಬಾಗಿವೆ. ಇಷ್ಟು ಸುಂದರ ಪರಿಸರವನ್ನು ಇಲ್ಲೇ ಇಟ್ಟುಕೊಂಡು ಪ್ರವಾಸಕ್ಕೆಂದು ಯೂರೋಪ್, ಅಮೇರಿಕಾ, ಸ್ವಿಝರ್ಲೆಂಡ್ ಗೆ ಹೋಗಿ ಬರುವ ಐಷಾರಾಮಿಗಳಿಗೆ ಏನು ಹೇಳಬೇಕು? ಹಿತ್ತಲ ಗಿಡ ಮದ್ದಲ್ಲ ಎಂಬುದು ಸುಳ್ಳಲ್ಲ! ಏನಂತೀರಾ?
15 ಕಾಮೆಂಟ್ಗಳು:
ಹರೀಶ್,
ಎತ್ತರದ ಜಲಪಾತದ ಬಗ್ಗೆ ಸ್ವಲ್ಪ ಗೊಂದಲವಿದೆ. http://www.factmonster.com/ipka/A0001781.html ಪ್ರಕಾರ ಗೋವ ಕರ್ನಾಟಕ ಗಡಿಯಲ್ಲಿರುವ ದೂದ್ ಸಾಗರ ಭಾರತದ ಅತ್ಯಂತ ಎತ್ತರದ ಜಲಪಾತ.
ಕುಂಚಿಗಲ್ ವಿಷಯಕ್ಕೆ ಬಂದರೆ ಅದು ಜೋಗ ಜಲಪಾತದಂತೆ ಒಂದೇ ಹಂತದಲ್ಲಿ ಬೀಳದೆ ಸುಮಾರು ೩-೪ ಹಂತಗಳಲ್ಲಿ ಧುಮುಕುತ್ತದೆ. ಕೆಲ ವರ್ಷದ ಹಿಂದೆ "ಸುಧಾ" ವಾರಪತ್ರಿಕೆಯಲ್ಲಿ ಈ ಜಲಪಾತದ ಬಗ್ಗೆ ಲೇಖನ ಬಂದಿತ್ತು. ಅದರ ಪ್ರಕಾರ ಕುಂಚಿಗಲ್ ವರಾಹಿ ಯೋಜನೆಯಡಿ ಬರುತ್ತದೆ ಹಾಗು ಕೆಪಿಸಿಲ್ ಸುಪರ್ಧಿಯೊಳಗೆ ಇದೆ. ಜಾಗ ಕೆಪಿಸಿಲ್ ಗೆ ಸೇರಿದೆ ಎಂದರೆ ಸಾರ್ವಜನಿಕರಿಗೆ ಯಾವತ್ತೂ ಪ್ರವೇಶವಿಲ್ಲ ಎಂದೇ ಅರ್ಥ.
ಅರವಿಂದ್, ನಮ್ಮ ಬ್ಲಾಗಿಗೆ ಸ್ವಾಗತ.
ವಿಕಿಪೀಡಿಯದಲ್ಲಿ ದೂಧ್ ಸಾಗರ್ ೩೧೦ ಮೀಟರ್ ಎತ್ತರ ಇದೆ ಎಂದು ದಾಖಲಿಸಲಾಗಿದೆ. ಆದರೆ ನೀವು ಹೇಳಿದ ಹಾಗೂ ಇತರ ಕೆಲವು ಪುಟಗಳಲ್ಲಿ ೬೦೦ ಮೀಟರ್ ಎಂದು ಬರೆಯಲಾಗಿದೆ. ಅದೂ ಅಲ್ಲದೆ factmonster ಪುಟದಲ್ಲಿ ಖಾಂದೆಪುರ್ ನದಿ ಎಂದು ಹೇಳಲಾಗಿದ್ದರೆ ವಿಕಿಪೀಡಿಯಾದಲ್ಲಿ ಮಾಂಡೋವಿ ಎಂದು ನಮೂದಿಸಲಾಗಿದೆ. ಹಾಗಾಗಿ ಆ ಜಲಪಾತದ ಸರಿಯಾದ ವಿವರಗಳು ಸಿಗುತ್ತಿಲ್ಲ.
http://www.world-waterfalls.com/waterfall.php?num=29
ಈ ಪುಟದಲ್ಲಿ ಇದರ ಬಗ್ಗೆ ಇರುವ ಗೊಂದಲದ ಬಗ್ಗೆ ಪ್ರಸ್ತಾಪಿಸಲಾಗಿದ್ದು ೩೧೦ ಮೀಟರ್ ಎಂಬುದೇ ಸಮಂಜಸ ಎಂದು ಹೇಳಲಾಗಿದೆ. ಅಲ್ಲದೆ ದೂಧ್ ಸಾಗರ್ ಭಾರತದ ಅತಿ ಎತ್ತರದ ಜಲಪಾತ ಎಂದು ಎಲ್ಲೂ ಹೇಳಲಾಗಿಲ್ಲ.
ಕುಂಚಿಕಲ್ ಜಲಪಾತ ಮಾಣಿ ಅಣೆಕಟ್ಟೆಯ ಬಳಿ ಇದೆ ಎಂದು ತಿಳಿದಿತ್ತು ಆದರೆ ಕೆಪಿಸಿಯ ಸುಪರ್ದಿಗೆ ಬರುತ್ತದೆ ಎಂದು ತಿಳಿದಿರಲಿಲ್ಲ. ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.
ಅರವಿಂದ್, ನೀವೂ ಪ್ರವಾಸಪ್ರಿಯರು ಎಂದು ತಿಳಿದು ಸಂತೋಷವಾಯಿತು. ನಮ್ಮ ಮುಂದಿನ ಪಯಣಗಳಿಗೆ ನಿಮ್ಮ ಬ್ಲಾಗ್ ಉತ್ತಮ ಮಾರ್ಗದರ್ಶಿಯಾಗುತ್ತದೆ. ಆಗಾಗ ಬರುತ್ತಿರಿ, ಬರೆಯುತ್ತಿರಿ :-)
ಓಹ್ ಎಷ್ಟೊಂದು ವಿಷ್ಯ ತಿಳೀತು, ಪೋಸ್ಟಿನಲ್ಲಿ, ಕಾಮೆಂಟುಗಳಲ್ಲಿ! ಥ್ಯಾಂಕ್ಸ್!
Great information! gotthe irle.. Hogakkathu ondsala..
ನಾನು ಇದುವರೆಗೂ ಕುಂಚಿಕಲ್ ಬಗ್ಗೆ ಕೇಳಿರಲೇ ಇಲ್ಲ! ಒಳ್ಳೆ ಮಾಹಿತಿ. ಇದು ಅತಿ ಎತ್ತರದ್ದು ಎಂದು ಅಧಿಕೃತವಾಗಿ ಹೇಳದಿರಲು ಅರವಿಂದ್ ತಿಳಿಸಿದಂತೆ ಮೂರ್ನಾಲ್ಕು ಹಂತಗಳಲ್ಲಿ ಬೀಳುವುದೇ ಕಾರಣವಿದ್ದಿರಬಹುದು ಅಲ್ಲವೆ?
ಶ್ರೀ, ಎಷ್ಟೋ ಬಾರಿ ಮೂಲ ಲೇಖನಕ್ಕಿಂತ ಅದಕ್ಕೆ ಬರುವ ಪ್ರತಿಕ್ರಿಯೆಗಳೇ ಅಮೂಲ್ಯವಾಗಿರುತ್ತವೆ. ಅವುಗಳಲ್ಲಿ ಇದೂ ಒಂದು :)
ಸುಶ್ರುತ, ಹೋಗದಾದ್ರೆ ಹೇಳು.. ನಾನೂ ಬರ್ತಿ..
ವಿಕಾಸ್, ಇರಬಹುದು. ಇಂಥ ಹಂತ ಹಂತವಾಗಿ ಬೀಳೋ ಜಲಪಾತಗಳು ನೋಡೋದಕ್ಕೆ ಸುಂದರವಾಗಿರುತ್ತವೆ. ದೂಧ್ ಸಾಗರ್, ಗಗನಚುಕ್ಕಿ/ಭರಚುಕ್ಕಿ ಜಲಪಾತಗಳು ಉತ್ತಮ ನಿದರ್ಶನಗಳು.
ಕುಂಚಿಕಲ್ ಕೂಡ ಹಂತ ಹಂತವಾಗಿ ಬೀಳುವಂಥದ್ದು ಅಂತ ಕೇಳಿದಮೇಲೆ ಅಲ್ಲಿಗೆ ಹೋಗಬೇಕೆಂಬ ಆಸೆ ಉತ್ಕಟವಾಗುತ್ತಿದೆ :)
ಇತರರಂತೆ ನನಗೂ ಇದರ ಬಗ್ಗೆ ಗೊತ್ತಿರಲಿಲ್ಲ. ತುಂಬ ಥ್ಯಾಂಕ್ಸ್!
ನನಗೂ ಗೊತ್ತಿರಲಿಲ್ಲ. ವಿವರವಾಗಿ ತಿಳಿಸಿದ್ದಕ್ಕೆ ಥ್ಯಾಂಕ್ಸ್.
ಹೇಗೂ ಕುಂಚಿಕಲ್ ಗೆ ಹೋಗುವ ಪ್ಲಾನ್ ಹಾಕಿದ್ದೀರಲ್ಲ! ಹೋಗಿ ಬಂದ ಮೇಲೆ ಅದರ ಪೋಟೋ ಹಾಕಿ.
ಚಕೋರ ಸಂಕೇತ್ ಹಾಗೂ ನೀಲಗಿರಿಯ ಅನಿಲ್-ಗಿರಿಜಾ ಅವರಿಗೆ ನಮ್ಮ ಬ್ಲಾಗಿಗೆ ಸ್ವಾಗತ.
ಧನ್ಯವಾದಗಳು.. ಬರುತ್ತಿರಿ, ಬರೆಯುತ್ತಿರಿ :)
ನಮಸ್ಕಾರ,
ಮಾಹಿತಿಪೂರ್ಣ ಬರಹ. ಎಲ್ಲಾ ಸರಿ, ಇಲ್ಲಿಗೆಲ್ಲಾ ಯಾವಾಗ ಹೋಗ್ತಿದ್ದೀರಾ, ನಮಗೂ ತಿಳಿಸಿ ಮಾರಾಯ್ರೆ...
ಧನ್ಯವಾದಗಳು.
ಜೋಮನ್.
ಜೋಮನ್, ನಾವು ಯಾವಾಗ ಹೋಗುತ್ತೆವೋ ಗೊತ್ತಿಲ್ಲ. ಹೋಗುವುದಾದರೆ ಖಂಡಿತ ತಿಳಿಸುತ್ತೇವೆ :-)
ಗೊತ್ತೇ ಇರದ ವಿಷಯವನ್ನು ಪತ್ತೆ ಮಾಡಿ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿದ್ದೀರಿ.
ಧನ್ಯವಾದಗಳು.
First of all sorry for writing in english, kannada ee machine nalli installed ille.
Currently as far as I have studied, height of the falls is not calculated as single drop. If there are multiple drops, then it still is considered as one single falls, although single drop falls are more aesthetic. This can be the reason why "kunchigal" is calculated as highest falls in India.
I have never been to "kunchigal" nor have I met anyone who has been there. Even though "kunchigal" might be statistically highest falls in India, I somehow feel that, there wont be a single drop as deep as joga. Kunchigal may not be as breathtaking as Joga. This is my guess, and I stand corrected if proven otherwise..
Happy trecking. Good post.
-Chin
ಸುಧೇಶ್, ಪ್ರತಿಕ್ರಿಯೆಗೆ ಧನ್ಯವಾದಗಳು.
Chin, ಕನ್ನಡ ಇಲ್ಲದ ಕಂಪ್ಯೂಟರ್ ನಲ್ಲಿಯೂ ಕನ್ನಡ ಬರೆಯಬಹುದು!
ಇಲ್ಲಿ ನೋಡಿ: Google Transliterator
ಕಾಮೆಂಟ್ ಪೋಸ್ಟ್ ಮಾಡಿ