ಬುಧವಾರ, ಆಗಸ್ಟ್ 8, 2007

ಸವಿ ಸವಿ ನೆನಪು!!

ನೀವು ಏನೇ ಹೇಳಿ ಈ ಸಂಗೀತದಲ್ಲಿ ಒಂದು ರೀತಿ ಶಕ್ತಿ ಇದೆ ಕಣ್ರಿ! ನಾನಂತೂ ಹಾಡುಗಳನ್ನು ಸದಾ ಕೇಳುತ್ತಲೇ ಇರುತ್ತೇನೆ. ನನಗೆ ತುಂಬಾ ಇಷ್ಟ ಆಗುವ ಹಿನ್ನಲೆ ಗಾಯಕರೆಂದರೆ ಎಸ್.ಪಿ.ಬಿ., ಕಿಶೋರ್ ಕುಮಾರ್, ಪಿ.ಬಿ.ಎಸ್., ಸೋನು ನಿಗಮ್ ಹಾಗೂ ಶ್ರೇಯಾ ಗೋಶಾಲ್. ಸಂಗೀತವು ಮನಸ್ಸಿಗೆ ಒಂದು ರೀತಿಯಾದ ಆಹ್ಲಾದ ನೀಡುತ್ತದೆ!
ಹೀಗೇ ಹಾಡು ಕೇಳುತ್ತಿರುವ ಸಮಯದಲ್ಲಿ ಸುದೀಪ್ ನಟಿಸಿರುವಂತಹ 'ಮೈ ಆಟೊಗ್ರಾಫ್' ಚಿತ್ರದ ಹಾಡು ಮನಸ್ಸಿಗೆ ತುಂಬಾ ಹಿಡಿಸಿತು. ಈ ಹಾಡು ಕೇಳುತಿದ್ದಂತೆ ನನ್ನ ಬಾಲ್ಯ ನೆನಪಾಯಿತು. ಈ ಹಾಡು ತುಂಬಾ ಅರ್ಥ ಪೂರ್ಣವಾಗಿದೆ.
ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲ್ಲಿ ಬಚ್ಚಿಕೊಂಡಿರಿವ
ಅಚ್ಚಳಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಎದೆಯಾಳದಲ್ಲಿ ಬಚ್ಚಿಕೊಂಡಿರುವ
ಅಚ್ಚಳಿಯದ ನೂರೊಂದು ನೆನಪು
ಏನೊ ಒಂದು ತೊರೆದ ಹಾಗೆ
ಯಾವುದೊ ಒಂದು ಪಡೆದ ಹಾಗೆ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಲ್ಲೀ... ಕಣ್ಣೀರ ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು ...
ಮೊದ ಮೊದಲ್ ಹಿಡಿದ ಬಣ್ಣದ ಚಿಟ್ಟೆ
ಮೊದ ಮೊದಲ್ ಕದ್ದ ಜಾತ್ರೆಯ ವಾಚು
ಮೊದ ಮೊದಲ್ ಸೇದಿದ ಗಣೇಶ ಬೀಡಿ
ಮೊದ ಮೊದಲ್ ಕೂಡಿಟ್ಟ ಹುಂಡಿಯ ಕಾಸು
ಮೊದ ಮೊದಲ್ ಕಂಡ ಟೂರಿಂಗ್ ಸಿನಿಮಾ
ಮೊದ ಮೊದಲ್ ಗೆದ್ದ ಕಬಡ್ಡಿ ಆಟ
ಮೊದ ಮೊದಲ್ ಇದ್ದ ಹಳ್ಳಿಯ ಗರಿ ಮನೆ
ಮೊದ ಮೊದಲ್ ತಿಂದ ಕೈ ತುತ್ತೂಟ
ಮೊದ ಮೊದಲ್ ಅಡಿದ ಚುಕುಬುಕು ಪಯಣ
ಮೊದ ಮೊದಲ್ ಅಳಿಸಿದ ಗೆಳೆಯನ ಮರಣ

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಮೊದ ಮೊದಲ್ ಕಲಿತ ಅರೆ ಬರೆ ಈಜು
ಮೊದ ಮೊದಲ್ ಕೊಂಡ ಹೀರೋ ಸೈಕಲ್
ಮೊದ ಮೊದಲ್ ಕಲಿಸಿದ ಕಮಲಾ ಟೀಚರ್
ಮೊದ ಮೊದಲ್ ತಿಂದ ಅಪ್ಪನ ಏಟು
ಮೊದ ಮೊದಲ್ ಅದ ಮೊಣಕೈ ಗಾಯ
ಮೊದ ಮೊದಲ್ ತೆಗೆಸಿದ ಕಲರ್ ಕಲರ್ ಫೊಟೋ
ಮೊದ ಮೊದಲಾಗಿ ಚಿಗುರಿದ ಮೀಸೆ
ಮೊದ ಮೊದಲಾಗಿ ಮೆಚ್ಚಿದ ಹೃದಯ
ಮೊದ ಮೊದಲ್ ಬರೆದ ಪ್ರೇಮದ ಪತ್ರ
ಮೊದ ಮೊದಲಾಗಿ ಪಡೆದ ಮುತ್ತು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಅನುಲೇಖ: ಬಾಲ್ಯದ ನೆನಪುಗಳೇ ಹಾಗೆ. ನಮ್ಮ ಮನದಾಳದಲ್ಲಿ ಅಚ್ಚಳಿಯದೆ ಹಾಗೆ ಉಳಿದು ಬಿಡುತ್ತವೆ. ಆ ಬಾಲ್ಯ ಎಷ್ಟೊಂದು ಸುಂದರ ಅಲ್ವಾ?

3 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಈ ಹಾಡನ್ನು ಕೇಳಿದಾಗ ಬಾಲ್ಯ ಮತ್ತೆ ತಿರುಗಿ ಬರಬಾರದೇ ಎನಿಸುತ್ತದೆ

Sunil DK ಹೇಳಿದರು...

Bala doniya payana sakat sukakara.... thnx for savi savi nenapu n all

Unknown ಹೇಳಿದರು...

ನಿಜಕ್ಕೂ ಆ ಹಾಡನ್ನು ಕೇಳಿದಾಗ ಬಾಲ್ಯದಲ್ಲಿ ನಾವು ಆಡಿ ಬೆಳೆದ ಪರಿಸರ, ಗೆಳೆಯರು ಎಲ್ಲಾ ನೆನಪಾಗುತ್ತಾರೆ. ಮತ್ತೆ ಆ ಬಾಲ್ಯಮನುಶ್ಯನಿಗೆ ಬರುವಂತಿದ್ದರೆ ......