ಸೋಮವಾರ, ಸೆಪ್ಟೆಂಬರ್ 24, 2007

ತಲೆನೋವಿಗೆ ಒಂದು ಡಜನ್ ಕಾರಣಗಳು...

 • ಮೈಗ್ರೇನ್ ಅಥವಾ ಇನ್ಯಾವುದೋ ತಲೆಗೆ ಸಂಬಂಧಿಸಿದ ರೋಗ ಬಂದಿರುವುದು

 • ಬಹಳ ನಿದ್ದೆಗೆಡುವುದು

 • ದೀರ್ಘ ಕಾಲ ಟಿವಿ ನೋಡುವುದು

 • ಮಳೆಯಲ್ಲಿ ನೆನೆದು ತಲೆ ಒರೆಸಿಕೊಳ್ಳದಿರುವುದು

 • ಟಾಯ್ಲೆಟ್‍ಗೆ ಸಮಯಕ್ಕೆ ಸರಿಯಾಗಿ ಹೋಗದೆ ಮಲಬದ್ಧತೆಯಾಗುವುದು

 • ಶಾಲೆಗೆ ಚಕ್ಕರ್ ಹಾಕಲು ನೆಪ ಬೇಕಾಗಿರುವುದು

 • ಮನೆಗೆಲಸ ತಪ್ಪಿಸಿಕೊಳ್ಳಲು ನೆಪ ಬೇಕಾಗಿರುವುದು

 • ಹೆಂಡತಿಯೊಡನೆ ಶಾಪಿಂಗ್ ಹೋಗದಿರಲು ನೆಪ ಬೇಕಾಗಿರುವುದು

 • ಬಿಸಿ ಕಾಫಿ ಅಥವಾ ಚಹಾ (ದಿನದ ೨೫ ನೇ ಬಾರಿ) ಕುಡಿಯಲು ನೆಪ ಬೇಕಾಗಿರುವುದು

 • ಭಾರತ ಸೋಲುತ್ತಿರುವ ಕ್ರಿಕೆಟ್ ಮ್ಯಾಚ್‍ನ ಆಡಿಯೋ ಕಾಮೆಂಟರಿ ಕೇಳುವುದು

 • ಬರಿಯ ಸ್ಪ್ಯಾಮ್‍ಗಳೇ ತುಂಬಿರುವಾಗ ಈಮೇಲ್ ಚೆಕ್ ಮಾಡುವುದು

 • ಮೆಡಿಕಲ್ ಓದುತ್ತಿರುವ ಗೆಳೆಯರೊಂದಿಗೆ ಕಾಲು ಗಂಟೆಗಿಂತ ಹೆಚ್ಚು ಮಾತನಾಡುವುದು

6 ಕಾಮೆಂಟ್‌ಗಳು:

Satish ಹೇಳಿದರು...

ಸದ್ಯ, ಬ್ಲಾಗ್ ಓದುವುದಾಗಲೀ ಬರೆಯುವುದಾಗಲೀ ಲಿಸ್ಟ್‌ನಲ್ಲಿ ಸೇರಿಕೊಳ್ಳಲಿಲ್ಲವಲ್ಲಾ ಅಷ್ಟೇ ಸಾಕು! :-)

M G Harish ಹೇಳಿದರು...

ಬಾಳ ದೋಣಿ ಇರ್ಲಿಲ್ಲಾ ಅಂದ್ರೆ ಸೇರ್ಕೊಳ್‌ತಿತ್ತೋ ಏನೋ!

Navaneeth B ಹೇಳಿದರು...

ಹಹಹ

M G Harish ಹೇಳಿದರು...

ತಮಾಷೆಯಾದ್ರೂ ಸತ್ಯನಪ್ಪ ಅದು!!

Suresh S. a.ka. Suri ಹೇಳಿದರು...

Harisha, illi baraha illa kano! One more reason for headache would be editing the kannada posts submitted by me for publishing on baala-doni! Ha Haa..

suptadeepti ಹೇಳಿದರು...

last ಎರಡು ಇಷ್ಟ ಆದ್ವು.