ಶುಕ್ರವಾರ, ಜೂನ್ 7, 2013

ಜೀವನ

ಬೆಟ್ಟದಂಚೆಂದು ಬೆದರದಿರು ಮನವೆ
ಜಲಪಾತಕ್ಕದೇ ತುದಿಯು ಮೂಲ
ಕಷ್ಟವೆಂದಿನಿತೂ ಬಾಡದಿರು ಮನವೆ
ಪ್ರತಿಯೊಂದಕ್ಕೂ ಇರುವುದೊಂದು ಕಾಲ

ದಹಿಸಿದರು ಎಂದು ಕೊರಗುವುದೆ ಬೆಣ್ಣೆ
ಘಮಿಸುವುದು ತಾನು ತುಪ್ಪವಾಗಿ
ಸೇರುವುದು ಎಲ್ಲರೂ ಒಂದು ದಿನ ಮಣ್ಣೆ
ಬದುಕು ನೀ ಇರುವಾಗ ಒಪ್ಪವಾಗಿ

ಎಷ್ಟು ಮೆರೆದರೆ ತಾನೆ ಏನು ಬಂತು
ಹುಟ್ಟಿನಲು ಸಾವಿನಲು ಒಂದೆ ವೇಷ
ಬಾಳೊಂದು ಪಾಪ ಪುಣ್ಯಗಳ ಕಂತು
ನಿನ್ನೆ ನಾಳೆಯ ನಡುವೆ ಬೇಕೆ ದ್ವೇಷ

5 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಉತ್ತಮ ಸಂದೇಶವಿರುವ ಸುಂದರ್ ಕವನ... ಬೆಟ್ಟದ ತುದಿ ಎರ ಹೊರತಿರುವವವನ ಮೊದಲ ಹೆಜ್ಜೆ .... :)

prashasti ಹೇಳಿದರು...

ಚೆಂದಿದ್ದು ಹರೀಶಣ್ಣ.. ಸುಮಾರ್ ದಿನದ ಮೇಲೆ ಬಾಳದೋಣಿ ದಡ ಬಿಟ್ಟು ಕವಿತೆಯೊಂದಿಗೆ ಮುಂದೆ ಹೊಂಟಿದ್ದು :-)
>>
ಎಷ್ಟು ಮೆರೆದರೆ ತಾನೆ ಏನು ಬಂತು
ಹುಟ್ಟಿನಲು ಸಾವಿನಲು ಒಂದೆ ವೇಷ
ಬಾಳೊಂದು ಪಾಪ ಪುಣ್ಯಗಳ ಕಂತು
ನಿನ್ನೆ ನಾಳೆಯ ನಡುವೆ ಬೇಕೆ ದ್ವೇಷ<<
ಇಷ್ಟ ಆತು :-)

ಸೋಮಶೇಖರ ಹುಲ್ಮನಿ ಹೇಳಿದರು...

ಹರೀಶ ,
ಕವನ ತುಂಬಾ ಇಷ್ಟವಾಯಿತು .
ಯಾಕೋ ಮನಸಿಗೆ ಕಸಿವಿಸಿ ಅನ್ನಿಸ್ತು.
ನೋವಿನಲ್ಲಿ ಒಡಮೂಡಿರೋ ಭಾವನೆಗಳಿಗೆ ಚೆನ್ನಾಗಿ ಕನ್ನಡಿ ಹಿಡಿದಿದ್ದಿಯ

sunaath ಹೇಳಿದರು...

ಹರೀಶರೆ,
ಕವನ ತುಂಬ ಚೆನ್ನಾಗಿದೆ. ಆದರೆ ನಿಮ್ಮ ಬಾಳಿನಲ್ಲಿ ಯಾವುದೇ ಸಮಸ್ಯೆ ಬಾರದಿರಲಿ ಎಂದು ಹಾರೈಸುತ್ತೇನೆ.

ಜಲನಯನ ಹೇಳಿದರು...

ಪ್ರೇಮಲೋಕದಲ್ಲಿ ಇರುವ
ಆ ಪ್ರೇಮ ಪಕ್ಷಿ
ನಿಮ್ಮ ನೋಡಿ ನಾಚಲಿಹುದು
ಇದಕೆ ನಾವೆ ಸಾಕ್ಷಿ

Nice wishes and we too join you in wishing the couple all the best