ಮೊದಲನೆಯ ಭಾಗದಿಂದ ಮುಂದುವರೆದಿದೆ
ಏನಾದರೂ ಒಂದು ಉಪಾಯವನ್ನು ಹುಡುಕುವುದು ಅನಿವಾರ್ಯವಾಗಿತ್ತು. ಆಕೆ ಮತ್ತೆ ಮೊಬೈಲ್ ಕೇಳದಂತೆ ಮಾಡಬೇಕಿತ್ತು. ಯಾವುದೇ ಕರೆ ಬರದಂತೆ ಮೊಬೈಲ್ ಅನ್ನು ಆಫ್-ಲೈನ್ ಮೋಡಿಗೆ ಬದಲಾಯಿಸಿ ಕುಳಿತೆ. ಮನಸ್ಸು ಸ್ವಲ್ಪ ನಿರಾಳವಾಯಿತು. ಸುಮಾರು ಅರ್ಧ ಘಂಟೆ ಹೀಗೇ ಕಳೆದಿರಬಹುದು. ಇಷ್ಟು ಹೊತ್ತು ನನ್ನ ಮುಖದಲ್ಲಿದ್ದ ದುಗುಡ ಈಗ ಆಕೆಯ ಮುಖಕ್ಕೆ ಸ್ಥಳಾಂತರಗೊಂಡಂತೆ ಕಂಡುಬಂದಿತು. ಭರಮಸಾಗರದ ಹತ್ತಿರ ಬಂದಾಗ "ಫೋನ್ ಬಂತಾ" ಎಂದು ಕೇಳಿದಳು. "ಇಲ್ಲ" ಎಂದಷ್ಟೇ ಉತ್ತರಿಸಿ ಸುಮ್ಮನಾದೆ. ಆಕೆ ಅತ್ತಿತ್ತ ಯಾರನ್ನೋ ಹುಡುಕುತ್ತಿರುವಂತೆ ಕಂಡುಬಂದಿತು. ಭರಮಸಾಗರದಲ್ಲಿ ಬಸ್ ನಿಂತಾಗ ರಸ್ತೆಯ ಎರಡೂ ಬದಿಗೆ ನೋಡಿದಳು. ಯಾರೂ ಪರಿಚಯದವರು ಕಂಡಿರಲಿಕ್ಕಿಲ್ಲ. ಸುಮ್ಮನೆ ಕುಳಿತಳು. ಮುಖದಲ್ಲಿನ ಆತಂಕ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದುದು ಕಂಡುಬಂದಿತು. ಆದರೆ ಮತ್ತೆ ನನ್ನನ್ನು ಯೋಚಿಸುವಂತೆ ಮಾಡುವಲ್ಲಿ ಆಕೆಯ ಈ ವರ್ತನೆ ಸಫಲವಾಗಿತ್ತು.
ಅಲ್ಲಿ ಯಾರನ್ನು ಹುಡುಕುತ್ತಿರಬಹುದು? ಆಕೆಯ "ಅಣ್ಣ" ಭರಮಸಾಗರದಲ್ಲಿದ್ದಿರಬಹುದೆ? ಮತ್ತೆ ಮತ್ತೆ ಕರೆ ಮಾಡಿ ಬಸ್ಸಿನ ಬರುವಿಕೆಯನ್ನು ಗೊತ್ತುಪಡಿಸಿಕೊಳ್ಳುವ ಇಚ್ಛೆಯಿದ್ದಿರಬಹುದೆ? ಇವರ ಒಂದು ದೊಡ್ಡ ಗುಂಪೇ ಇರಬಹುದೆ? ಮನಸ್ಸು ಮತ್ತೆ ಕಲಸುಮೇಲೋಗರವಾಯಿತು.
ನಾನು ಹೋಗಬೇಕಾಗಿದ್ದಿದ್ದು ವೈಟ್‍ಫೀಲ್ಡಿನಲ್ಲಿರುವ ಭಾವನ ಮನೆಗೆ. ಬಸ್ಸು ಹೋಗುವಷ್ಟರಲ್ಲಿ ಸಂಜೆಯಾಗಿರುತ್ತದೆ. ಅಲ್ಲಿಗೆ ತಿಳಿಸುವುದು ಅನಿವಾರ್ಯವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಮೊಬೈಲ್ ಇದ್ದೂ ಇಲ್ಲದಂತಾಗಿದ್ದರಿಂದ ಅದೊಂದು ದೊಡ್ಡ ಸಮಸ್ಯೆಯೇ ಆಗಿ ಪರಿಣಮಿಸಿತು. ಹೀಗೇ ಯೋಚಿಸುವಷ್ಟರಲ್ಲಿ ಚಿತ್ರದುರ್ಗ ಸಮೀಪಿಸಿತ್ತು. ಬೆಂಗಳೂರಿಗೆ ಹೋಗುವಷ್ಟರಲ್ಲಿ ಮೊಬೈಲ್ ನನ್ನ ಬಳಿ ಇರುವುದೇ ಅನುಮಾನವಾಗಿದ್ದರಿಂದ ಇಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ. ಈಗಲೇ ತಿಳಿಸಿಬಿಡೋಣವೆಂದು ಚಿತ್ರದುರ್ಗದಿಂದ ಹೊರಟ ನಂತರ ಮತ್ತೆ ಜನರಲ್ ಮೋಡ್‍ಗೆ ಬದಲಾಯಿಸಿದೆ. ಒಂದೆರಡು ಸೆಕೆಂಡುಗಳಾಗಿರಬಹುದು... ಕರೆ ಬಂದಿತು! ಆಕೆಯ ’ಅಣ್ಣ’ನದು!!
ಅವಳ ಕೈಯಲ್ಲಿ ಮೊಬೈಲ್ ಕೊಟ್ಟು ಮತ್ತೆ ಸುಮ್ಮನೆ ಕುಳಿತೆ. ಮತ್ತೆ ಹರಟೆ ಹೊಡೆಯಲಾರಂಭಿಸಿದಳು. ಆದರೆ ಸುಮಾರು ಐದು ನಿಮಿಷಗಳಾಗುವಷ್ಟರಲ್ಲಿ ಸ್ಪೈಸ್ ನೆಟ್‍ವರ್ಕ್ ಪ್ರಭಾವದಿಂದ ಕಾಲ್ ಕಟ್ ಆಯಿತು. ಹಿಂದೆ ಮುಂದೆ ನೋಡದೆ ಮತ್ತೆ ಆಫ್‍ಲೈನ್ ಮೋಡ್‍ಗೆ ಬದಲಾಯಿಸಿದೆ. ಆಕೆಯೇ ಮಾತು ಆರಂಭಿಸಿದಳು:
"ನೀವು ಎಲ್ಲಿಂದ ಬರ್ತಾ ಇದೀರ?"
"ಹರಿಹರದಿಂದ"
"ಅದು ನಿಮ್ಮೂರಾ?"
"ಅಲ್ಲ. ನಮ್ಮ ನೇಟಿವ್ ಸಾಗರ"
"ಬೆಂಗಳೂರಲ್ಲಿ ಏನ್ ಮಾಡ್ತೀರ?"
"ನಾಡಿದ್ದು ಕೆಲಸಕ್ಕೆ ಜಾಯ್ನ್ ಆಗ್ಬೇಕು. ಅದ್ಕೆ ಹೊರ್ಟಿದೀನಿ"
"ಓಹ್ ಹೌದಾ, ಆಲ್ ದಿ ಬೆಸ್ಟ್"
"ಥ್ಯಾಂಕ್ಸ್"
...
...
ಆಕೆ ಅಷ್ಟೊಂದು ವಿಚಾರಿಸುತ್ತಿದ್ದಾಳೆ. ಯಾಕಿರಬಹುದು? ಯಾವುದಕ್ಕೂ ಅವಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯುವುದು ಒಳ್ಳೆಯದು ಎಂದು ನಾನೂ ಕೇಳಲಾರಂಭಿಸಿದೆ.
"ನಿಮ್ಮೂರು ದಾವಣಗೆರೆನಾ?"
"ಅಲ್ಲ, ರಾಣೆಬೆನ್ನೂರು"
"ಮತ್ತೆ ದಾವಣಗೆರೆಯಲ್ಲಿ ಹತ್ತಿದ್ರಲ್ಲ?"
"ಅಲ್ಲಿ ರಿಲೇಟಿವ್ಸ್ ಮನೆಗೆ ಬಂದಿದ್ದೆ"
"ರಾಣೆಬೆನ್ನೂರಿನಲ್ಲಿ ಏನ್ ಮಾಡ್ತೀರ?"
"ಸೆಕೆಂಡ್ ಇಯರ್ ಪಿ.ಯು.ಸಿ. ಮಾಡ್ತಿದೀನಿ. ಕಾಮರ್ಸ್"
"ಬೆಂಗಳೂರಿನಲ್ಲಿ ಯಾರಿದ್ದಾರೆ?"
"ನಮ್ಮಣ್ಣನ ಮನೆಗೆ ಹೋಗ್ತಿದೀನಿ"
"ನಿಮಗೆ ಈಗ ಕಾಲೇಜ್ ನಡೀತಿಲ್ವಾ?"
"ನಡೀತಿದೆ, ನಾಲ್ಕ್ ದಿನ ಅಣ್ಣನ ಮನೇಲಿದ್ದು ಬರ್ತೀನಿ"
...
...
ಕಾಲೇಜ್‍ಗೆ ಬಂಕ್ ಮಾಡಿ ಸುಮ್ಮನೆ ಅಣ್ಣನ ಮನೆಗೆ ಹೋಗಲು ಹೇಗೆ ಸಾಧ್ಯ? ಮೊದಲನೇ ಬಾರಿ ಒಬ್ಬಳೇ ಹೊರಟಿದ್ದೇನೆ ಎಂದು ಬೇರೆ ಹೇಳಿದ್ದಳು. ನನ್ನ ಮನಸ್ಸಿನಲ್ಲಿದ್ದ ಎಲ್ಲ ಊಹೆಗಳೂ ನಿಜವಾಗಿರುವಂತೆ ಕಂಡುಬಂದಿತು. ಹಾಗೇ ಹಿರಿಯೂರು ತಲುಪಿದೆವು. ಅಲ್ಲಿ ಯಾವುದೋ ಹೋಟೆಲ್ ಮುಂದೆ ಬಸ್ ನಿಲ್ಲಿಸಿ "ಇಪ್ಪತ್ ನಿಮಿಷ ಟೈಮ್ ಐತ್ರಿ" ಎಂದು ಹೇಳಿ ಕಂಡಕ್ಟರ್ ಇಳಿದುಹೋದ.
"ಏನಾದ್ರೂ ತೊಗೋತೀರಾ?"
"ಇಲ್ಲ"
"ಏನೂ ಬೇಡ್ವಾ?"
"ಬೇಡ"
"ನಾನೇನಾದ್ರೂ ತೊಗೋತೀನಿ"
"ಹೂಂ"
ಇಳಿದು ಹೋಗಿ ಸ್ಪ್ರೈಟ್ ತಂದು ಕುಡಿಯುತ್ತಾ ಕುಳಿತಳು. ನನಗೆ ಬೇಕೇ ಎಂದು ಮತ್ತೆ ವಿಚಾರಿಸಿದಳು. ಅಷ್ಟರಲ್ಲಿ ಯಾರೋ ಒಬ್ಬ ಹತ್ತಿ ನಾವು ಕುಳಿತಿದ್ದ ಸೀಟಿನಲ್ಲಿಯೇ ಕುಳಿತ. ಶಿರಾಕ್ಕೆ ಹೋಗುವವನಾಗಿದ್ದ.
ಸುಮಾರು ಇಪ್ಪತ್ತೈದು ಮೂವತ್ತು ವರ್ಷದವನಿರಬಹುದು. ಮಹಾ ವಾಚಾಳಿ. ಬಂದು ಸ್ವಲ್ಪ ಹೊತ್ತಿನಲ್ಲೇ ಆಕೆಯ ಜೊತೆ ಲೋಕಾಭಿರಾಮವಾಗಿ ಹರಟಲಾರಂಭಿಸಿದ. ಕೇಳಿದರೂ ಕೇಳದಂತೆ ಅವರ ಸಂಭಾಷಣೆಯನ್ನಾಲಿಸುತ್ತಾ ಕುಳಿತೆ. ನನಗೆ ಹೇಳಿದ್ದ ತನ್ನ ಪುರಾಣವನ್ನು ಪುನರಾವರ್ತಿಸಿದಳು. ನಂತರ ಅವನ ಮೊಬೈಲ್ ತೆಗೆದುಕೊಂಡು ಇಪ್ಪತ್ತು ನಿಮಿಷ ಅಣ್ಣನ ಜೊತೆ ಮಾತನಾಡಿದಳು. ಆಗ ನಾನು ನನ್ನ ಮೊಬೈಲನ್ನು ಮತ್ತೆ ಜನರಲ್ ಮೋಡಿಗೆ ಬದಲಾಯಿಸಿ ಕುಳಿತೆ. ಮತ್ತೆ ತನ್ನ ಪುರಾಣ ಮುಂದುವರೆಸಿ ಆಕೆಯ ಅಣ್ಣ ದೇವನಹಳ್ಳಿಯಲ್ಲಿರುವುದಾಗಿಯೂ ತುಮಕೂರಿಗೆ ಬರುತ್ತಿರುವುದಾಗಿಯೂ ತಿಳಿಸಿದಳು. ಅಲ್ಲದೇ ತುಮಕೂರಿನಲ್ಲಿಯೇ ಇಳಿಯುವ ನಿರ್ಧಾರಕ್ಕೆ ಬಂದಳು.
ಇಷ್ಟಾದರೂ ಆಕೆಯ ಮಾತಿನ ದಾಹ ತೀರಿರಲಿಲ್ಲ. ಮತ್ತೆ ಅವನ ಮೊಬೈಲ್ ತೆಗೆದುಕೊಂಡು ಮಾತನಾಡಲಾರಂಭಿಸಿದಳು. ಶಿರಾ ಸಮೀಪಿಸಿತ್ತು. ಮಾತನಾಡುತ್ತಲೇ ಇದ್ದಳು. ಬಸ್ ಸ್ಟ್ಯಾಂಡ್ ಬಂದಿತು. ಊಹುಂ. ಆಕೆಯೆ ಮಾತೂ ಇನ್ನೂ ಮುಗಿದಿರಲಿಲ್ಲ. ಆತ ಇಳಿಯಲೆಂದು ಎದ್ದು ಮೊಬೈಲಿಗಾಗಿ ಕಾಯುತ್ತಾ ನಿಂತ. ಆಗ ಇದ್ದಕ್ಕಿದ್ದಂತೆ ಮಾತು ಮುಗಿಸಿ ಮೊಬೈಲ್ ಹಿಂದಿರುಗಿಸಿದಳು.
ಮುಂದಿನ ಪ್ರಯಾಣಕ್ಕೆ ಮತ್ತೆ ನನ್ನ ಫೋನೇ ಆಕೆಯ ಸಾಥಿಯಾಯಿತು. ಐದೈದು ನಿಮಿಷಕ್ಕೊಮ್ಮೆ ಮಾತನಾಡಲಾರಂಭಿಸಿದಳು. ಪ್ರತಿ ಬಾರಿ ಹತ್ತು ನಿಮಿಷಕ್ಕಿಂತ ಫೋನ್ ಇಡುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಆಕೆಯ ಅಣ್ಣ ಆಗಲೇ ತುಮಕೂರಿಗೆ ಬಂದು ಸೇರಿಯಾಗಿತ್ತು. ತುಮಕೂರಿನ ಹತ್ತಿರ ಬಂದಾಗ ನನಗೇನೋ ಆತಂಕ. ಅಷ್ಟರಲ್ಲಿ ಕಳ್ಳರನ್ನು ಬೆನ್ನಟ್ಟಿರುವ ಪೊಲೀಸರಂತೆ ಅಣ್ಣನಿಗೆ ದಾರಿಯ ಮಾಹಿತಿ ನೀಡಲಾರಂಭಿಸಿದಳು...
"ಈಗ ಹೈವೇಯಿಂದ ಬಲಕ್ಕೆ ತಿರುಗ್ತಾ ಇದೆ... ಆಗ್ಲೇ ತುಮಕೂರು ಬಂತು ಮಗಾ... ಇಲ್ಲಿ ಏನೂ ಕಾಣ್ತಾ ಇಲ್ಲ... ಇಲ್ಲಿ ಯಾವ್ದೋ ದೊಡ್ಡ ಅಂಗಡಿ ಇದೆ ಮಗಾ... ಷೋ ರೂಮ್ ಇದೆ ನೋಡು... ಹನುಮಂತನ ಸ್ಟ್ಯಾಚ್ಯೂ ಇದೆ... ಸಿಟಿ ಒಳಗೆ ಬಂದಿದೆ ಬಸ್ಸು... ನೀನೆಲ್ಲಿದೀಯಾ? ಮೆಡಿಕಲ್ ಷಾಪ್ ಹತ್ರಾನಾ? ವೈಟ್ ಕಲರ್ ಮಾರುತಿ ಆಮ್ನಿಯಲ್ಲಿದೀಯಾ? ಓಕೆ ಮಗಾ... ಇದ್ಯಾವ್ದೋ ದೊಡ್ಡ ಬಿಲ್ಡಿಂಗ್ ಹತ್ರ ಬರ್ತಾ ಇದೆ... ಬಸ್ ಸ್ಟ್ಯಾಂಡ್ ಹತ್ರ ಬಂತು... ಟರ್ನ್ ಆಗ್ತಾ ಇದೆ"
ನನ್ನ ಎದೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಬಸ್ ನಿಂತಿತು. ಆಕೆ ಮಾತು ನಿಲ್ಲಿಸಿದಳು. ಮೊಬೈಲ್ ಹಿಂದಿರುಗಿಸಿ "ಥ್ಯಾಂಕ್ಸ್" ಎಂದು ಹೇಳಿ ಇಳಿದುಹೋದಳು...
ಹೊರಗಡೆ ನೋಡಿದೆ. ಯಾರೂ ಕಾಣಿಸಲಿಲ್ಲ. ಯಾವ ಆಮ್ನಿ ಕೂಡ ಕಾಣಲಿಲ್ಲ. ಮುಂದೆ ಅವಳೆಲ್ಲಿಗೆ ಹೋದಳೋ, ಅವಳಣ್ಣ ಸಿಕ್ಕಿದನೋ ಇಲ್ಲವೋ ದೇವರೇ ಬಲ್ಲ. ನಾನಂತೂ ಬೆಂಗಳೂರು ತಲುಪಿದೆ. ನನ್ನ ಎಲ್ಲ್ಲಾ ಶಂಕೆಗಳೂ ಸುಳ್ಳಾಗಿದ್ದವು. ನನ್ನ ಮೊಬೈಲ್ ನನ್ನ ಕೈಯಲ್ಲಿ ಸುರಕ್ಷಿತವಾಗಿತ್ತು. ನಾನಂದುಕೊಂಡಂತೆ ಆಕೆ ಕಳ್ಳಿಯಾಗಿರಲಿಲ್ಲ.
*******
ಜೋ ದಿಖ್ತಾ ಹೈ, ಹಮ್ ಕೋ ಲಗ್ತಾ ಹೈ, ಹೈ... ಔರ್ ಜೋ ನಹೀ ದಿಖ್ತಾ, ಹಮ್ ಕೋ ಲಗ್ತಾ ಹೈ, ನಹೀ ಹೈ...
ಲೇಕಿನ್ ಕಭೀ ಕಭೀ ಜೋ ದಿಖ್ತಾ ಹೈ ವೋ ನಹೀ ಹೋತಾ ಹೈ ಔರ್ ಜೋ ನಹೀ ದಿಖ್ತಾ, ವೋ ಹೋತಾ ಹೈ.
"ತಾರೇ ಜಮೀನ್ ಪರ್" ಚಿತ್ರದಲ್ಲಿ ಇಶಾನ್ ನಂದಕಿಶೋರ್ ಅವಸ್ಥಿ ಎಂಬ ಮುಗ್ಧ ಬಾಲಕನ ಮೂಲಕ ಹೇಳಿಸಿರುವ ಈ ಮಾತಿಗೆ ಎಷ್ಟು ಅರ್ಥವಿದೆಯಲ್ಲವೆ? ನೀವೇನಾದರೂ "ತಾರೇ ಜಮೀನ್ ಪರ್" ಅನ್ನು (ಇನ್ನೂ) ನೋಡಿರದಿದ್ದರೆ ಮೊದಲು ಆ ಕೆಲಸ ಮಾಡಿ!!
ಶುಕ್ರವಾರ, ಫೆಬ್ರವರಿ 1, 2008
ಭಾನುವಾರ, ಜನವರಿ 6, 2008
ಅಪರಿಚಿತ ಹುಡುಗಿಯೊಂದಿಗೆ... (ಭಾಗ-೧)
ಅದು ಶಿರಸಿಯ ಪ್ರಯಾಣವಿರಬಹುದು, ಸಾಗರದ ಪ್ರಯಾಣವಿರಬಹುದು, ಪ್ರತಿಯೊಂದು ಪ್ರಯಾಣದಲ್ಲೂ ಏನಾದರೂ ಘಟಿಸದಿದ್ದರೆ ನನ್ನ ಪ್ರಯಾಣ ಮುಗಿಯುವುದಿಲ್ಲ ಎನಿಸುತ್ತಿದೆ. ಈಗ ಅದಕ್ಕೊಂದು ಹೊಸ ಸೇರ್ಪಡೆ...
೨೦೦೭ರ ಅಕ್ಟೋಬರ್ ೧೧ನೇ ತಾರೀಖು ಗುರುವಾರ ಕೆಲಸಕ್ಕೆ ಸೇರಬೇಕಾಗಿತ್ತು. ಕೆಲವು ಪಂಚಾಂಗಗಳ ಪ್ರಕಾರ ಆ ದಿನ ಅಮಾವಾಸ್ಯೆ. ಅದರಲ್ಲೂ ಮಹಾಲಯ ಅಮಾವಾಸ್ಯೆ. ಇನ್ನು ಕೆಲವು ಪಂಚಾಂಗಗಳ ಪ್ರಕಾರ ಬುಧವಾರವೇ ಅಮಾವಾಸ್ಯೆ. ಹೀಗಾಗಿ ಯಾವುದರ ಗೊಡವೆಯೇ ಬೇಡ ಎಂದು ಮಂಗಳವಾರ ಮಧ್ಯಾಹ್ನ ಸುಮಾರು ೧೨:೩೦ ರ ಸಮಯ ಒಂದು ಸೂಟ್‍ಕೇಸ್, ಇನ್ನೊಂದು ಬ್ಯಾಗ್ ಹಿಡಿದು ಹರಿಹರದ ಬಸ್ ಸ್ಟ್ಯಾಂಡ್ ಬಳಿ ಬಂದೆ. ಅಪ್ಪ ಅಮ್ಮ ನನ್ನನ್ನು ಕಳಿಸಲು ಬಂದಿದ್ದರು. ಅಲ್ಲಿ ನೋಡಿದರೆ ಬೆಂಗಳೂರಿಗೆ ಹೋಗುವ ಯಾವುದೇ ಬಸ್ ಇರಲಿಲ್ಲ. ಹೀಗಾಗಿ ದಾವಣಗೆರೆಗೆ ಹೋಗಿ ಅಲ್ಲಿಂದ ಬೆಂಗಳೂರಿನ ಬಸ್ ಹಿಡಿದರಾಯಿತು ಎಂದು ನಿರ್ಧರಿಸಿ ದಾವಣಗೆರೆಯ ಬಸ್ ಹತ್ತಿದೆವು. ಹರಿಹರದಲ್ಲಿ ಕಳೆದಿದ್ದ ದಿನಗಳನ್ನು ನೆನಪಿಸಿಕೊಂಡು ಕಂಠ ಗದ್ಗದಿತವಾಗಿತ್ತು. ಅಮ್ಮನ ಮುಖ ನೋಡಿದಾಗ ಅಳು ಬರುವಂತಾಗುತ್ತಿತ್ತು. ಹಾಗಾಗಿ ಹೊರಗೆ ನೋಡುತ್ತಾ ಕುಳಿತೆ. ನಾನು ಓದಿದ ಶಾಲೆ-ಕಾಲೇಜು, ಆಡಿದ ಆಟದ ಮೈದಾನ, ನನ್ನ ಸಹಪಾಠಿಗಳು, ಗೆಳೆಯರು ಎಲ್ಲ ಒಮ್ಮೆ ಕಣ್ಣ ಮುಂದೆ ಹಾದು ಹೋಗುತ್ತಿದ್ದವು. ಅಷ್ಟರಲ್ಲಿ ದಾವಣಗೆರೆ ಬಂದಿತ್ತು. ನನ್ನನ್ನು ಬಸ್ ಹತ್ತಿಸಿ ಅಪ್ಪ-ಅಮ್ಮ ತಿರುಗಿ ಹರಿಹರದ ದಾರಿ ಹಿಡಿದರು. ಮನಸ್ಸು ಭಾರವಾಗಿತ್ತು. ಏನೇನೋ ಯೋಚನೆಗಳು ಬರುತ್ತಿದ್ದವು. ಮೂರು ಸೀಟಿನ ಬದಿಯಲ್ಲಿ ಕಿಟಕಿಯ ಬಳಿ ಒಂದು ಜಾಗ ಹಿಡಿದು ಕುಳಿತೆ. ಬಸ್ ಹೊರಟಿತು.
ಅಷ್ಟರಲ್ಲಿ ಒಬ್ಬಳು ಹುಡುಗಿ, ಸುಮಾರು ೧೮-೧೯ ವರ್ಷದವಳಿರಬಹುದು, ಖಾಲಿ ಇದ್ದ ನನ್ನ ಪಕ್ಕದ ಸೀಟಿನಲ್ಲಿ ಬಂದು ಕುಳಿತಳು. ಮನಸ್ಸು ಪೂರ್ತಿ ನಾನು ಬೆಂಗಳೂರಿನಲ್ಲಿ ಮಾಡಬೇಕಾಗಿದ್ದ ಕೆಲಸಗಳ ಕಡೆಗೇ ಇದ್ದಿದ್ದರಿಂದ ಆಕೆಯ ಕಡೆ ಹೆಚ್ಚು ಗಮನ ಹೋಗಲಿಲ್ಲ. ಒಂದೈದು ನಿಮಿಷ ಆಗುವಷ್ಟರಲ್ಲಿ ನನ್ನ ಸ್ನೇಹಿತನ ಕರೆ ಬಂದಿತು. ಸ್ವಲ್ಪ ಹೊತ್ತು ಮಾತನಾಡಿ ನಂತರ ಮೊಬೈಲ್‍ನಲ್ಲಿ ಹಾಡು ಕೇಳುತ್ತಾ ಕುಳಿತೆ.
"ಎಕ್ಸ್‍ಕ್ಯೂಸ್ ಮಿ.. ಸ್ವಲ್ಪ ಮೊಬೈಲ್ ಕೊಡ್ತೀರಾ?"
"..."
"ನಾನು ಈ ಬಸ್ಸಿಗೆ ಬರ್ತಿರೋದನ್ನ ನಮ್ಮಣ್ಣಂಗೆ ಹೇಳ್ಬೇಕು. ಮಿಸ್ಡ್ ಕಾಲ್ ಕೊಡ್ತೀನಿ, ಕಾಲ್ ಮಾಡ್ತಾರೆ"
"ನಂಬರ್ ಹೇಳಿ, ನಾನೇ ಮಾಡ್ತೀನಿ"
"9844xxxxxx"
ಕಾಲ್ ಮಾಡಿದೆ. ಕಟ್ ಮಾಡುವಷ್ಟರಲ್ಲಿ ಎತ್ತಿಬಿಟ್ಟಿದ್ದ ಆಕೆಯ ಅಣ್ಣ. ಸ್ಪೈಸ್ ಟು ಸ್ಪೈಸ್ ತಾನೆ, ಹೋಗಲಿ, ಎಂದು ಸುಮ್ಮನಿದ್ದೆ. ಒಂದರ್ಧ ನಿಮಿಷದಲ್ಲಿ ಅವರಣ್ಣನ ಕರೆ ಬಂತು. ಆಕೆಯ ಕೈಗೆ ಮೊಬೈಲ್ ಕೊಟ್ಟು ಹೊರಗೆ ನೋಡುತ್ತಾ ಕುಳಿತೆ. ಒಂದು ನಿಮಿಷ, ಎರಡು ನಿಮಿಷ, ಐದು ನಿಮಿಷ.. ಊಹುಂ, ಅವಳ ಕರೆ ಅಂತ್ಯವಾಗುವ ಯಾವುದೇ ಲಕ್ಷಣಗಳಿರಲಿಲ್ಲ. ಯಾವ ಬಸ್ ಹತ್ತಿದ್ದೇನೆ, ಎಷ್ಟು ಹೊತ್ತಿಗೆ ಹತ್ತಿದ್ದೇನೆ, ಏನು ಊಟ ಮಾಡಿದೆ.. ಹೀಗೇ ಸಾಗುತ್ತಿತ್ತು ಆಕೆಯ ಮಾತು. ಅದೂ ಅಲ್ಲದೆ ಆಕೆಯ ಸೋ-ಕಾಲ್ಡ್ ಅಣ್ಣನನ್ನು "ಮಗಾ" ಎಂದು ಸಂಬೋಧಿಸುತ್ತಿದ್ದಳು. ಅಷ್ಟರಲ್ಲಿ ಕಂಡಕ್ಟರ್ ಬಂದು ಟಿಕೆಟ್ ಕೇಳಿದ. ಸುಮ್ಮನೆ ತನ್ನ ಟಿಕೆಟ್ ತೆಗೆಸುವ ಬದಲು "ಎಲ್ಲಿಗೆ ಹೋಗ್ತಿದೀರಿ ನೀವು?" ಎಂದು ನನ್ನನ್ನು ಕೇಳಿದಳು. ಎಲಾ ಇವಳ! ತನ್ನ ಟಿಕೆಟ್ ತೆಗೆಸಲು ನನ್ನ ಬಗ್ಗೆ ಯಾಕೆ ಕೇಳ್ತಿದ್ದಾಳೆ ಎಂದುಕೊಂಡೆ. ಆದರೂ ಮುಖದಲ್ಲೇನೂ ತೋರಗೊಡದೆ, "ಬೆಂಗಳೂರು" ಎಂದು ನನ್ನ ಟಿಕೆಟ್ ತೆಗೆದುಕೊಂಡೆ. "ನನಗೂ ಬೆಂಗಳೂರಿನ ಟಿಕೆಟ್ ಕೊಡಿ" ಎಂದಳು. ಹಾಗೆಯೇ ಆಕೆಯ ಕರೆಯೂ ಮುಗಿದಿತ್ತು. ಮೊಬೈಲ್ ವಾಪಸ್ ಕೊಟ್ಟಳು. "ಮತ್ತೆ ಮಾಡ್ತಾ ಇರ್ತಾರಂತೆ" ಎಂದಳು.
ಮನಸ್ಸು ಒಂದೇ ಸಮನೆ ತರ್ಕ ಶುರು ಮಾಡಿತು. ಯಾರೇ ಆಗಲಿ, ಬೇರೆಯವರ, ಅದೂ ಅಪರಿಚಿತರ ಮೊಬೈಲ್ ತೆಗೆದುಕೊಂಡು ಇಷ್ಟೊಂದು ಮಾತನಾಡುತ್ತಾರೆಯೆ? "ಏನ್ ಮಗಾ" ಎಂದು ಅಣ್ಣನನ್ನು ಕರೆಯುತ್ತಿದ್ದ ಆಕೆಯ ಭಾಷೆಯೋ ಬಯಲಸೀಮೆಯಲ್ಲೇ ಹುಟ್ಟಿ ಬೆಳೆದ ನನಗೂ ಮುಜುಗರ ತರಿಸುವಂತಿತ್ತು. ಒಂದು ಹುಡುಗಿ ತನ್ನ ಅಣ್ಣನೊಂದಿಗೆ ಹೀಗೆ ಮಾತನಾಡಬಹುದೆ? ಅಥವಾ ಆಕೆ ಅಣ್ಣನಲ್ಲದೆ ಬೇರೆ ಯಾರೊಂದಿಗೋ ಮಾತನಾಡುತ್ತಿದ್ದಿರಬಹುದೆ? ಅಷ್ಟಕ್ಕೂ ತಾನು ಟಿಕೆಟ್ ತೆಗೆಸಲು ನನ್ನ ಗಮ್ಯಸ್ಥಾನ ಕೇಳುವ ಅವಶ್ಯಕತೆಯಾದರೂ ಏನಿತ್ತು? ಹಿಂದಿನ ವಿಚಾರಗಳೆಲ್ಲವೂ ಮಾಯವಾಗಿ ಮನಸ್ಸು ಪೂರ್ತಿ ಬೇರೆ ವಿಚಾರಗಳೇ ತುಂಬಿಕೊಂಡವು. ಬೆಂಗಳೂರಿನಲ್ಲಿ ಮೊಬೈಲ್ ಕಳೆದುಕೊಂಡಿದ್ದ ಇಬ್ಬರು ಗೆಳೆಯರು ನೆನಪಾದರು. ಒಬ್ಬೊಬ್ಬರದೂ ಒಂದೊಂದು ಕಥೆ. ಒಬ್ಬನು ಮೊಬೈಲ್‍ನಲ್ಲಿ ಮಾತನಾಡುತ್ತ ಬಸ್ ಇಳಿಯುವಾಗ ಕೈಯಿಂದಲೇ ಕಸಿದುಕೊಂಡು ಓಡಿಹೋಗಿದ್ದರು. ಇನ್ನೊಬ್ಬನ ಬಳಿ ಕಾಲ್ ಮಾಡಿಕೊಡುತ್ತೇನೆಂದು ಹೇಳಿ ಮೊಬೈಲ್ ತೆಗೆದುಕೊಂಡು ಅವನು ಅತ್ತಿತ್ತ ನೋಡುತ್ತಿದ್ದಾಗ ಚಳ್ಳೆ ಹಣ್ಣು ತಿನ್ನಿಸಿದ್ದರು. ಎರಡನೆಯ ಪ್ರಸಂಗಕ್ಕೂ ಈಗ ನಡೆಯುತ್ತಿದ್ದ ವಿದ್ಯಮಾನಕ್ಕೂ ತಾಳೆಯಾಗುವಂತೆ ಕಂಡುಬಂದಿತು. ನನ್ನ ಕೈಯಲ್ಲಿದ್ದಿದ್ದು Nokia N73m. ಕೇವಲ ಮೂರು ತಿಂಗಳ ಹಿಂದೆ ಕೊಂಡಿದ್ದು. ಅವರಣ್ಣ ಸ್ವಲ್ಪ ಹೊತ್ತಿನ ನಂತರ ಮತ್ತೆ ಕಾಲ್ ಮಾಡುತ್ತಾನೆ ಎಂದು ಬೇರೆ ಹೇಳಿದ್ದಳು. ಒಮ್ಮೆ ಯಾವ ಬಸ್ಸಿಗೆ ಬರುತ್ತಿದ್ದಾಳೆ ಎಂದು ತಿಳಿದ ಮೇಲೆ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಮಾತನಾಡುವಂಥದ್ದು ಏನಿದ್ದೀತು? ಮುಂದೆ ಘಟಿಸಬಹುದಾದ ಘಟನೆಗಳು, ಅವುಗಳ ಸಾಧ್ಯಾಸಾಧ್ಯತೆಗಳನ್ನು ಯೋಚಿಸಿ ಒಮ್ಮೆ ಎದೆ ಝಲ್ಲೆಂದಿತು.
ಮಂಗಳವಾರ ಪ್ರಯಾಣ ಶುಭಕರವಲ್ಲ ಎಂದು ಕೆಲವು ಗೆಳೆಯರು ಸೋಮವಾರವೇ ಹರಿಹರದಿಂದ ಹೊರಟಿದ್ದರು. ಏನಾದರೂ ಆಗಲಿ ಎಂದು ಅವರ ಮುಂದೆ ಕೊಚ್ಚಿಕೊಂಡು ಹೊರಟುಬಂದಿದ್ದ ನನಗೆ ಯಾಕಾದರೂ ಹೊರಟೆನೋ ಎಂದೆನಿಸಲು ಪ್ರಾರಂಭವಾಗಿತ್ತು. ನಾನು ಒಬ್ಬನೇ ಬೇರೆ ಇದ್ದೆ. ಅಕಸ್ಮಾತ್ ನಾನೆಂದುಕೊಂಡಂತೆಯೇ ಆದರೆ ಮೊಬೈಲ್ ನನ್ನ ಕೈ ಬಿಡುವುದು ಶತಃಸಿದ್ಧ. ಕೈಯಲ್ಲಿ ಎರಡು ಬ್ಯಾಗ್ ಬೇರೆ. ಮೊಬೈಲ್ ಕಸಿದುಕೊಂಡು ಓಡಿದರೆ ಅವರನ್ನು ಬೆನ್ನಟ್ಟುವಂತೆಯೂ ಇಲ್ಲ. ಈಗೇನು ಮಾಡುವುದು?
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ಭೂಃ ಮಾ ಸಂಗೋಽಸ್ತು ಅಕರ್ಮಣಿ
ಎಂಬ ಭಗವದ್ಗೀತೆಯ ವಾಕ್ಯ ನೆನಪಾಯಿತು.
(ಭಾಗ-೨ರಲ್ಲಿ ಮುಂದುವರೆದಿದೆ)

ಶನಿವಾರ, ನವೆಂಬರ್ 3, 2007
ಜೇನಿನ ಹೊಳೆಯೋ... ಹಾಲಿನ ಮಳೆಯೋ...
ನಮಸ್ಕಾರ! ಬಹಳ ದಿನವಾಗಿದೆ ಇಲ್ಲಿ ಬರೆದು... ಏನ್ ಮಾಡಲಿ ನಾನು ಏನ್ ಮಾಡಲಿ? ಕೇವಲ ನೀರು, ಶುದ್ಧ ಗಾಳಿ ಮುಂತಾದವುಗಳ ಅಭಾವದಿಂದ ಕಂಗೆಟ್ಟಿದ್ದ ಬೆಂಗಳೂರಿಗೆ ನಾನು ಬಂದಾಗಿನಿಂದ (ನನಗೆ) ಹೊಸ ಅಭಾವಗಳು ಶುರುವಾಗಿವೆ. ಬರೆಯೋದಕ್ಕೆ ಬಹಳ ವಿಷಯಗಳಿವೆ, ಆದರೆ ಸಮಯದ ಅಭಾವ. ಸಾಕಷ್ಟು ಸಮಯವಿದೆ, ಆದರೆ ಕಂಪ್ಯೂಟರ್ ಅಭಾವ. ಸಾಕಷ್ಟು ಕಂಪ್ಯೂಟರ್ ಗಳೂ ಇವೆ, ಆದರೆ ಇಂಟರ್ನೆಟ್ ಅಭಾವ. ಹೀಗೆ ಅಭಾವಗಳ ಸುಳಿಗೆ ಸಿಕ್ಕು ಭಾವದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ದೋಣಿಗೆ ಹುಟ್ಟು ಹಾಕುವ ಕಾಲ ಕೂಡಿ ಬಂದಿದೆ.
ರಾಜಧಾನಿಗೆ ನಾನು ಬಂದಾಗಿನಿಂದ ಅನುಭವಿಸಿರುವ ಕಷ್ಟ ಎಂದರೆ ಎಲ್ಲರಿಗೂ ತಿಳಿದಿರುವ ಟ್ರಾಫಿಕ್ ಜಾಮ್. ಅದರಲ್ಲಿ ಸಿಕ್ಕಿ ಹಾಕಿಕೊಂಡಾಗ ಬಹಳಷ್ಟು ಜನ ಮಾಡುವ ಕೆಲಸವೆಂದರೆ ಎಫ್.ಎಂ. ಕೇಳುವುದು ("ಸಿಗ್ನಲ್ ಅಲ್ಲೇ ಶೇವಿಂಗ್ ಮಾಡಿ, ಟ್ರಾಫಿಕ್ ನಲ್ಲೇ ಮೇಕಪ್ ಮಾಡಿ, ಪಾರ್ಕಿಂಗ್ ಲಾಟಲ್ ಪ್ರೀತಿ ಮಾಡ್ತಾರೋ" ಎನ್ನುವ ಅಮೇರಿಕಾ ಸಂಸ್ಕೃತಿ ಇಲ್ಲಿಲ್ಲವಲ್ಲ!). ಎಫ್.ಎಂ ಆದರೋ ಬರೀ ಕಂಗ್ಲಿಷ್ ಮಾತನಾಡುವ ಆರ್.ಜೆ. ಗಳ ತಂಡ, ಅವರ ನಿರುಪಯುಕ್ತ ಹರಟೆ ಹಾಗೂ ಅಲ್ಲೋ ಇಲ್ಲೋ ಕೆಲವು ಉತ್ತಮ ಹಾಡುಗಳು. ಆದರೆ ಬೇರೆ ಮನರಂಜನೆಯಿಲ್ಲದೆ ಬೆಂಗಾಡಾಗಿರುವ ಈ ಮನಸ್ಸಿಗೆ ಅದೇ ಓಯಸಿಸ್!
ನವೆಂಬರ್ ಬಂದ ತಕ್ಷಣ ಜಾಗೃತವಾಗುವ ಕನ್ನಡ ಸಂಘಗಳು ಎಂದಿನಂತೆ ಈ ಬಾರಿಯೂ ತಮ್ಮ ಕೆಲಸ ಮಾಡಿದವು, ರೇಡಿಯೋ ಜಾಕಿಗಳು ಯಥಾಪ್ರಕಾರ ಕಂಗ್ಲಿಷ್ ಮೆರೆದರು. ಇವೆಲ್ಲದರ ಮಧ್ಯೆ ಕನ್ನಡ ಬಾರದವರ/ಬಂದರೂ ಮಾತನಾದದವರ ಸಂದರ್ಶನ ಬೇರೆ. ಕರ್ನಾಟಕದಲ್ಲೇ ಓದಿ, ಬೆಳೆದಿದ್ದರೂ ಕನ್ನಡ ಮಾತನಾಡಲು ನಾಚುವ(?) ದೀಪಿಕಾ ಪಡುಕೋಣೆಯ ಸಂದರ್ಶನ ಇದರಲ್ಲೊಂದು. ಕನ್ನಡದ ಐಶ್ವರ್ಯ ಎಂದು ಹೆಸರಾಗಿರುವ ಇವಳಿಗೆ ಕನ್ನಡ ಮಾತನಾಡಲು ಅಂಜಿಕೆಯೇ ಅಳುಕೇ? ಆರ್.ಜೆ. ಕನ್ನಡದಲ್ಲಿ ಪ್ರಶ್ನೆ ಕೇಳುತ್ತಿದ್ದರೂ ಹಿಂದಿ ಅಥವಾ ಆಂಗ್ಲದಲ್ಲಿಯೇ ಉತ್ತರಿಸುತ್ತಿದ್ದ ಆಕೆಯ ಧೈರ್ಯ ಮೆಚ್ಚಲೇಬೇಕು. ಇನ್ನು ಐಶ್ವರ್ಯಾ ಬಚ್ಚನ್ ಅಂತೂ ತನಗೆ ಕನ್ನಡ ಬರುತ್ತದೆಂದು ಹೇಳಿಕೊಳ್ಳಲೂ ಇಷ್ಟಪಡುವುದಿಲ್ಲ. ಕನ್ನಡ ರಾಜ್ಯೋತ್ಸವದಂದೇ ಆಕೆ ಹುಟ್ಟಿದ್ದು ಕನ್ನಡಿಗರ ಕರ್ಮಕಾಂಡ. ಒಟ್ಟಿನಲ್ಲಿ ಇನ್ನೊಂದು ರಾಜ್ಯೋತ್ಸವ ಮುಗಿದಿದೆ. ನವೆಂಬರ್ ತಿಂಗಳಿನಲ್ಲಿ ಮಾತ್ರ ವ್ಯಕ್ತವಾಗುತ್ತಿದ್ದ ಕನ್ನಡಿಗರ ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗಿದೆ. ಜೇನಿನ ಹೊಳೆಯೋ... ಹಾಲಿನ ಮಳೆಯೋ... ಎಂಬ ಮಾತು ಡಾ|| ರಾಜ್ ರೊಂದಿಗೆ ಅವಸಾನವಾಗಿದೆಯೋ ಎಂಬ ಶಂಕೆ ಉಂಟಾಗುತ್ತಿದೆ.

ಸೋಮವಾರ, ಅಕ್ಟೋಬರ್ 8, 2007
ದೋಣಿ ಸಾಗಲಿ, ಮುಂದೆ ಹೋಗಲಿ...
ಹರಿಹರಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ... ಇದೇ ತಿಂಗಳು ೧೧ನೇ ತಾರೀಖಿನಿಂದ ಕೆಲಸಕ್ಕೆ ಸೇರಬೇಕಾಗಿರುವುದರಿಂದ ಬೆಂಗಳೂರಿಗೆ ಹೊರಡಲಿದ್ದೇನೆ. ಹೊಸ ಆಸೆ-ಆಕಾಂಕ್ಷೆಗಳೊಂದಿಗೆ ಹೊಸ ಬಾಳನ್ನು ಆರಂಭಿಸುತ್ತಿದ್ದೇನೆ. ಬಾಲ್ಯದ ಹುಡುಗಾಟಗಳು, ಗೆಳೆಯರ ಸಂಗ, ಶಾಲೆ-ಕಾಲೇಜುಗಳ ಜೀವನ ಇವೆಲ್ಲವಕ್ಕೂ ಸಾಕ್ಷಿಯಾದ ಈ ಊರು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಇದೇನಪ್ಪಾ, ಕೆಲಸಕ್ಕೆ ಸೇರುವವನಿಗೆ ಇಷ್ಟೊಂದು ಫೀಲಿಂಗಾ ಅನ್ಬೇಡಿ. ಇದಕ್ಕೆ ಕಾರಣವಿದೆ. ನಾನು ಬೆಂಗಳೂರಿಗೆ ಹೋಗುತ್ತಿರುವುದಷ್ಟೇ ಅಲ್ಲದೆ ನಮ್ಮ ಕುಟುಂಬವೂ ನಮ್ಮೂರಾದ ಮಂಚಾಲೆಯಲ್ಲಿ ನೆಲೆಸಲಿದೆ. ಹಾಗಾಗಿ ನಾನು ಮತ್ತೆ ಹರಿಹರಕ್ಕೆ ಎಂದು ಬರುತ್ತೇನೆ ಎಂಬುದು ಅನಿಶ್ಚಿತ. ಆದರೆ ಒಂದಂತೂ ಸತ್ಯ. ಅಸಂಖ್ಯ ಮಧುರ ನೆನಪುಗಳನ್ನು ನೀಡಿದ ಹರಿಹರ ಸದಾ ನನ್ನ ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುತ್ತದೆ...
ಉದ್ಯಾನನಗರಿಯ ಬದುಕು ಸುಂದರವಾಗಿರುತ್ತದೆಂದು ಆಶಿಸುತ್ತಾ ಬಾಳೆಂಬ ದೋಣಿ ಹೀಗೇ ಮುಂದುವರಿಯುತ್ತದೆಂದು ಬಯಸುತ್ತೇನೆ. ಕುವೆಂಪು ರಚಿಸಿರುವ ಮಿಸ್ ಲೀಲಾವತಿ ಚಿತ್ರದ ಈ ಹಾಡು ಈ ಸಮಯದಲ್ಲಿ ಪ್ರಸ್ತುತವೆಂದೆನಿಸುತ್ತಿದೆ:
ಇಷ್ಟು ದಿನ ನನ್ನೊಂದಿಗೆ ಇದ್ದ ಎಲ್ಲ ಗೆಳೆಯರಿಗೆ ನನ್ನ ಸ್ನೇಹಪೂರ್ವಕ ವಂದನೆಗಳು, ಧನ್ಯವಾದಗಳು

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ ||ಪ||
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||೧||
ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುಡುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿರೆ ||೨||
ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ||೩||
(ಈ ಹಾಡನ್ನು ಕನ್ನಡಆಡಿಯೋ.ಕಾಂ ನ ಈ ಪುಟದಿಂದ ಕೇಳಬಹುದು)
ಇಷ್ಟು ದಿನ ನನ್ನೊಂದಿಗೆ ಇದ್ದ ಎಲ್ಲ ಗೆಳೆಯರಿಗೆ ನನ್ನ ಸ್ನೇಹಪೂರ್ವಕ ವಂದನೆಗಳು, ಧನ್ಯವಾದಗಳು
ಶುಕ್ರವಾರ, ಸೆಪ್ಟೆಂಬರ್ 28, 2007
ಪ್ರೇಮದ ಕಡಲಲ್ಲಿ, ನೆನಪಿನ ದೋಣಿಯಲಿ.......
ಈಗ ಎಲೆಕ್ಷನ್ ಸಮಯ. ಎಲ್ಲಿ ನೋಡಿದರಲ್ಲಿ ಬ್ಯಾನರುಗಳು, ಪೊಸ್ಟರ್‌ಗಳು ಬೀದಿ ತುಂಬ ಕಾಣುತ್ತವೆ. ಹೀಗಿರುವಾಗ ನಾನು ನನ್ನ ಅಜ್ಜಿಯ ಮನೆಗೆ ಒಂದು ಮಧ್ಯಾಹ್ನ ಹೋದೆ. ಆ ಬೀದಿ ತುಂಬ ಜನ ಸೇರಿದ್ದರು. ನಾನು ಆಶ್ಚರ್ಯದಿಂದ ನೋಡುತ್ತ ಅಜ್ಜಿಯ ಮನೆ ಹೊಕ್ಕೆ. ಅಲ್ಲಿದ್ದ ನನ್ನ ಅಜ್ಜಿಯನ್ನು ಕೇಳಿದೆ 'ಯಾಕೆ ತುಂಬ ಜನ ಬೀದಿಯಲ್ಲಿದ್ದಾರೆ?' ಎಂದು. ಅಜ್ಜಿಯು ಚಿತ್ರನಟ ಶ್ರೀನಾಥ್ ಬಂದಿದ್ದಾರೆ ನಮ್ಮ ಪಕ್ಕದ ಮನೆಗೆ ಎಂದು ಹೇಳಿ ಅವರನ್ನು ಭೇಟಿ ಮಾಡಲು ಹೋದರು. ನನಗೆ ಚಿತ್ರನಟರೆಂದರೆ ಕಡಿಮೆ ಆಸಕ್ತಿ, ಆದ್ದರಿಂದ ನಾನು ಅವರನ್ನು ಭೇಟಿ ಮಾಡಲು ಹೋಗಲಿಲ್ಲ. ನನ್ನ ಬಾಲ್ಯ ಸ್ನೇಹಿತೆ (ಎದುರು ಮನೆಯ ಹುಡುಗಿ) ಬಂದು ನನ್ನನ್ನು ಬಲವಂತದಿಂದ ಎಳೆದುಕೊಂಡು ಶ್ರೀನಾಥ್ ರನ್ನು ಭೇಟಿಮಾಡಲು ಕರೆದುಕೊಂಡು ಹೋದಳು. ನೆರೆಮನೆಯಲ್ಲಿ ಜನ ಜಂಗುಳಿ ನೆರೆದಿತ್ತು.
ಶ್ರೀನಾಥ್ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಬಂದಿದ್ದರು. ನಮ್ಮ ಪಕ್ಕದ ಮನೆಯವರು ಆಪ್ತರಾಗಿದ್ದರಿಂದ ಶ್ರೀನಾಥ್ ಅವರೊಂದಿಗೆ ಕೆಲ ಸಮಯ ಮಾತನಾಡಲು ಅವಕಾಶ ಸಿಕ್ಕಿತು. ನನ್ನ ಅಜ್ಜಿಯು ಮತ್ತು ನನ್ನ ಸ್ನೇಹಿತೆ ವಟ ವಟನೆ ಮಾತನಾಡಲು ಶುರು ಮಾಡಿದರು ಶ್ರೀನಾಥ್ ರ ಅಭಿನಯವನ್ನು ಹೊಗಳಲು ಪ್ರಾರಂಭಿಸಿದರು. ನಾನು ಇದನ್ನೆಲ್ಲಾ ಸುಮ್ಮನೆ ಕೂತು ಕೇಳುತ್ತಿದ್ದೆ. ನಂತರ ನಾನು, ಅಜ್ಜಿ ಮತ್ತು ಗೆಳತಿ ಅವರ ಹಸ್ತಾಕ್ಷರ ಪಡೆದು ನಮ್ಮ ಮನೆಗೆ ಹೊರಟೆವು. ನನ್ನ ಸ್ನೇಹಿತೆ ಶ್ರೀನಾಥ್ ತುಂಬ ಚೆಲುವ ಅಲ್ಲವ, ನೋಡಲು ತುಂಬ ಕಲರ್ ಇದಾನೆ, ಆದರೆ ಟಿವಿಯಲ್ಲಿ ಸ್ವಲ್ಪ ಕಪ್ಪಗೆ ಕಾಣುತ್ತಾನೆ ಯಾಕೆ ಎಂದು ನನ್ನನ್ನು ಕೇಳಿದಳು... ಅವಳು ಈ ರೀತಿಯ ಬುದ್ಧಿವಂತಿಕೆಯ ಪ್ರಶ್ನೆ ಕೇಳುವುದು ಸರ್ವೇಸಾಮಾನ್ಯ. ಎಂದಿನಂತೆ ನಾನು ಕೂಡ ಆ ಪ್ರಶ್ನೆಗೆ ಒಂದು ನಗೆ ಬೀರಿದೆ. ಅವಳಿಗೆ ಬೇಕಾದ ಉತ್ತರ ಸಿಕ್ಕವಳಂತೆ ಮುಗುಳ್ನಕ್ಕಳು. ಇನ್ನು ನಾವು ನಮ್ಮ ಅಜ್ಜಿ ಮನೆಯ ಕಾಂಪೌಡ್ ಒಳಗೆ ನಿಂತು ನಮ್ಮ ಎಂದಿನ ಮಾತುಗಳನ್ನು ಪ್ರಾರಂಭಿಸಿದೆವು.
ಸ್ವಲ್ಪ ಹೊತ್ತಿನಲ್ಲೆ ಬೀದಿ ತುಂಬ ಜನಸ್ತೋಮ, ಕೆಲ ಹೆಂಗಳೆಯರು ಪ್ರಣಯರಾಜನ ಗೀತೆಗಳನ್ನು ಉವಾಚ ಮಾಡಲು ಶುರು ಮಾಡಿಯೇ ಬಿಟ್ಟರು. ಅವರ ಆ ನೃತ್ಯ ಹಾಗೂ ಹಾಡುವ ಶೈಲಿ ನೋಡಿ ನನ್ನ ಗೆಳತಿ ಹಾಗು ನಾನು ನಗೆಗಡಲಿನಲ್ಲಿ ತೇಲಿದೆವು. ಆಗ ಯಾರೋ ಒಬ್ಬ 'ಸ್ನೇಹದ ಕಡಲಲ್ಲಿ...' ಎನ್ನುವುದರ ಬದಲು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ' ಎಂದು ರಾಗ ಎಳೆದ.... ನಾನು ಪ್ರೇಮಿಯಂತೆ ನನ್ನ ಗೆಳತಿಯ ಕಡೆ ನೋಡಿದೆ... ಅವಳು ನಾಚಿ ನೀರಾದಳು... ನಾನು ಮುಗುಳ್ನಕ್ಕೆ. ಇದೆಲ್ಲಾ ನಡೆಯುತ್ತಿರುವಾಗ ಅಜ್ಜಿ ಒಳಗೆ ಅಡುಗೆ ಮನೆ ಕೆಲಸದಲ್ಲಿ ಮಗ್ನರಾಗಿದ್ದರು ಹಾಗೂ ಎದುರು ಮನೆಯ ಗೆಳತಿಯ ತಂದೆ ತಾಯಿ ಕೂಡ ಹೊರಗೆ ಬರಲಿಲ್ಲ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಹೊರಡುವ ಸಮಯ ಬಂದಿತು. ನನ್ನ ಅಜ್ಜಿಯನ್ನು ಹೊರಬರಲು ಕರೆದು ನಾನೂ ಹೊರಬಂದೆ. ಮನೆಗೆ ಹೋಗಿ ನನ್ನ ಗೆಳತಿ ಕೂಡ ತನ್ನ ತಾಯಿಯೊಂದಿಗೆ ಹೊರಬಂದಳು. ಪ್ರಣಯರಾಜ ತನ್ನ ಕಾರನ್ನು ಏರಿ ಹೊರಟು ನಮ್ಮ ಕಡೆಗೂ ಕೈ ಬೀಸಿ ಧನ್ಯವಾದಗಳನ್ನು ಅರ್ಪಿಸುತ್ತಾ ನನ್ನ ಅಜ್ಜಿಗೆ ಎರಡೂ ಕೈಗಳಿಂದ ನಮಸ್ಕರಿಸಿದರು. ಆಗ ಅಜ್ಜಿಯ ಮುಖದಲ್ಲಿ ಕಡಲು ಉಕ್ಕಿದಂತೆ ನಗು ಉಕ್ಕಿ ಹರಿಯಿತು. ಅವರು ಹೋದ ನಂತರ ನಾನು ಎದುರು ಮನೆಯ ಕಟ್ಟೆ ಮೇಲೆ ನಿಂತಿದ್ದ ಗೆಳತಿಯನ್ನು ನೋಡಿ ಮುಗುಳ್ನಕ್ಕು ಮನೆಯ ಒಳ ಬಂದೆ. ಆಗ ನನ್ನ ಬಿಸಿನೆಸ್ ಹೃದಯ ಒಂದೇ ಹಾಡನ್ನು ಹಾಡುತ್ತಿತ್ತು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ'!!
ನಾನು ಪ್ರಣಯರಾಜನಿಗೆ ಹೃದಯದಿಂದಲೇ ವಂದಿಸಿದೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)