ಭಾನುವಾರ, ಮಾರ್ಚ್ 13, 2011

ಸುಂದರ ನೆನಪು

ಕುಡಿನೋಟ ಆ ಕಿರುನಗೆಯ ಕಾಂತಿ,

ಕರಗಿತು ಮನವಂದು ಬಯಸಿ ನಿನ್ನ ಪ್ರೀತಿ,

ತವಕ ಅಂತರಾಳದೊಳು ತಿಳಿಯದಾದ ವೇದನೆಯಲಿ,

ಸನಿಹವಿದ್ದ ಸಮಯಗಳು ಸರಸ ನಗೆ ಚೆಲ್ಲಾಟದಲಿ,

ಸುಂದರ ದಿನಗಳ ನೆನೆದು ಮೆಲುಕುತಿಹೆನು,

ಪರಿಪರಿಯಾದ ಸಿಹಿನೋವಿನೊಡನೆ ಇಂದು ಆ ಭಾರವಾದ ಹೃದಯದಲಿ.

4 ಕಾಮೆಂಟ್‌ಗಳು:

sunaath ಹೇಳಿದರು...

ವಿಶು,
ಮನದ ನೋವನ್ನು ಕವನದ ಮೂಲಕವೇ ಕಡಿಮೆ ಮಾಡಿಕೊಳ್ಳಬೇಕಲ್ಲವೆ? ನಿಮ್ಮ ಮಧುರ ದಿನಗಳು ಮರುಕಳಿಸಲಿ ಎಂದು ಹಾರೈಸುತ್ತೇನೆ.

ಸೋಮಶೇಖರ ಹುಲ್ಮನಿ ಹೇಳಿದರು...

ವಿಶು,
ಸನಿಹವಿದ್ದ ಸಮಯಗಳು ಸರಸ ನಗೆ ಚೆಲ್ಲಾಟದಲಿ,
ಸುಂದರ ದಿನಗಳ ನೆನೆದು ಮೆಲುಕುತಿಹೆನು,
ಅದಷ್ಟೇ ನಿನ್ನ ಭಾಗ್ಯ

Unknown ಹೇಳಿದರು...

ಸುನಾಥರವರಿಗೆ ಧನ್ಯವಾದಗಳು.

Unknown ಹೇಳಿದರು...

ಸೋಮು, ಈಗ ದೂರ ಇರೋದ್ರಿಂಗ ಅದಷ್ಟೇ ನನ್ನ ಭಾಗ್ಯ.. ಆದ್ರೆ ಅಲ್ಲಿಗೆ ಬಂದ್ ಮೇಲೆ ಸುಂದರ ದಿನಗಳು ಮತ್ತೆ ಬರುತ್ತೆ.. ತಾಳ್ಮೆ ಬಹಳ ಮುಖ್ಯ.