ಗುರುವಾರ, ಜನವರಿ 30, 2014

ಇದು ಕವನ ..... ವೇ (way)!?


    ಕವನ ಬರೆಯಲೇ ಬೇಕೆಂದು
    ಹಟ ಹಿಡಿದು ಕುಳಿತವಂಗೆ
    ಸಿಗುವುದು ಮೂರು ಕವಿಗಳು
    ಛಂದೊಬದ್ಧವಾಗಿರಬೇಕೆಂದರೆ
    ಪಂಪ ರನ್ನ ಪೊನ್ನ   
    ಅಛಂದವಾದರೂ ಚೆಂದವಾಗಿರಬೇಕಾದರೆ
    ಬೇಂದ್ರೆ ಕುವೆಂಪು ಪುತಿನ

     ಆದರೆ ,
             ಅವರಂತೆಯೇ ಬರೆವೆನೆಂಬುವಂಗೆ
             ಸಿಗಬಹುದು ಅವರ ನೂರು ಪದಗಳು
             ಸಿಗಲಾರವು ಅವರ ಭಾವನುಭವ ವಿನ್ಯಾಸಗಳು
             ಅನ್ಯರೊರೆದುದನೆ ಬರೆದುದನೆ ಬರೆಯಲು
             ಆಗುವುದು ಕಾವ್ಯವಲ್ಲ ಕನ್ನಡಿಯ ಚೂರು
             ತನ್ನಾಭಿವ್ಯಕ್ತಿಯ ಮುಡಿಸಿದರೆ ಅದು ಬರಿ ಕಾವ್ಯವಲ್ಲ ಚಂದ್ರನ ಹೋಳು .



ಗೆಳತಿಯ ಜನ್ಮ ದಿನಕ್ಕೆ ಈ ನನ್ನ ಕವನವಲ್ಲದ ಕವನದ ಉಡುಗೊರೆ

2 ಕಾಮೆಂಟ್‌ಗಳು:

sunaath ಹೇಳಿದರು...

ನೀವೀಗ ಸುಂದರವಾದ ಕವನವನ್ನೇ ಬರೆದಿದ್ದೀರಲ್ಲ!

Aravind VN ಹೇಳಿದರು...

chennagide.