ಏನಿದು ಕವನ!? ನನ್ನಲೇಕೋ ಮೌನ.
ಬರೆವ ಕುಳಿತರೂ, ಬರದೀ ಮನಕೆ!?
ಭಾವನೆ ಎಲ್ಲಿಹುದು!? ಮನದಿ ತಡಕಾಡಿದರೂ ಸಿಗದಾಗಿಹುದು.
ಮಳೆಯಿಲ್ಲದ ನೆಲದಲ್ಲಿ, ಜಲಕೆ ಪರಿತಪಿಸುವಂತಾಗಿಹುದು.
ಜೀವನದ ಜಂಜಾಟದಿ, ಮರೆತೆನಾ ನನ್ನನೇ!?
ಸಮಯದಾ ಕುದುರೆಯೇರಿ, ತೊರೆದೆನಾ ಭಾವನೆಯನ್ನೆ!?
ಏನಿದು ಕವನ!? ನನ್ನಲೇಕೋ ಮೌನ.
2 ಕಾಮೆಂಟ್‌ಗಳು:
ನನ್ನ ನೆಚ್ಚಿನ ಬ್ಲಾ^ಗುಗಳಲ್ಲಿ ಒಂದಾದ ಬಾಳದೋಣಿಯು ಸುಮಾರು ಒಂದು ವರ್ಷದ ಬಳಿಕ ಮತ್ತೆ ಕಣ್ಣಿಗೆ ಬೀಳುತ್ತಿದೆ. ಮನದಲ್ಲಿ ಕವನ ಏಕೆ ಮೂಡುತ್ತಿಲ್ಲ ಎನ್ನುವ ಭಾವನೆಯೂ ಕವನವಾಗಿಯೇ ಹೊಮ್ಮಿದೆಯಲ್ಲ! ಇದೂ ಒಂದು ಸಂತೋಷವೇ! ಕವನಗಳು, ಲೇಖನಗಳು ಮತ್ತೆ ಮತ್ತೆ ಹೊಮ್ಮುತ್ತಿರಲಿ, ಬಾಳದೋಣಿಯ ಪ್ರಯಾಣವು ಉಲ್ಲಾಸಮಯವಾಗಲಿ!
ಧನ್ಯವಾದಗಳು ಸುನಾಥ್ ರವರಿಗೆ.
ಕಾಮೆಂಟ್ ಪೋಸ್ಟ್ ಮಾಡಿ