ಬುಧವಾರ, ಏಪ್ರಿಲ್ 2, 2008

ಹುದ್ಧಾರ ಹಾಗೋದು ಈಗೆ...

ಈಗಷ್ಟೇ ನಡೆದಿದ್ದು. ಇರುವುದನ್ನು ಇರುವ ಹಾಗೇ ಹಾಕಿದ್ದೇನೆ (ಹೆಸರು ಮಾತ್ರ ತೆಗೆದಿದ್ದೇನೆ).
6:19 PM Friend: namaskara....................
me: namaskara
Friend: hen guru samachara............
6:21 PM me: "hen" -- yaava language alli?
Friend: yavudadaru ayetu........................
6:22 PM me: kannadadalli henu andre taleli beleyuttalla.. adu..
6:23 PM Friend: gotilla...
oh nate dt henu stupid......
k hellideyo wt r u dng
6:24 PM me: hellideyo andre enu?
Friend: ayyo i'm asking n which place u r in now
me: i'm in my room
6:25 PM Friend: istu bega hoda ..........
me: bandu ondu ghante aaytu
6:29 PM Friend: hen ketta krlasa madthedeyo room alli

hoge henu ketta kelasa madthedeyo..................
me: henu?
6:30 PM Friend: kannada hartha hagalva
me: artha aagiddakke keliddu.. enu henu madhya iro difference artha maadko..
6:32 PM Friend: hanadru thilko......answer madu aste.........
6:33 PM k gunda going to home ..........................msg u tom k....................bye dumma................

ನೀವೇ ಏಳಿ, ಈಗಾದ್ರೆ ಕನ್ನಡ ಹುದ್ಧಾರ ಹಾಗುತ್ತಾ?

18 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಹ್ಹ ಹ್ಹ ಹ್ಹ. ನಂಗೆ ಹೀತರ ಹನುಭವ ದಿನಾ ಹಾಗತ್ತೆ. ಹೇನ್ ಮಾಡೋದು, ಕೆಲವರು ಮಾತಾಡೋದೆ ಆಗೆ. ನಾವು ಏಳ್ಕೋಟ್ರೂ ಹದು ತಪ್ಪು ಹಂತ ಹೊಪ್ಕೊಳಲ್ಲ ಹವ್ರು. ಹದು ತಪ್ಪು ಹಂತ ಗೊತ್ತೇ ಹಿರಲ್ಲ ಹವ್ರಿಗೆ. ಸದ್ಯ ಕನ್ನಡದಲ್ಲಾದ್ರೂ ಮಾತಾಡ್ತಾರಲ್ಲ ಹಂತ ಕುಶಿ ಪಡೋದೊಳ್ಳೇದು. ;)

Harisha - ಹರೀಶ ಹೇಳಿದರು...

ವಿಕಾಸ್, ಇನ್ನೂ ಕೆಲವು ಮಜವಾದ ಮಾತುಗಳಿವೆ. ಕೆಲವಂತೂ ಪೂರ್ತಿ ಅಪಾರ್ಥ ಕೊಡುತ್ತವೆ. "ಅತಿಥಿಗಳಿಗೆ ಹಾದರದ ಸ್ವಾಗತ" ಎನ್ನುವುದು ಫೇಮಸ್...

ಭಾವಜೀವಿ... ಹೇಳಿದರು...

ಎಲ್ಲೋ ನ್ಯೂಸ್‍ನಲ್ಲಿ ಕೇಳಿದ್ದು "ದೇವೆಗೌಡರ ಆಸನದಲ್ಲಿ(ಹಾಸನದಲ್ಲಿ)!!"
;)

ವಿ.ರಾ.ಹೆ. ಹೇಳಿದರು...

... ದೇವೇಗೌಡರ ಆಸನದಲ್ಲಿ ಮೊಳೆ (ಮಳೆ);)

ಇನ್ನೊಂದು, ಬೀಚಿ ಪ್ರಾಣೇಶಂದು.."ಭಾರತೀಯ ಎಣ್ಣು ಮಕ್ಕಳು ಹಾದರ ಹಾತಿತ್ಯಕ್ಕೆ ಎಸರುವಾಸಿ!!!" ;);)

Rohit Ramachandraiah ಹೇಳಿದರು...

ಸ್ಪ್ಯಾಮ್ ಮಾಡುತ್ತಿರುವುದಕ್ಕೆ ಕ್ಷಮೆ ಕೋರುತ್ತಾ,

ಆತ್ಮೀಯರೆ,

ಕಳೆದ ತಿಂಗಳು ನಡೆದ ಬ್ಲಾಗಿಗರ ಸಮಾವೇಶದ ನಂತರ, ನನ್ನ ಮನಸ್ಸಿನಲ್ಲಿ ಮೊಳಕೆಯೊಡೆದ ಆಸೆಯಂತೆ, ಅಂತರ್ಜಾಲವನ್ನೆಲ್ಲ ತಡಕಾಡಿ, ಅಸ್ತಿತ್ವದಲ್ಲಿರುವ ಎಲ್ಲ ಕನ್ನಡ ಬ್ಲಾಗುಗಳ ಪರಿವಿಡಿಯನ್ನು ತಯಾರಿಸುವ ಪ್ರಯತ್ನವನ್ನು ಮಾಡಿದ್ದೇನೆ(೫-೪-೨೦೦೮ ರಂದು ಇದ್ದಂತೆ ೫೫೦). ಅದನ್ನು ಇಲ್ಲಿ http://kannadabala.blogspot.com ನೋಡಬಹುದು. ಹಾಗೆಯೇ ಕನ್ನಡ ಬ್ಲಾಗ್ ಲೋಕದ ಆಗುಹೋಗುಗಳಿಗೆ ನನ್ನ ಪ್ರತಿಕ್ರಿಯೆ/ದನಿ ಸೇರಿಸಲು ಈ ಬ್ಲಾಗನ್ನು ಮೀಸಲಿರಿಸಿದ್ದೇನೆ. ಆಗಾಗ ಬರುತ್ತಿರಿ.

ವಿಶ್ವಾಸಿ,
ರೋಹಿತ್ ರಾಮಚಂದ್ರಯ್ಯ.

Harsha Bhat ಹೇಳಿದರು...

"HoDedu attidanu" annuva vaakyavannu ee nimma mitrara bhasheyalli obbata uttarapatrikeyalli barediddanante. Namma gurugaLobbaru valuation mugisi bandu heeLuttiddaru.

Harisha - ಹರೀಶ ಹೇಳಿದರು...

ಹರ್ಷ, ಉತ್ತರ ಬರೆದ ಆ ವ್ಯಕ್ತಿಗೆ ಯಾವುದಾದರೂ ಪ್ರಶಸ್ತಿ ಕೊಟ್ಟರೂ ಕೊಡಬಹುದೇನೋ! ಬಹುಶಃ ರಾಜ್ಯೋತ್ಸವ ಪ್ರಶಸ್ತಿ?

ಬೆಂಗಳೂರಿನಲ್ಲಿ ಅಲಸೂರು-ಹಲಸೂರು, ಹೋಪ್ ಫಾರ್ಮ್-ಓ ಫಾರ್ಮ್ ಗಳಿಗೆ ವ್ಯತ್ಯಾಸವೇ ಇಲ್ಲದಂತಾಗಿದೆ.

Parisarapremi ಹೇಳಿದರು...

'ಒಳ್ಳೇ' ಅಪಭ್ರಂಶ!! ಕರ್ಮಕಾಂಡ..

ಅತಿಥಿಯೊಬ್ಬನು ಹೇಳಿದನಂತೆ, "ನಿಮ್ಮ ಹಾದರಕ್ಕೂ ವಾತ್ಸಲ್ಯಕ್ಕೂ ನಾನು ಚಿರಋಣಿ" ಅಂತ!!

Harisha - ಹರೀಶ ಹೇಳಿದರು...

parisarapremi, ಯಾರಪ್ಪಾ ಆ ಅತಿಥಿ ದೆವ್ವ?

ಕುಕೂಊ.. ಹೇಳಿದರು...

ಅವರು ಬರೆದಿರುವುದರಲ್ಲಿ ಏನು ತಪ್ಪಿಲ್ಲ ಬಿಡಿ,
ಇಂಬ್ಲೀಚ ನಲ್ಲಿ 'home' ನ ಹೇಗೆ ಉಲಿತಾರೆ? ಹೋಮ್ ಅಂತಾನೆ? ಇಲ್ಲ ಇಲ್ಲ ನಮ್ಮಪ್ಪನಾಣೆ ಯಾರೂ ಹಾಗೆ ಉಲಿಯುವುದಿಲ್ಲ.'ಹೋಮ್' ಬರೆಯ ಬಹುದು ಆದರೆ ಉಲಿಯುವಾಗ 'ಓಮ್' ಅಂತನೇ ಉಲಿಯೋದು, ಸರಿ ತಾನೆ? ಹಾಗೆ 'house' ಬರೆಯೋದು 'ಹೌಸ್', ಆದರೆ ಉಲಿಯೋದು??? 'ಅವ್ಸ್' ಬೇಕಾದರೆ ನೀವೇ ಉಲಿದು ನೋಡಿ. ಒತ್ತಾಯವಾಗಿ ಉಲಿಯಬೇಡಿ ಹಾಗೆ ಸಹಜವಾಗಿ ಉಲಿದು ನೋಡಿ. heart 'ಹಾರ್ಟ್' ಅಂತ ಯಾರು ಉಲಿಯೋದನ್ನು ನಾನು ಕೇಳೇ ಇಲ್ಲ. ಹೀಗೆ ಇಂಬ್ಲೀಚ್ ನಲ್ಲಿ ಕಲಿತವರಿಗೆ hen'ಹೇನ್' ಅನ್ನುವುದು ಸಹಜವಾಗಿ'ಏನು'ಆಗುತ್ತದೆ. ಅಲ್ಲ ಸ್ವಾಮಿ...
'ರಾಗಿ ಬಿತ್ತಿ ಅಕ್ಕಿ ಕೇಳಿದರೆ' ಹೇಗೆ ಸಿಗುತ್ತೆ ಹೇಳಿ?? ಬೇವಿನ ಮರದಲ್ಲಿ ಮಾವಿನ ಹಣ್ಣು ಹುಡುಕಿದಂತೆ ನಿಮ್ಮ ಪಾಡು.

ಕುಮಾರಸ್ವಾಮಿ ಕಡಾಕೊಳ್ಳ

Harisha - ಹರೀಶ ಹೇಳಿದರು...

ಉಚ್ಚಾರದ IPL ಸಂಕೇತ, ಅವು ಅರ್ಥವಾಗದವರಿಗೆ ಧ್ವನಿ, ಎರಡೂ ಇವೆ:
http://www.thefreedictionary.com/home
http://www.thefreedictionary.com/house
http://www.thefreedictionary.com/heart

Honour, Honest, Hour, Heir ಮತ್ತು ಕೆಲವು ಬಾರಿ Herb ಹೀಗೆ ಕೆಲವೇ ಪದಗಳು ಹ ಉಚ್ಚಾರ ಹೊಂದುವುದಿಲ್ಲ. ಸುಮ್ಮನೆ ಅಪ್ಪನಾಣೆ ಎಂದು ಅವರ ಮರ್ಯಾದೆ ಯಾಕೆ ತೆಗೆಯುತ್ತೀರಿ...

>> ಯಾರು ಉಲಿಯೋದನ್ನು ನಾನು ಕೇಳೇ ಇಲ್ಲ.
ಇದಕ್ಕೆ ಅಚ್ಚಗನ್ನಡದಲ್ಲಿ "ಜಾಣ ಕಿವುಡು" ಎನ್ನುತ್ತಾರೆ. ಅದನ್ನಾದರೂ ಕೇಳಿದ್ದೀರಾ?

ಕುಕೂಊ.. ಹೇಳಿದರು...

ಹರೀಶ ಮಾಸ್ವಾಮಿ,
ನೀನು ಕಳಿಸಿದ ಕೊಂಡಿಗಳು ನನಗೂ ಗೊತ್ತು. ನಾನು ಆ ಕೊಂಡಿಗಳನ್ನು ತೆರೆದು ನೋಡಿದ್ದೇನೆ. ಎಲ್ಲರು ಮಾತನಾಡುವುದನ್ನೂ ಕೇಳಿದ್ದೇನೆ. ಅಮೇರಿಕದವರು ಇಂಗ್ಲ್ಯಾಂಡಿನವರು ಬರಿ ಮೂಗಲ್ಲೆ ಮಾತನಾಡುವಾಗ 'ಹ' ಎನ್ನುವ ಹೊಟ್ಟೆಯಿಂದ ಹೊರಡುವ ನುಡಿ ಅವರೆಲ್ಲಿ ಉಲಿಯಬೇಕು. ನೋಡಿ, ಕೇಳಿದ ತಿಳಿವು ಇದ್ದುದ್ದರಿಂದ ನಿನಗೆ ಆ ಮಾತು ಹೇಳಿದ್ದು ನಿಮಗೆ. "ಕತ್ತೆ ಮುಂದೆ ಕಿನ್ನೂರು ಬಾರಿಸಿದರೆ ಕೇಳೋರ ಮುಕುಳಿ ದಳಾರ" ಅಂತ ಒಂದು ಆಡುನುಡಿ ಇದೆ. ನಿಮ್ಮ ಒಡನಾಟದಿಂದ ಆ ಆಡುನುಡಿಗೊಂದು ಸೊಗಸು ಬಂತು ನೋಡು. ನಿಮ್ಮ ಸಕ್ಕ, ಇಂಬ್ಲೀಚ್ ಬಾಸಾ ಪಂಡಿತ ತೋರಿಸಿದ್ದಕ್ಕೆ ನಮಗೆ ನಲಿವಾತು ನೋಡಿ. ನಿಮ್ಮ ಈ ಬಾಸ ಪಂಡಿತ ತನದಿಂದನೇ ಇರಬೇಕು ಕನ್ನಡದ ಬಗ್ಗೆ ಒಂದೆರಡು ಮಾತಾದ್ರೆ ' ಚಣ್ಣದಲ್ಲಿ ಉಚ್ಚೆ ವಯ್ಕೊಂಡೋರ ತರ' ಆಡೋದು. ನಿಮ್ಮ ಸಕ್ಕ ಇಂಬ್ಲೀಚ್ ಪಂಡಿತ ದೊಡ್ಡದು ಗುರುಗಳೇ..... ಸಕ್ಕ, ಇಂಬ್ಲೀಚ್ ಅನ್ನೊ ಹಾದರಗಿತ್ತಿಯರ ಸೆರಗು ಹೊಕ್ಕಮೇಲೆ ಕನ್ನಡವ್ವ, ಅವಳ ತಾಯ್ತನ ಹೇಗೆ ಸಂದ ಅನ್ನಿಸಬೇಕಲ್ವ? ನಮ್ಮ ಮಡಿವಂತಿಕೆ ಬಿಟ್ಟು ಕೊಡುವುದಿಲ್ಲ, ನನ್ನದೇ ದೊಡ್ಡದು ಅನ್ನೋರಿಗೆ ಏನು ಮಾಡ್ಲಿಕ್ಕೆ ಆಗಲ್ಲ. ಕಿವಿ ಆಲಿಸಿ ಕೇಳಿದರೆ ಗೊತ್ತಾಗುತ್ತೆ. " ನಿಮಗಿರುವುದು ಜಾಣ ಕಿವುಡೊಂದೇ ಅಲ್ಲ "ಜಾಣ ಕುರುಡೂ ಇದೆ" ಸರಿ "ನಿಮ್ಮ ಎಮ್ಮೆ ಮುಂದಿರಲಿ ನಮ್ಮ ಕೋಣ ಹಿಂದಿರಲಿ" ಬೇರೆಲ್ಲ ಬ್ಲಾಗನಲ್ಲಿ (ಸುನಾಥ) ನಿಮ್ಮ ಅನಿಸಿಕೆಗಳನ್ನು ನೋಡಿ ಇವತ್ತು ನನ್ನ ಅರಿವಿಗೆ ಬಂದದ್ದು ' ಕೊಚ್ಚೆ ಮೇಲೆ ಕಲ್ಲು ಹಾಕಿ ಮಾರಿಮೇಲೆ ಸಿಡಿಸಿಕೋ ಬಾರದು ಎಂಬುದು. ನಮ್ಮ ಹಿರಿಯರ (ಅಪ್ಪ, ಅಮ್ಮ, ಅಜ್ಜ, ಅಜ್ಜಿ) ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ನನ್ನಿ. ಸರಿ ಸಿಗೋಣ. ಅಡ್ಡ ಬಿದ್ದ ಬುದ್ದಿ.

ಕನ್ನಡವ್ವ ನಿನಗೆ ಒಂದೀಟು ಕನ್ನಡದ ಬಗ್ಗೆ ತನ್ನತನ ಅನ್ನೋದರ ಬಗ್ಗೆ ಅರಿವು ಕೊಡಲಿ ಅಂತ ಕಯ್ ಎತ್ತಿ ಒಸಿ ಬೇಡ್ಕೊಂತಿನೀ.

Harisha - ಹರೀಶ ಹೇಳಿದರು...

ಕುಮಾರಸ್ವಾಮಿ ಅವರೇ, ಯಾಕ್ರೀ? ಉರ್ಕೊಂಡ್ರಾ? ನೀವು ಉಪಯೋಗಿಸಿರುವ ಭಾಷೆಯೇ ತೋರಿಸುತ್ತೆ ನಿಮ್ಮ ಕನ್ನಡ ಕಾಳಜಿ ಎಂಥದ್ದು ಅಂತ! ನಿಮ್ಮ ಮಕ್ಕಳಿಗೆ ಇದೆ ಥರ ಭಾಷೆ ಕಲಿಸಿಕೊಡಿ... ಮುಂದೆ ರೌಡಿನೋ, ರಾಜಕಾರಣಿನೋ ಆಗಬಹುದು.

ನಿಮಗೆ Home ಅನ್ನೋದನ್ನ ಓಂ ಅಂತ ಯಾವ ನಿಘಂಟಿನಲ್ಲಿ ಹೇಳಿದಾರೆ ಅನ್ನೋದನ್ನ ಸ್ವಲ್ಪ ಹೇಳಿ, ನಾನೂ ನೋಡಿ ಖುಷಿ ಪಡ್ತೀನಿ...
"ಇಲ್ಲ, ಓಂ ಅನ್ನೋದು ಬರಿ ಜನರಾಡೋ ಮಾತು, ಯಾವ ನಿಘಂಟಿನಲ್ಲೂ ಇಲ್ಲ" ಅನ್ನೋದು ನಿಮ್ಮ ಹೇಳಿಕೆಯಾದರೆ, ಇಲ್ಲಿ ಕೇಳಿ: ಮಹಾಪ್ರಾಣ ಹೊಂದಿದ ಸರಿಯಾದ ಪದಗಳು ನಿಘಂಟಿನಲ್ಲಿ ಇರಬೇಕು. ತಮ್ಮ ಜಾಗದ, ಭಾಷೆಯ ಸೊಗಡಿಗೆ ತಕ್ಕಂತೆ ಉಚ್ಚಾರ ಬದಲಾಗುವುದು ಸಹಜ. ಅದಕ್ಕಾಗಿ ಮಹಾಪ್ರಾಣವನ್ನು ತೆಗೆಯುವ ಅವಶ್ಯಕತೆಯಿಲ್ಲ.

ಕುಕೂಊ.. ಹೇಳಿದರು...

ನಿಮ್ಮ ತಿಳುವಳಿಕೆಗೆ.....
ನಮ್ಮ ಹಳ್ಳಿಯಲ್ಲಿ ಮಾತಾಡೋದೆ ಈಗೆ. ನಮ್ಮೂರಲ್ಲಿ ಇದುವರಿಗೂ ಯಾವನೂ ರಾಜಕಾರಣಿ ಆಗಿಲ್ಲ. ಯಾವನು ರವ್ಡಿಯೂ ಆಗಿಲ್ಲ. ಎಲ್ಲರೂ ಇದೇ ಕನ್ನಡ ಮಾತಾಡ್ಕೊಂಡು ನೆಮ್ಮದಿಯಾಗಿ ಇದ್ದಾರೆ. ಒಮ್ಮೆ ನಮ್ಮೂರಿಗೆ ಬನ್ನಿ ತೋರಿಸುತ್ತೇನೆ. ನಮ್ಮೂರೊಂದೇ ಯಾಕೆ ನಮ್ಮೂರ ಸುತ್ತ ಮುತ್ತ ಇರೋ ನೂರಾರು ಊರಲ್ಲೂ ಜನ ಮಾತಾಡೋದೇ ಈಗೆ.
ಇವತ್ತು ನಾಡು ಕಿತ್ತು ತಿನ್ನೋ ಕಿತಾಪತಿ ಹಲ್ಕಟ್ ಜನರಲ್ಲಿ ಚನ್ನಾಗಿ ಓದು ಬರಹ ಕಲಿತಿರೋ ಅಡ್ನಾಡಿ ಮುಂಡೇಗಂಡರಿರುವುದೇ ಹೆಚ್ಚು.ಬೇಕಾದ್ರೆ ಎಣಿಕೆ ಹಾಕಿ ನೋಡಿಕೊಳ್ಳಿ. ಮಕ್ಕಳಿಗೆ ನಾವು ಕಲಿಸೋದು ಏನು ಬೇಕಾಗಿಲ್ಲ. ಅವೇ ಕಲ್ಕೊಂತಾವೆ. ಅದು ಹುಟ್ಟಿನ ನೇಮ. ಮಡಿವಂತಿಕೆ ಬೇಕಾದೋರು ತಮ್ಮ ಕೂಸುಗಳಿಗೆ ಗಿಳಿಪಾಟ ಕಲಿಸ್ಕೊಂಡ್ಲಿ. ಒಂದೀಟು ಇಂಬ್ಲೀಚ್ ಸಿನಮಾ ನೋಡೋದು ಹೆಚ್ಚು ಮಾಡ್ಕೋ, ಅವರು ಹೇಗೆ ಮಾತಾಡ್ತಾರೊ ಆಗೆ ಮಾತಾಡು. ಆಗ ಮಂದಿ ನಿನ್ನ ದೊಡ್ಡ ಪೋತಪ್ಪ ಅಂತಾರೆ. ಮಡಿವಂತ ಅಂತಾರೆ.ದೊಡ್ಡ ತಿಳಿದೋನು ಅಂತಾರೆ.

ನೀವೇಳೋ ಹೊತ್ತಿಗೆಗಳು ನಿಗಂಟುಗಳು ಬರೆದಿರೋರು ನಿಮ್ಮಂತ ಮಡಿವಂತ ಪಂಡಿತ ಮಂದಿ. ಇವತ್ತು ಇಂತಹ ಮಡಿವಂತ ಮಂದಿ ಬರೆದಿರೋ ಕನ್ನಡದ ಒರೆಗಂಟು ತೆರೆದಾಗ ನಮ್ಮೂರಲ್ಲಿ ಆಡೋ ಎಸೊಂದು ಮಾತು ಸಿಗಲ್ಲ. ಇದಕ್ಕೆ ನೆವ ಅಲ್ಲಿಯ ಜನ ಕೀಳಲ್ಲ.ಅವರಾಡುವ ಮಾತು ಕೀಳಲ್ಲ. ಬರಿ ಸಕ್ಕದ ಪದ ನುಡಿಗಂಟಲ್ಲಿ ತುರಿಕಿ ಮಡಿವಂತಿಕೆಯಿಂದ ಈ ಮಾತನ್ನು ಕಯ್ಬಿಟ್ಟ ಮಂದಿ ಕೀಳು. ಅದಕ್ಕೆ ನನಗೆ ಅವುಗಳ ಮೇಲೆ ನೆಚ್ಚಿಕೆ ಹೋಗಿ ನಮ್ಮ ಸುತ್ತ ಇರೋದೆ ದಿಟ ಅಂತ ಒಪ್ಪಿಕೊಂಡೀನಿ. ನನಗೆ ಆಮ್ಮ, ಮಮ್ಮಿ, ಮಾತಾ, ಮಾತ್ರು ಎನ್ನುವ ಆಡಂಬರದ ಬಣ್ಣ ಬಣ್ಣದ ಮಡಿವಂತಿಕೆ ಬೇಡ. ಅವ್ವ, ಆಯಿ,ಅಬಚಿ, ಅಬ್ಬೆ ಎನ್ನುವ ಅಕ್ಕರೆ ಸಾಕು. ಹಾಗೆ ನುಡಿಯತ್ತ ಒಸಿ ನೆಮ್ಮದಿಯಾಗಿ ಬದ್ಕೊಳ್ಳುತ್ತೀನಿ.

ಉರ್ರುಕೊಂಡೋನು ನಾನಲ್ಲ. ಇದ್ದದ್ದನ್ನು ಒಪ್ಪಿಕೊಳ್ಳಲಾರದ ಮಡಿವಂತಿಕೆಯಿಂದ ಈಗ ಮಯ್ಪರಿಚಿಕೊಳ್ಳೊದು ನೀನು.

Harisha - ಹರೀಶ ಹೇಳಿದರು...

ಓಹ್.. ಗೊತ್ತಾಯ್ತು ಬಿಡಿ.. ಓದು ಬರಹ ಬರುವವರು, ಸರಿಯಾಗಿ ಉಚ್ಚರಿಸುವವರು ನಿಮ್ಮ ಅನಿಸಿಕೆಯಂತೆ ಹಲ್ಕಟ್ ಅಡ್ನಾಡಿಗಳು.. ಕನ್ನಡಿಗರು ಅನಕ್ಷರಸ್ಥರಾಗಿಯೇ ಇದ್ದರೆ ಚೆಂದ?

ಕನ್ನಡ ಪದಗಳನ್ನು ಬಳಸಬೇಡಿ ಎಂದು ಯಾರೂ ಯಾರನ್ನೂ ಒತ್ತಾಯಿಸಿಲ್ಲ. ನಿಮಗೆ ನಾನು ಹೇಳುತ್ತಿರುವುದೇ ತಿಳಿದಂತಿಲ್ಲ. ಕನ್ನಡ ಪದ ಬಳಸಲು ನನ್ನ ವಿರೋಧವೂ ಇಲ್ಲ. ನಾನು ಹೇಳ್ತಿರೋದು ಎರಡೇ:

೧) ಕನ್ನಡ ವರ್ಣಮಾಲೆಯಿಂದ ಮಹಾಪ್ರಾಣ ಬಿಡಬಾರದು. ಅದರಿಂದ ಬೇರೆ ಭಾಷೆಯ ಪದಗಳನ್ನು ಬಳಸುವುದು ಅಸಾಧ್ಯವಾಗುತ್ತದೆ. ಬೇಕಿದ್ದರೆ ಇನ್ನೂ ಹೆಚ್ಚು ಅಕ್ಷರಗಳನ್ನು ಸೇರಿಸೋಣ.

೨) ಕನ್ನಡದ್ದೇ ಇರಲಿ, ಸಂಸ್ಕೃತದ್ದೇ ಇರಲಿ, ಒಂದು standard ಪದ ಇರಬೇಕು. ಉದಾ: "ಆಗುವುದು" ಎಂಬುದು standard ಪದ. ಜನ ಆಗುವುದು, ಹಾಗುವುದು, ಆಗೋದು, ಹಾಗೋದು ಎಂದು ನೂರಾರು ರೀತಿ ಹೇಳಲಿ, ಅಭ್ಯಂತರವಿಲ್ಲ.

ಕೊನೆಗೊಂದು ಕಿವಿಮಾತು: ಚರ್ಚೆಯಲ್ಲಿ ಬಳಕೆಯಾಗುವ ಭಾಷೆ ಸಭ್ಯತೆಯ ಮೇರೆ ಮೀರದಿರಲಿ.

ಕುಕೂಊ.. ಹೇಳಿದರು...

ಗುಡಿಗಳಲ್ಲಿ ಮದುವೆ, ಪ್ರಸ್ತಗಳಲ್ಲಿ ಯಾರಿಗೂ ತಿಳಿಯದ ಸಕ್ಕದಲ್ಲಿ ಮಂತ್ರ ಉಲಿಯುತ್ತ ಸಮಾಜವನ್ನು ಎಳೆಕಟ್ಟಿ ಆಡಿಸುತ್ತ ಒಂದು ಹಿಂಡು ಸಾವಿರಾರು ಏಡು ಮೆರೆದಿದ್ದರು. ಆ ಹೊತ್ತಲ್ಲಿ ಯಾರೋ ತಿಳಿದವರು ಕೊನೆಗೆ ಸಕ್ಕ ಸೇರಿದ ಕನ್ನಡವನ್ನಾದರು ಬಳಸಲು ಮುಂದಾದರು.( ಇವತ್ತಿಗೂ ಮಂತ್ರ ಸಕ್ಕದಲ್ಲೇ ಉಲಿಯ ಬೇಕೆನ್ನುವವರಿಗೇನು ಕಡಿಮೆಇಲ್ಲ) ಇಂದು ಆ ಸಕ್ಕ ಬೆರೆಸಿದ ಕನ್ನಡ ತೊಡರಾಗಿದೆ ಅದನ್ನು ತಿಳಿಗೊಳಿಸೋಣ ಎಂದು ಮುಂದೆ ಬಂದಿರುವವರನ್ನು ಸಹಿಸದವರಿಗೆ ಇನ್ನು ಏನೂ ಹೇಳಲಾಗುವುದಿಲ್ಲ. ಅಂತ ಜನಗಳಿಗೆ ಬೇಕಿರುವುದೇ ಆ ಕೀಳುಬದುಕು.

@@
ಓಹ್.. ಗೊತ್ತಾಯ್ತು ಬಿಡಿ.. ಓದು ಬರಹ ಬರುವವರು, ಸರಿಯಾಗಿ ಉಚ್ಚರಿಸುವವರು ನಿಮ್ಮ ಅನಿಸಿಕೆಯಂತೆ ಹಲ್ಕಟ್ ಅಡ್ನಾಡಿಗಳು.. ಕನ್ನಡಿಗರು ಅನಕ್ಷರಸ್ಥರಾಗಿಯೇ ಇದ್ದರೆ ಚೆಂದ?

ನಿಮಗೆ ಇದು ಗೊತ್ತಾಗಿದ್ದು ಕೇಳಿ ನನಗೆ ತುಂಬಾ ನಲಿವಾಯಿತು. ದೇವರು ಯಾವಾಗಲು ಈಗೇ ತಿಳುವಳಿಕೆ ನಿಮಗೆ ಕೊಡಲಿ ( "ಇವತ್ತು ನಾಡು ಕಿತ್ತು ತಿನ್ನೋ ಕಿತಾಪತಿ ಹಲ್ಕಟ್ ಜನರಲ್ಲಿ ಚನ್ನಾಗಿ ಓದು ಬರಹ ಕಲಿತಿರೋ ಅಡ್ನಾಡಿ ಮುಂಡೇಗಂಡರಿರುವುದೇ ಹೆಚ್ಚು.ಬೇಕಾದ್ರೆ ಎಣಿಕೆ ಹಾಕಿ ನೋಡಿಕೊಳ್ಳಿ" ಚಂದಾಗಿ ಬರೆದಿರುವುದನ್ನು ಓದಿ ತಿಳುಕೊಳ್ಳಿ)

@@
"೧) ಕನ್ನಡ ವರ್ಣಮಾಲೆಯಿಂದ ಮಹಾಪ್ರಾಣ ಬಿಡಬಾರದು. ಅದರಿಂದ ಬೇರೆ ಭಾಷೆಯ ಪದಗಳನ್ನು ಬಳಸುವುದು ಅಸಾಧ್ಯವಾಗುತ್ತದೆ. ಬೇಕಿದ್ದರೆ ಇನ್ನೂ ಹೆಚ್ಚು ಅಕ್ಷರಗಳನ್ನು ಸೇರಿಸೋಣ"
೨) ಕನ್ನಡದ್ದೇ ಇರಲಿ, ಸಂಸ್ಕೃತದ್ದೇ ಇರಲಿ, ಒಂದು standard ಪದ ಇರಬೇಕು. ಉದಾ: "ಆಗುವುದು" ಎಂಬುದು standard ಪದ. ಜನ ಆಗುವುದು, ಹಾಗುವುದು, ಆಗೋದು, ಹಾಗೋದು ಎಂದು ನೂರಾರು ರೀತಿ ಹೇಳಲಿ, ಅಭ್ಯಂತರವಿಲ್ಲ.

"ಆಡಿದ್ದೇ ಆಡೋ ಕಿಸಬತ್ತ ದಾಸಯ್ಯ ಅನ್ನೋ ಆಡು ಮಾತಂಗೆ" ನಿಮ್ಮ ಮೇಲಿನ ಮಾತುಗಳಿಗೆ ಮತ್ತೇ ಹೇಳಿದ್ದನ್ನೇ ಹೇಳಲಾರೆ.ನಿಮ್ಮ ತಿಳುವಳಿಕೆ ದೊಡ್ಡದು.. ಸ್ವಾಮಿ ನಿಮ್ಮ ಅಡಿನೇ ದೊಡ್ಡದು ....ಅಡ್ಡ ಬಿದ್ದೆ.........
@@
ಕೊನೆಗೊಂದು ಕಿವಿಮಾತು: ಚರ್ಚೆಯಲ್ಲಿ ಬಳಕೆಯಾಗುವ ಭಾಷೆ ಸಭ್ಯತೆಯ ಮೇರೆ ಮೀರದಿರಲಿ.
ಸಭ್ಯತೆ....ಇದನ್ನು ತೋರಿಸುವ ಗೆರೆಯಾವುದು? ಆ ಮೇರೆ ಮೀರಿದ ನುಡಿಯಾವುದು? ಕೊಂಚ ತೋರಿಸಿ...............

(ಹೋ..ಹಲ್ಕಟ್ಟಾ ಅಯ್ಯೋ ನಾನು ಹಲ್ಕಟ್ ಅನ್ನೋದನ್ನು ಮಡಿವಂತಿಕೆ ಮಾಡಿ "ನೀಚ" "ಅಧಮ" "ಡಿಂಗರ"" ಜಾಲ್ಮ" "ಖಲ" ಅಂತ ಬರೆಯಲಿಲ್ಲ....................
ಇನ್ನು ಪೋತಪ್ಪ.....ಈಗಿರುವ ಒರೆಗಂಟುಗಳಲ್ಲಿ ಈ ಒರೆ ಸಿಗಲ್ಲ ಬಿಡಿ. ನನ್ನೂರ ಜನ ಆಡೋದು. ಇನ್ನು ಒರೆಗಂಟಲ್ಲಿ ಸೇರಿಸಿಲ್ಲ. ಸೇರಿಸಬೇಕು..............)

ಈಶ್ವರ ಹೇಳಿದರು...

ಹರೀಶ, ಸೂಪರ್.. ನಿನ್ನ ಪೋಸ್ಟಿಗಿಂತ ನಿನ್ನ ಪ್ರತ್ಯುತ್ತರದ ಮಾತುಗಳು ಅತ್ಯಂತ ಆಹ್ಲಾದ ಕೊಟ್ಟಿದ್ದು.

ಒಳ್ಳೆ ಲೇಖನ.

ಸುಬ್ರಹ್ಮಣ್ಯ ಭಾಗ್ವತ್ ಹೇಳಿದರು...

ಹಹ, ಅರಿ ಸೂಪರ ನಿನ್ನ ಹುದ್ದಾರ