ಶುಕ್ರವಾರ, ಫೆಬ್ರವರಿ 14, 2014

ಆಶಿಕೀ

ನಾ ನಿನ್ನನ್ನು ಬಿಟ್ಟಿರಲಾರೆ
ನನ್ನಯ ಬಾಳನು ಬೆಳಗುವೆಯಾ

ನಾ ನಿನ್ನನ್ನು ಬಿಟ್ಟಿರಲಾರೆ
ನನ್ನಯ ಬಾಳನು ಬೆಳಗುವೆಯಾ
ನೀನಿಲ್ಲದೆ ನಾ ಬಾಳಲಿ ಹೇಗೆ
ನನ್ನಯ ಪ್ರೀತಿಯ ಒಪ್ಪುವೆಯಾ

ಓ ಸುಂದರಿ.. ನನ್ನ ಕಿನ್ನರಿ
ನಿನ್ನನೇ ಬಯಸಿಹೆ
ನನಸಲೂ.. ನನ್ನ ಕನಸಲೂ..
ನಿನ್ನನೇ ನೆನೆದಿಹೆ

ನಿನ್ನ ನನ್ನ ಜನುಮದ ಜೋಡಿ
ಹಾಲಿನ ಜೊತೆ ಸೇರಿದ ಜೇನು
ನನ್ನನು ನೀನು ಮಾಡಿಹೆ ಮೋಡಿ
ನೀನಿರದಿರೆ ನನ್ನ ಗತಿಯೇನು
ಬರದಿರಲಿ.. ನನಗಂಥ ದಿನ
ಉಸಿರಾಗಿಹೆ ನೀ ನನಗೆ..

ಓ ಸುಂದರಿ.. ನನ್ನ ಕಿನ್ನರಿ
ನಿನ್ನನೇ ಬಯಸಿಹೆ
ನನಸಲೂ.. ನನ್ನ ಕನಸಲೂ..
ನಿನ್ನನೇ ನೆನೆದಿಹೆ

ಬಾರೇ ನೀ.. ಬಾರೇ ನೀ....
ನನ್ನನೆ ನಾ ಕಳೆದುಕೊಂಡೆ
ನಿನ್ನಲೆ ನಾ ಖುಷಿಯ ಕಂಡೆ
ನಿನ್ನಿಂದಲೇ ನಾನು ಬದಲಾದೆ
ನಿನ್ನ್ನೊಂದಿಗೆ ಸೇರಲನುವಾದೆ
ನಿನ್ನೊಡನೆ ಇರುವಾಸೆಯಿದೆ
ನಿನ್ನೊಪ್ಪಿಗೆಗಾಗಿ ನಾ ಕಾದೆ... ಹ್ಮ್..

ಓ ಸುಂದರಿ.. ನನ್ನ ಕಿನ್ನರಿ
ನಿನ್ನನೇ ಬಯಸಿಹೆ
ನನಸಲೂ.. ನನ್ನ ಕನಸಲೂ..
ನಿನ್ನನೇ ನೆನೆದಿಹೆ

ಓ ಸುಂದರಿ.. ನನ್ನ ಕಿನ್ನರಿ
ನಿನ್ನನೇ ಬಯಸಿಹೆ
ನನಸಲೂ.. ನನ್ನ ಕನಸಲೂ..
ನಿನ್ನನೇ ನೆನೆದಿಹೆ

2 ಕಾಮೆಂಟ್‌ಗಳು:

sunaath ಹೇಳಿದರು...

ಕವನ ಹೊರಹೊಮ್ಮಲು ವಿರಹ ಹಾಗು ಹಂಬಲ ಬೇಕೇ ಬೇಕು. ಆದರೆ ತರುಣ ಮಿತ್ರಾ, ನಿಮ್ಮ ಸರಸ ಸಮಾಗಮನದ ಮಧುರ ಕವನವನ್ನೂ ಕೇಳುವಾಸೆ ನನಗೆ!

@spn3187 ಕನ್ನಡಿಗ ಶಿವಕುಮಾರ ನೇಗಿಮನಿ ಹೇಳಿದರು...

® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
visit my site

http://spn3187.blogspot.in/

Also say Your Friends
Find me