ಬುಧವಾರ, ಸೆಪ್ಟೆಂಬರ್ 20, 2017

ನಿನ್ನೆ - ನಾಳೆ


 
 ನಾನಿದ್ದೀನಿ ಇಲ್ಲಿ
ಎತ್ತರವೋ ಆಳವೋ
ದೂರದಲ್ಲೋ ಹತ್ತಿರದಲ್ಲೋ

ಹತ್ತಿದಾಗ ಆಳ
ಇಳಿದಾದ ಎತ್ತರ
ನಡೆದಷ್ಟೂ ಹತ್ತಿರವು ದೂರ

ಅಲ್ಲಿರುವ ಅವ
ಇಲ್ಲಿದ್ದನೋ ಅಂದು
ಅಲ್ಲಿಗಳ ಇಲ್ಲಿ ಓಟದಲ್ಲಿ

ಅಲ್ಲಿರುವುದು ಆಳವೋ
ಇಲ್ಲಿರುವುದು ಎತ್ತರವೋ
ಕಂಡಹಾಗೆ ಅವನಿಗೆ ನಾನು

ಕಾಣುವುದು ಹೀಗೇ
ನೋಡುವುದು ಹೀಗೇ
ನೋಟ ಕಾಣುವುದು ಹಾಗೆ

ನನ್ನ ಆಳದಲ್ಲಿ
ಅವನ ಎತ್ತರದಲ್ಲಿ
ಹತ್ತಿರ ದೂರವೆಂಬುದು ಎಲ್ಲಿ?

3 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ನೀನೂ ಕವಿ ಆಗೋದ್ಯೇನೋ

sunaath ಹೇಳಿದರು...

ಬಾಳದೋಣಿಯ ಅಂಬಿಗರು ಏಕೋ ಸುಸ್ತಾದಂತೆ ಕಾಣುತ್ತಿದೆ. ವರ್ಷಕ್ಕೆ ೨೭ರಷ್ಟು ಲೇಖನಗಳನ್ನು ಕೊಟ್ಟವರು ಈಗ ೨ಕ್ಕೆ ಇಳಿದಿದ್ದೀರಾ? ಇರಲಿ, qntyಗಿಂತ qlty ಮುಖ್ಯ. ಅದನ್ನು ನೀವು ಎತ್ತರದಲ್ಲಿಟ್ಟುಕೊಂಡು ಹೊರಟಿದ್ದೀರಿ. ಬಾಳದೋಣಿಯು ತಡೆಯಿಲ್ಲದೆ ಸಾಗಲಿ.

Unknown ಹೇಳಿದರು...

ಚೆನ್ನಾಗಿದೆ. ಒಂದು ಒಳ್ಳೆಯ ಕವನ.