ಸೋಮವಾರ, ಆಗಸ್ಟ್ 16, 2010

ನನ್ನರಸಿ... ನಿನ್ನರಸಿ

ನನ್ನರಸಿ ನನ್ನರಸಿ, ಕಾದಿರುವೆ ನಿನ್ನರಸಿ
ಬರಡಾದ ಬಾಳಿಗೆ ನೆರಳನು ತೋರೆ
ಆವರಿಸಿ, ನನ್ನ ನೀ ವರಿಸಿ

ನನ್ನರಸಿ ನನ್ನರಸಿ, ಬಸವಳಿದೆ ನಿನ್ನರಸಿ
ಉಸಿರಾಗಿ ಬಂದು ಹಸಿರನು ತಾರೆ
ಮಳೆ ಸುರಿಸಿ, ಪ್ರೀತಿಯ ಮಳೆ ಸುರಿಸಿ

ನನ್ನರಸಿ ನನ್ನರಸಿ, ದಣಿದಿರುವೆ ನಿನ್ನರಸಿ
ಮನದೊಳು ಚಿಮ್ಮಿಸೆ ಅಮೃತ ಧಾರೆ
ಸುಧೆ ಹರಿಸಿ, ಒಲವಿನ ಸುಧೆ ಹರಿಸಿ

ನನ್ನರಸಿ ನನ್ನರಸಿ, ಬಳಲಿರುವೆ ನಿನ್ನರಸಿ
ಸಿಹಿ ಕಹಿ ಹಂಚಿ ಬಾಳಲು ಬಾರೆ
ಕಣ್ಣೊರೆಸಿ, ನನ್ನಯ ಕಣ್ಣೊರೆಸಿ

ಚಿತ್ರ ಕೃಪೆ: FCIT

11 ಕಾಮೆಂಟ್‌ಗಳು:

Ittigecement ಹೇಳಿದರು...

ಹರೀಷು..

ಈ ಚಂದದ ಕವಿತೆ ಓದಿದರೆ..
ಓಡೋಡಿ ಬರುವಳು..
ನಿನ್ನರಸಿ..
ನಿನ್ನಾ...
ಅರಸಿ..

ಸರಸಿ..!

ಸೊಗಸಾದ ಕವಿತೆಗೆ ಅಭಿನಂದನೆಗಳು..

ಮನಸಿನ ಮಾತುಗಳು ಹೇಳಿದರು...

ಹರೀಶ್,
ಆದಷ್ಟು ಬೇಗ ನಿನ್ನರಸಿ , ನಿನ್ನ ಅರಸಿ ಬರಲಿ ಅಂತ ನಾನು ಹಾರೈಸ್ತಿ... :-)Nice poem ... :-)

Harisha - ಹರೀಶ ಹೇಳಿದರು...

ಪ್ರಕಾಶಣ್ಣ,
ಪ್ರತಿಕ್ರಿಯಿಸಿದ್ದಕ್ಕೆ .. ಮತ್ತೆ ಕಮೆಂಟ್ ಫಾರ್ಮಲ್ಲಿದ್ದ ತೊಂದರೆ ತಿಳಿಸಿದ್ದಕ್ಕೆ ಧನ್ಯವಾದ.

ದಿವ್ಯಾ,
ನನ್ನ ಅರಸಿ ನನ್ನ ಅರಸಿ ಬಂದ್ರೆ ಖುಷಿ... :-)
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ಬ್ಲಾಗಿಗೆ ಬರ್ತಾ ಇರು.

ಮನಸ್ವಿ ಹೇಳಿದರು...

ನಿನ್ನರಸಿ ಆದಷ್ಟು ಬೇಗ ನಿನ್ನರಸಿ ಬರಲಿ, ಸುಂದರವಾದ ಸಾಲುಗಳು, ಇಷ್ಟವಾಯಿತು

Harisha - ಹರೀಶ ಹೇಳಿದರು...

ಆದಿತ್ಯ (ಮನಸ್ವಿ),
ಸಾಲುಗಳ ಧಾಟಿಗೆ ನಿಂಬಿಯ ಬನಾದ ಮ್ಯಾಗಳ.. ಹಾಡಿನ ಚರಣಗಳು ಸ್ಫೂರ್ತಿ... ಅದೇ ಧಾಟಿಯಲ್ಲಿ ಹೇಳಿ ನೋಡು.. :-)

ಪ್ರತಿಕ್ರಿಯೆಗೆ ಧನ್ಯವಾದ.

Shiv ಹೇಳಿದರು...

ಹರೀಶ್ ಅವರೇ,
ಸುಂದರ ಕವಿತೆ !
ಈ ಕವಿತೆ ಅವರಿಗೆ ತಲುಪಿದರೆ ನಿಮ್ಮ ಅರಸಿ ಖಂಡಿತ ಬರಬಹುದು

ಮನಮುಕ್ತಾ ಹೇಳಿದರು...

ಸೊಗಸಾದ ಸಾಲುಗಳು..:)

sunaath ಹೇಳಿದರು...

ಹರೀಶ,
ಮನದಾಳದಿಂದ ಹೊರಹೊಮ್ಮಿದ ಭಾವನೆಯೇ ಉತ್ತಮ ಕವನವಾಗಿದೆ.

Harisha - ಹರೀಶ ಹೇಳಿದರು...

ಶಿವ್,
ನೀವು ಕೂಡ ನಾನು ಓದಿದ ಶಾಲೆಯಲ್ಲಿಯೇ ಓದಿದ್ದು ಎಂದು (ನಿಮ್ಮ ಬ್ಲಾಗ್ ಬರಹದ ಮೂಲಕ) ತಿಳಿದು ಸಂತೋಷವಾಯಿತು.
ಕವನ ಮೆಚ್ಚಿದ್ದಕ್ಕೆ, ಅದಕ್ಕಿಂತ ಹೆಚ್ಚಾಗಿ ಶಾಲೆಯ ನೆನಪು ಮಾಡಿದ್ದಕ್ಕೆ ಧನ್ಯವಾದಗಳು :-)

ಮನಮುಕ್ತಾ,
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಹೀಗೇ ಬಂದು ಪ್ರೋತ್ಸಾಹಿಸುತ್ತಿರಿ.

ಸುನಾಥ ಕಾಕಾ,
ನಾನು ಬರೆದ ಲೇಖನಗಳನ್ನೆಲ್ಲ ಓದಿ, ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವ ನಿಮಗೆ ನಾನು ಸದಾ ಆಭಾರಿ.

Unknown ಹೇಳಿದರು...

ಓಲೈಸುವ ಈ ಪಥ(ಕವನ)ಮುಗಿದು ಹೋಯ್ತು ಅಂದು ಕೊಂಡಿದ್ದೆ. ಈ ಬಗೆ ಅಮರ, ಸಾರ್ವಕಾಲಿಕ. ನಿಮ್ಮ ಬೇಡಿಕೆ ಬೇಗ ಈಡೇರಲಿ. ನಿಮ್ಮರಸಿ ನಿಮ್ಮನರಸಿ ಬಹು ಬೇಗ ನಿಮ್ಮೆಡೆಗೆ ತನ್ನ ಪಾದವ ಹರಿಸಲಿ. ಒಳ್ಳೆಯ ಕವನ. ನಿಮ್ಮ ಲೇಖನಿಗೆ ಇನ್ನೂ ಹೆಚ್ಚಿನ ಬಲ ಬರಲಿ. ಅಭಿನಂದನೆಗಳು

Harisha - ಹರೀಶ ಹೇಳಿದರು...

ಗುರು ಅವರೇ, ನಿಜವಾದ ಮಾತು ಹೇಳಿದ್ದೀರಿ.. ಈ ಜಗತ್ತಿನಲ್ಲಿ ಪ್ರೀತಿ ಇರುವವರೆಗೂ, ಓಲೈಕೆ ಇದ್ದೇ ಇರುತ್ತೆ ಅಲ್ವಾ? ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಬ್ಲಾಗಿಗೆ ಬರುತ್ತಿರಿ.