ಸಮಯದ ಪರಿವೆಯಿಲ್ಲ,
ಸ್ಥಳದ ಅರಿವಿಲ್ಲ,
ಇರುವುದೆಲ್ಲ ಒಂದೇ
ನಿಮ್ಮ ಧ್ಯಾನ
ಹಸಿವು ನೀರಡಿಕೆಯಿಲ್ಲ,
ನಿದ್ರೆಯ ಸುಳಿವಿಲ್ಲ,
ಹಂಬಲಿಸುವುದು ಒಂದೇ
ನಿಮ್ಮ ಸನಿಹ
ಮಾತು ಬೇಕಿಲ್ಲ,
ಧ್ವನಿಯ ಹಂಗಿಲ್ಲ,
ಗುನುಗಿರುವುದು ಒಂದೇ
ನಿಮ್ಮ ಹೆಸರು
ನಾನು ನಾನಾಗಿಲ್ಲ,
ನನ್ನದೆಂಬುದು ಏನಿಲ್ಲ,
ಎಲ್ಲದರಲ್ಲೂ ಇರುವುದೊಂದೇ
ನಿಮ್ಮ ಒಲವು
8 ಕಾಮೆಂಟ್‌ಗಳು:
ಒಲವಿನ ಕವಿತೆ ಸುಂದರವಾಗಿ ಮೂಡಿ ಬಂದಿದೆ. ಬಾಳದೋಣಿಗೆ ಸುಸ್ವಾಗತ...
ಒಲವಿನೊಂದಿಗೆ ಬಾಳದೋಣಿಯಲಿ ನಮ್ಮೊಂದಿಗೆ ಪ್ರಯಾಣಿಸಲು ಇಚ್ಚಿಸಿರುವ ಗೆಳತಿಗೆ ಸುಸ್ವಾಗತ
ಮಧುರ ಮಧುರವೀ ಸುಂದರ ಗೀತೆ.
ಲಕ್ಷ್ಮೀ, ಬಾಳದೋಣಿಗೆ ಸ್ವಾಗತ. ಕವಿತೆ ಚೆನ್ನಾಗಿದೆ.
ನನ್ನನ್ನು ಬಾಳ ದೋಣಿಯ ಪಯಣದಲ್ಲಿ ಜೊತೆ ಮಾಡಿಕೊಂಡಿದಕ್ಕೆ ಧನ್ಯವಾದಗಳು ಹರೀಶ್, ಸೋಮು, ತೇಜಸ್. ಅನಿಸಿಕೆಯನ್ನು ಹಂಚಿಕೊಂಡ ಸುನಾಥರವರಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲೆಂದು ಬಯಸುವೆ.
ಕವಿತೆ ಚೆನ್ನಾಗಿದೆ..
ಕವನ ಚೆನ್ನಾಗಿದೆ ಲಕ್ಷ್ಮೀ..
ಲಕ್ಷ್ಮಿ ಅವರೇ..
ಚೆನ್ನಾಗಿದೆ ಕವಿತೆ...
ಕಾಮೆಂಟ್ ಪೋಸ್ಟ್ ಮಾಡಿ