ಹೃದಯವೆಂಬ ಕನ್ನಡಿಯಲಿ
ಬಿಂಬಿಸಿದ ನಿನ್ನ ಛಾಯೆಯ
ನಗುವಿನಲಿ ಮರೆಯಲೆತ್ನಿಸಿದೆ
ಆದರೆ ಕಣ್ಣೀರಿನಲಿ ನೀ ಮೂಡಿದ್ದೆ
ನಿದ್ರೆಯಲಿ ಮುಚ್ಚಲೆತ್ನಿಸಿದೆ
ಕನಸಿನಲ್ಲೂ ನೀ ಬಂದು ಕುಳಿತಿದ್ದೆ
ವಿದ್ಯಾರ್ಜನೆಯ ಬೆಳಕ ಹಚ್ಚಿದೆ
ಆ ದೀಪದಡಿಯಲ್ಲಿ ನೀ ನಕ್ಕಿದ್ದೆ
ಕೊನೆಗೆ ಬಳಲಿ ಕನ್ನಡಿಯ ಒಡೆದಾಗ
ನೂರು ಚೂರಿನಲ್ಲೂ ನೀ ಕಾಡುತ್ತಿರುವೆ
2 ಕಾಮೆಂಟ್ಗಳು:
ತೇಜಸ್,
ಮನದಲ್ಲಿ ಮೂಡಿದವರು ಮರೆಯಾಗಿ ಹೋಗಲು ಸಾಧ್ಯವೆ? ಒಳ್ಳೆಯ ಕವನವನ್ನು ನೀಡಿದ್ದೀರಿ.
ನೀನು ಇಷ್ಟು ಚೆನ್ನಾಗಿ ಕವನ ಬರಿತಿಯ ಅಂತ ಗೊತ್ತೇ ಇರಲಿಲ್ಲ ಕಣಪ್ಪ.
ತುಂಬಾ ಚೆನ್ನಾಗಿದೆ.
ಹೌದು ?? ಯಾರೋ ಅದು?
ಕಾಮೆಂಟ್ ಪೋಸ್ಟ್ ಮಾಡಿ