ಚಿಮ್ಮುತಿರಲಿ ಒಲವ ಚಿಲುಮೆ
ಕೂಡಿ ನಿಮ್ಮ ಮನಸು
ಹೊಮ್ಮುತಿರಲಿ ನಿಮ್ಮ ಹಿರಿಮೆ
ಮಾಡಿ ಕನಸ ನನಸು
ಬಾಳಿ ನೂರು ಕಾಲ ಹೀಗೆ
ಹಾಲು ಜೇನ ಹಾಗೆ
ನಾಳೆ ನಿಮ್ಮದಿಂದಿಗಿಂತ
ಇರಲಿ ಚೆಂದವಾಗೆ
ಪ್ರೇಮಲೋಕದಲ್ಲಿ ಇರುವ
ಆ ಪ್ರೇಮ ಪಕ್ಷಿ
ನಿಮ್ಮ ನೋಡಿ ನಾಚಲಿಹುದು
ಇದಕೆ ನಾವೆ ಸಾಕ್ಷಿ
ಕೂಡಿ ನಿಮ್ಮ ಮನಸು
ಹೊಮ್ಮುತಿರಲಿ ನಿಮ್ಮ ಹಿರಿಮೆ
ಮಾಡಿ ಕನಸ ನನಸು
ಬಾಳಿ ನೂರು ಕಾಲ ಹೀಗೆ
ಹಾಲು ಜೇನ ಹಾಗೆ
ನಾಳೆ ನಿಮ್ಮದಿಂದಿಗಿಂತ
ಇರಲಿ ಚೆಂದವಾಗೆ
ಪ್ರೇಮಲೋಕದಲ್ಲಿ ಇರುವ
ಆ ಪ್ರೇಮ ಪಕ್ಷಿ
ನಿಮ್ಮ ನೋಡಿ ನಾಚಲಿಹುದು
ಇದಕೆ ನಾವೆ ಸಾಕ್ಷಿ
(ಗೆಳೆಯ ವೇದವ್ಯಾಸ ಮತ್ತು ಸ್ಮಿತಾ ಅವರ ಮದುವೆಯ ಸಂದರ್ಭದ ಹಾರೈಕೆ)
6 ಕಾಮೆಂಟ್ಗಳು:
ನಿಮ್ಮ ಹಾರೈಕೆ ಸುಂದರವಾಗಿದೆ. ನಿಮ್ಮೊಡನೇ ನಾನೂ ‘ಅಸ್ತು’ ಎನ್ನಬಹುದೆ?
ಖಂಡಿತ ಸುನಾಥ ಕಾಕಾ.. ನಿಮ್ಮಂಥ ಹಿರಿಯರ ಆಶೀರ್ವಾದವೇ ಅಲ್ಲವೆ ಬೇಕಾಗಿರುವುದು?
ನಿನಗು ಇದೆ ತರ ಹರಸೊ ಆಸೆ...ಹೇಳು ಯಾವಾಗ ಆ ಸಮಯ ಬರುತ್ತೆ
ನಿನಗು ಇದೆ ತರ ಹರಸೊ ಆಸೆ...ಹೇಳು ಯಾವಾಗ ಆ ಸಮಯ ಬರುತ್ತೆ
ಹೌದೋ ಹರೀಶಣ್ಣ.. ನಿನಗೂ ಇದನೆ ಹರಸುವಾಸೆ :-) :ಫ್
ಸೋಮ, ಪ್ರಶಸ್ತಿ.. ಆಗಲಿ.. ಆ ಸಮಯ ಬಂದಾಗ ಹೇಳ್ತೀನಿ.. ಬನ್ನಿ :)
ಕಾಮೆಂಟ್ ಪೋಸ್ಟ್ ಮಾಡಿ