ಶನಿವಾರ, ಜನವರಿ 30, 2016

ವಿಚಿತ್ರ

ಬೆಳೆಗೆ ಬೇಕು ಮಳೆ
ಸತ್ಯ ಅರಿವಾಗಲು ಸಮಯ ಬೇಕಿತ್ತು
ಮಳೆ ಇಲ್ಲದಿದ್ದರೂ ಬೆಳೆ
ಆದರೆ ಅದು ಪಾಪಸುಕಳ್ಳಿ

ಅವರವರ ಭಾವಕೆ ಅವರವರ ಭಕುತಿಗೆ
ಹೇಳಿದ್ದ ಅವನು ಹಲವು ಬಾರಿ
ಆದರೆ ಈ ಕ್ಷಣ  ಅವನಿಗದು ದುಬಾರಿ

ಬರೆದರೆ ಅರ್ಥವಾಗುವ ಹಾಗೆ ಬರೆಯಬೇಕು
ಯಾರಿಗೆ?
ಪ್ರಶ್ನೆ ನನ್ನಲ್ಲಿದೆ ಮೊದಲಿನಿಂದ

ಹುಟ್ಟಿದ ದಿನ ಹುಡಕದಿರಿ ಪಾಪಸುಕಳ್ಳಿ
ಸಿಕ್ಕರೂ ದುಬಾರಿ ಅದು ಸುಭಿಕ್ಷದ  ನಾಡಲ್ಲಿ
ಏನು ಅರ್ಥವಾಗಲಿಲ್ಲವೇ....! ಕ್ಷಮಿಸಿ ಹಾಗಿದ್ದರೆ ಇದು ನಿಮಗಲ್ಲ.

2 ಕಾಮೆಂಟ್‌ಗಳು:

sunaath ಹೇಳಿದರು...

ಅರ್ಥವಾಯಿತು ಕಣ್ರೀ, ಅರ್ಥವಾಯ್ತು.
ಬದುಕು ಚಿತ್ರವಿಚಿತ್ರ;
ಅರ್ಥವಾಗದಿದ್ದರೆ ಅದು ಅನರ್ಥ,
ಪಾಪಾಸುಕಳ್ಳಿಗೂ ಇಹುದು ಅರ್ಥ!

ಸೋಮಶೇಖರ ಹುಲ್ಮನಿ ಹೇಳಿದರು...

ಧನ್ಯವಾದಗಳು. ..