ಸೋಮವಾರ, ಜನವರಿ 30, 2017

ಭ್ರಮಾಲೋಕ


 
 
ದಟ್ಟಡವಿಯೊಳು ದುಗುಡದಿ ನಡೆದಂತೆ ಬುದ್ಧಿಜೀವಿಗಳ ಬದುಕಾಗಿಹುದಯ್ಯಾ,
ತಾಕಂಡ ಕಾಣರಿಯದ ಬಲೆಯ ಹೆಣೆಯುತಲಿ ತಾವೇ ಬಲೆಗೆ ಸಿಲುಕುವರಯ್ಯಾ,
ಹಸನಾದ ಬದುಕಿನಲಿ ಹುಸಿ ಕನಸುಗಳ ಕಟ್ಟಿ ಹಳಸಿದ ಜೀವನ ನಡೆಸುವರಯ್ಯಾ,
ಸಂಬಂಧದೆಳೆಯ ಕಳಚಿ ಸಮಯವೆಂಬೆಳೆಯೊಳು ನಾನ್ ತಾಮುಂದೆನ್ನುತ ತೇಲುತಿಹರಯ್ಯಾ,
ತಿಳಿಯದಾ ಲೋಕದೊಳು ಭ್ರಮೆಯಂಬ ಮಾಯೆಯೊಳು ಮಂಪಿರುವ ಚಿತ್ತದಲಿ ಮುಳುಗುತಿಹರಯ್ಯಾ.

2 ಕಾಮೆಂಟ್‌ಗಳು:

sunaath ಹೇಳಿದರು...

ಹಸನಾದ ಬದುಕಿನಲಿ ಹುಸಿ ಕನಸುಗಳ ಕಟ್ಟಿ ಹಳಸಿದ ಜೀವನ ನಡೆಸುವರಯ್ಯಾ!
ವಾಹ್!Beautiful line.

vishutk ಹೇಳಿದರು...

ಧನ್ಯವಾದಗಳು.