ಹೌದು. ಉತ್ತರ ಕನ್ನಡದ ಪ್ರಮುಖ ಪಟ್ಟಣವಾಗಿದ್ದರೂ ಶಿರಸಿಯಲ್ಲಿ ಇಷ್ಟು ದಿವಸ ಸ್ಪೈಸ್ ನೆಟ್‌ವರ್ಕ್ ಇರಲಿಲ್ಲ. ಇಂದು ಅಲ್ಲಿಗೆ ಹೋಗಿದ್ದ ನನಗೆ ಆಶ್ಚರ್ಯ! ಏಕೆಂದರೆ ಸ್ಪೈಸ್ ಇರುವುದಷ್ಟೇ ಅಲ್ಲ, ನೆಟ್‌ವರ್ಕ್ ಕೂಡಾ ಚೆನ್ನಾಗಿಯೇ ಇದೆ (ನಾನೊಬ್ಬನೇ ಸ್ಪೈಸ್ ಗ್ರಾಹಕ ಅಲ್ಲಿದ್ದಿದ್ದು ಅಂತೀರಾ? ಅನ್ನಿ). ಒಟ್ಟಿನಲ್ಲಿ ಶಿರಸಿ ಈಗ hot and spicy!!
ಅಲ್ಲಿಂದ ಬರುವಾಗ ಇನ್ನೊಂದು ಸಂಗತಿ ನಡೆಯಿತು. ಶಿರಸಿಯಿಂದ ಹಾವೇರಿಗೆ ಬರುವಾಗ ಬಸ್ಸಿನಲ್ಲಿ ಒಬ್ಬ ಶಾಲೆಯ ಹುಡುಗ ಸುಮ್ಮನೇ ಕೂರದೇ ಉಣ್ಣೆಯಿಂದ ನೇಯ್ಗೆ ಮಾಡುತ್ತಿದ್ದ. ಅಕ್ಕ ಪಕ್ಕ ಕುಳಿತಿದ್ದ ಅವನ ಗೆಳೆಯರು ಹರಟೆ ಹೊಡೆಯುತ್ತಿದ್ದರೂ ಅವನು ಮಾತನಾಡುತ್ತಲೇ ನನ್ನ ಕಾರ್ಯ ಮುಂದುವರೆಸಿದ್ದ. ಅವನು ಯಾರೆಂದು ನನಗೆ ತಿಳಿದಿಲ್ಲ; ಆದರೆ ಅವನು ಮಾಡುತ್ತಿದ್ದ ಕೆಲಸ ಮಾತ್ರ ಜೀವನಕ್ಕೊಂದು ಪಾಠ, ಅನುಕರಣೀಯ.
ಕೆಲಸ ಮಾಡಲೇಬೇಕೆಂದಿದ್ದರೆ ಹೇಗೆ ಬೇಕಾದರೂ ಮಾಡಬಹುದೆಂಬುದಕ್ಕೆ ಇದೇ ಸಾಕ್ಷಿಯಲ್ಲವೇ? ಮನಸ್ಸಿದ್ದರೆ ಮಾರ್ಗ.
8 ಕಾಮೆಂಟ್‌ಗಳು:
ನಿಮ್ಮ ಬರಹಗಳು ಸೊಗಸಾಗಿವೆ, ಇದೇ ರೀತಿ ಬರೆಯುತ್ತಿರಿ
ಶಿರಸಿ-ಹಾವೇರಿ ಬಸ್ಸು.....ನಾನು ಅದರಲ್ಲಿ ದಿನಾಲು ತಿರುಗಾಟ ಮಾಡುತ್ತಿದ್ದವಳು.
ಹಮ್.... ಊರಿನ ನೆನಪು ಬರೋಹಂಗೆ ಮಾಡ್‌ಬಿಟ್ಯಲ!!!
ಒಳ್ಳೇ ಅಬ್ಸರ್ವೇಶನ್. ಥ್ಯಾಂಕ್ಸ್..
@ಶ್ವೇತ: ಧನ್ಯವಾದಗಳು. ಆಗಾಗ್ಗೆ ಬರುತ್ತಿರಿ, ಬರೆಯುತ್ತಿರಿ :)
@Seema: ದಿನಾ ಓಡಾಡಲೆ ಎಂತಾ ಇತ್ತು ಸಿರ್ಸೀಲಿ?
@ಸುಶ್ರುತ: ಥ್ಯಾಂಕ್ಯು :)
onthara olle suddi kottidira. thanxo.
sagara daatida mele aa jagatte bere agogtittu ishtu dina. inmele sirsige hodru talebisi iro haage aaythu. :(
@ವಿಕಾಸ್: ನಾನು ಪೂರ್ತಿ ಕನ್‌ಫ್ಯೂಸ್ಡ್ :(
ನಿಮಗೆ ಖುಷಿನೋ ಬೇಜಾರೋ? ತಲೆಬಿಸಿ ಇದ್ದೋ ಇಲ್ಯೋ?
ದಿನಾ ಒಡಾಡಲ್ಲೆ college ಇರ್ತಿತ್ತು!!!
@Seema: ಓಹೋ... ಅದೋ ವಿಷ್ಯ...
ಹಳೇ... flashback :)
ಕಾಮೆಂಟ್ ಪೋಸ್ಟ್ ಮಾಡಿ