ಶುಕ್ರವಾರ, ಜನವರಿ 30, 2015

ಆಕಸ್ಮಿಕ

ಬದುಕಿನ ಚಿತ್ತ
ಅದು ಆಕಸ್ಮಿಕಗಳ ಮೊತ್ತ

ಇರುವದು ಇದ್ದಾಗ 
ಇದ್ದದ್ದು ಇಲ್ಲವಾದಾಗ
ಇಲ್ಲದ್ದು ಎಲ್ಲವಾದಾಗ
ಎಲ್ಲವಾದದ್ದು ಅಲ್ಲವಾದಾಗ  
ಅದು ಬದುಕಿನ ಚಿತ್ತ

ಬಾರದು ಬಂದಾಗ
ಬಂದು ಇಲ್ಲವಾದಾಗ
ಬರುವುದು ಬಾರದಾದಾಗ
ಬರಲಸಾಧ್ಯವಾದರೂ ಬಂದಾಗ
ಅದು ಆಕಸ್ಮಿಕಗಳ ಮೊತ್ತ

ಆಕಸ್ಮಿಕಗಳ ಮೊತ್ತ
ಅದು ಬದುಕಿನ ಚಿತ್ತ


6 ಕಾಮೆಂಟ್‌ಗಳು:

sunaath ಹೇಳಿದರು...

ಬದುಕಿನ ಆಕಸ್ಮಿಕಗಳ ಬಗೆಗೆ ಬಹಳ ಸೊಗಸಾಗಿ ಬರೆದಿದ್ದೀರಿ. ಬದುಕೇ ಒಂದು ಆಕಸ್ಮಿಕ ಎನ್ನುವುದು ಸುಳ್ಳಲ್ಲ!

ಸೋಮಶೇಖರ ಹುಲ್ಮನಿ ಹೇಳಿದರು...

@sunaath ತುಂಬು ಹೃದಯದ ಧನ್ಯವಾದಗಳು

ಸೋಮಶೇಖರ ಹುಲ್ಮನಿ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
prashasti ಹೇಳಿದರು...

ಆಕಸ್ಮಿಕಗಳ ಸುತ್ತಲೇ ಒಂದು ಸುಂದರವಾದ ಕವನ :-) ಚೆನ್ನಾಗಿದೆ

ಸೋಮಶೇಖರ ಹುಲ್ಮನಿ ಹೇಳಿದರು...

@ಪ್ರಶಸ್ತಿ
ತುಂಬು ಹೃದಯದ ಧನ್ಯವಾದಗಳು

Unknown ಹೇಳಿದರು...

Nice one!!!

could you please once visit ammanahaadugalu.blogspot.com

and share your opinion/suggestions