ಗುರುವಾರ, ಸೆಪ್ಟೆಂಬರ್ 30, 2010

ತುಮುಲ

ದಟ್ಟಡವಿಯ ಪಯಣದಲಿ ಹೊತ್ತು ಮುಗಿಯುವ ಮುನ್ನ
ನಿಶೆಯು ಆವರಿಸೆ ನೀ ಅಳುಕದಿರು ಮನವೇ...

ಮರುಭೂಮಿ ಮಡಿಲಲ್ಲಿ ಬಾಯಾರಿ ಅಲೆವಾಗ
ಮರಳ ಮರೀಚಿಕೆಯ ಕಂಡು ಸೋಲದಿರು ಮನವೇ...

ಭರವಸೆಯ ಬೆನ್ನತ್ತಿ ಕನಸ ಕುದುರೆಯನೇರೆ
ಸ್ವಪ್ನ ಗೋಪುರವ ಕಂಡು ಮರುಗದಿರು ಮನವೇ...

ಸಂಸಾರ ಸಾಗರದಿ ಅಂಬಿಗನು ಮೈಮರೆಯೆ
ಅಲೆಯ ಸೆಳೆತಕ್ಕೆ ನೀ ಅಂಜದಿರು ಮನವೇ...

ಕತ್ತಲೆಯ ಜಗದಲ್ಲಿ ಅಜ್ಞಾನ ಕದನದಲಿ
ನೆರಳೂ ಜೊತೆ ಬಿಡಲು ನೀ ಚಿಂತಿಸದಿರು ಮನವೇ...

ಬದುಕೆಂಬ ಆಟದಲಿ ಸೋಲು ಗೆಲುವುಗಳ
ಮೀರಿ ತಟಸ್ಥ ಭಾವದಿ ಸ್ಥಿತಪ್ರಜ್ಞನಾಗು ಮನವೇ...

10 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಸೂಪರ್ ತೇಜು... ಎದೆಯಾಳದಿಂದ ಬಂದ ಸಾಲುಗಳು ಅರ್ಥಪೂರ್ಣವಾಗಿಯೂ ಮನಮುಟ್ಟುವಂತೆಯೂ ಇವೆ. ಹೀಗೇ ಬರೀತಾ ಇರು :-)

Unknown ಹೇಳಿದರು...

very nice ..

ಸೋಮಶೇಖರ ಹುಲ್ಮನಿ ಹೇಳಿದರು...

ತೇಜು ,
ಹೋಗುವದ ಹಿಡಿಯಲು ಆಗುವದಿಲ್ಲ,
ಬರುವದ ತಡೆಯಲು ಆಗುವದಿಲ್ಲ ,
ಹೋಗಿದ್ದು ಹೋಗಿಯಾಯ್ತು ,
ಬಂದದ್ದು ಬಂದಾಯ್ತು ,
ಒಂದು ಕವನಕ್ಕೆ ಅದು ನಾಂದಿಯಾಯ್ತು
ಒಟ್ಟಿನಲಿ ಆದದ್ದೆಲ್ಲ ಒಳಿತಾಯ್ತು !?

sunaath ಹೇಳಿದರು...

ಇದೀಗ ನಿಜವಾದ ಜೀವನ ಧೋರಣೆ. ನಿಮ್ಮ ಧೋರಣೆ ಹಾಗು ಕವನ ಪ್ರಶಂಸನೀಯವಾಗಿವೆ.

Unknown ಹೇಳಿದರು...

Its really beautiful n meaningful. hopes i will see still more n more..... so please keep on.....

ತೇಜಸ್ ಜೈನ್ Tejas jain ಹೇಳಿದರು...

ಹರೀಶ, 'ಹೀಗೇ' ಆಗ್ತಿದ್ರೆ 'ಹೀಗೇ' ಬರೀತಿರ್ತಿನಿ :)

ಸೌಮ್ಯ, ಧನ್ಯವಾದಗಳು

ಸೋಮ, ಒಳಿತಾಗಲಿ ಅಥವ ಕೆಡುಕಾಗಲಿ ಅದನ್ನು ಸಮ ಚಿತ್ತದಿಂದ ಸ್ವೀಕರಿಸುವ ಸ್ಥೈರ್ಯ ನಮಗೆ ಬರಲಿ :)

ಸುನಾಥರೇ, ಪ್ರತಿಕ್ರಿಯೆಗೆ ಧನ್ಯವಾದಗಳು...

ನಿತ್ಯ, ಧನ್ಯವಾದಗಳು, ಮತ್ತೆ ಬರುತ್ತಿರಿ...

ಮನಮುಕ್ತಾ ಹೇಳಿದರು...

very nice poem.

ತೇಜಸ್ವಿನಿ ಹೆಗಡೆ ಹೇಳಿದರು...

ಸುಂದರ ಕವನ. ಅರ್ಥವತ್ತಾಗಿದೆ.

ತೇಜಸ್ ಜೈನ್ Tejas jain ಹೇಳಿದರು...

ಧನ್ಯವಾದಗಳು...

Nagashree ಹೇಳಿದರು...

"ಇರುಳಿಂದೆ ಬೆಳಕುಂಟು ತೋರಿಸಿರಿ" ಎಂಬ ಚಿತ್ರಗೀತೆಯಂತೆ ನಿಮ್ಮ ಕವನ ಕೂಡ ಆಶೋತ್ತರವನ್ನು ಹೆಚ್ಚಿಸುವ ಬರಹ!