ಮಂಗಳವಾರ, ಫೆಬ್ರವರಿ 14, 2012

ಪ್ರೊಪೋಸ್ ಮಾಡದಿರಲು ೧೨ ಕಾರಣಗಳು!

ಇಂದು ಫೆಬ್ರುವರಿ ೧೪. ಸೋ ಕಾಲ್ಡ್ ವ್ಯಾಲೆಂಟೈನ್ಸ್ ಡೇ; ಅಥವಾ ಪ್ರೇಮಿಗಳ ದಿನಾಚರಣೆ. ಅದು ಭಾರತೀಯರಲ್ಲಿ ಎಷ್ಟು ಪ್ರಸ್ತುತ, ಏಕೆ ಪ್ರಸ್ತುತ ಎಂಬ ವಾದಗಳನ್ನೆಲ್ಲ ಬದಿಗಿಡೋಣ.

ಪ್ರೀತಿಸಲು ನೂರಾರು ಕಾರಣಗಳಿರಬಹುದು. ಆದರೆ ಹುಡುಗ ಅಥವಾ ಹುಡುಗಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಒಂದೇ ಕಾರಣವಿರಲು ಸಾಧ್ಯ. ಹೃದಯದ ಕರೆಗೆ ಓಗೊಟ್ಟು ಅವನನ್ನು ಅಥವಾ ಅವಳನ್ನು ಇಷ್ಟಪಟ್ಟಿದ್ದು.

ಆದರೆ ಎಷ್ಟೋ ಪ್ರೇಮಿಗಳು ತಮ್ಮ ಪ್ರೀತಿಯನ್ನು ತಮ್ಮ ಪ್ರಿಯತಮ/ಪ್ರಿಯತಮೆಯೊಂದಿಗೆ ಹೇಳಿಕೊಳ್ಳಲಾಗದೆ ಮರುಗುತ್ತಾರೆ. ಅದಕ್ಕೆ ಕಾರಣಗೇಳಿನರಬಹುದು? ಯೋಚಿಸಿದ್ದೀರಾ? ಪ್ರೊಪೋಸ್ ಮಾಡದೇ ಇರಲು ನನಗನ್ನಿಸಿದ ಕೆಲವು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ:

೧. ನಾನು ಅವನಿಗೆ/ಅವಳಿಗೆ ಇಷ್ಟ ಆಗುತ್ತೇನೋ ಇಲ್ಲವೋ ಎಂಬ ಗೊಂದಲ.
೨. ನಾನೇ ಯಾಕೆ ಪ್ರೊಪೋಸ್ ಮಾಡ್ಲಿ, ಆಕೆಗೆ/ಅವನಿಗೆ ಇಷ್ಟ ಇದ್ರೆ ಅವಳೇ/ಅವನೇ ಮಾಡಲಿ ಎಂಬ ಭಾವನೆ.
೩. ಹುಡುಗ/ಹುಡುಗಿ ಒಪ್ಪಿಕೊಳ್ಳದೇ ಇದ್ರೆ ಅವಮಾನ ಎನ್ನುವ ಭಾವನೆ.
೪. ಒಂದೊಮ್ಮೆ ಒಪ್ಪದಿದ್ದರೆ ಇರುವ ಸ್ನೇಹವೂ ಹಾಳಾಗಬಹುದು ಎಂಬ ಭಯ.
೫. ತಾನು ನಿಜವಾಗಿಯೂ ಪ್ರೀತಿಯಲ್ಲಿ ಇದೀನೋ ಇಲ್ವೋ ಅನ್ನೋದೇ ಗೊತ್ತಾಗದೇ ಇರೋ ಭಾವನೆ.
೬. ನಿಜವಾದ ಪ್ರೀತಿ ಇದ್ದರೂ ಮನೆಯಲ್ಲಿ ಲವ್ ಎಂದರೆ ಏನೆಂದುಕೊಳ್ಳುತಾರೋ ಎಂಬ ಭಾವನೆ.
೭. ಒಂದು ವೇಳೆ ಪ್ರೇಮವಿವಾಹಕ್ಕೆ ಒಪ್ಪುವ ಕುಟುಂಬವೇ ಆದರೂ, ಮನೆಯವಲ್ಲಿನ ಇತರರಿಗೆ ಹುಡುಗ/ಹುಡುಗಿ ಹೊಂದಾಣಿಕೆ ಆಗದಿದ್ದರೆ ಏನು ಗತಿ ಎಂಬ ಗೊಂದಲ.
೮. ಹುಡುಗ/ಹುಡುಗಿಯೂ ಅದಕ್ಕೆ ಒಪ್ಪಿ ಮದುವೆಯೂ ಆದರೂ, ಜಾತಕ ಕೂಡಿ ಬರದೆ ಮುಂದೆ ವೈವಾಹಿಕ ಜೀವನದಲ್ಲೇನಾದರೂ ವಿರಸವುಂಟಾಗಿ, ಮುಂದೆ ಹಿರಿಯರು ಆಡಿಕೊಳ್ಳುವಂತಾದರೆ ಎಂಬ ಭಯ.
೯. ಈಗಾಗಲೇ ಆ ಹುಡುಗ/ಹುಡುಗಿ ಬೇರೆ ಯಾರನ್ನೋ ಇಷ್ಟಪಟ್ಟಿದ್ದರೆ ಏನು ಗತಿ ಎಂಬ ಸಂಶಯ.
೧೦. ಹುಡುಗಿಯ ಸೋದರ/ಸಂಬಂಧಿಗಳಾರಾದರೂ ಗೂಂಡಾಗಳ ಥರ ಇದ್ದರೆ, ಅಥವಾ ಕುಟುಂಬಗಳ ಮಧ್ಯೆ ಪಾರಂಪರಿಕ ದ್ವೇಷ ಇದ್ದರೆ, ಪರಸ್ಪರ ಇಷ್ಟ ಪಟ್ಟಿದ್ದರೂ ಅದನ್ನು ಹೇಳಿಕೊಳ್ಳಲು ಹುಡುಗ-ಹುಡುಗಿ ಇಬ್ಬರಿಗೂ ಆಕೆಯ ಸೋದರ/ಸಂಬಂಧಿಯ ಅಥವಾ ಅವರ ಕುಟುಂಬದ ಬಗ್ಗೆ ಇರುವ ಭಯ.
೧೧. ಹುಡುಗ/ಹುಡುಗಿಯ ಆಸ್ತಿ-ಅಂತಸ್ತಿನಲ್ಲಿ ಅಜಗಜಾಂತರ ವ್ಯತ್ಯಾಸ ಇದ್ದು, ಅವನಿಗೆ/ಅವಳಿಗೆ ತಾನು ಸರಿಸಾಟಿ ಹೌದೋ ಅಲ್ಲವೋ ಎಂಬ ಅನಿಸಿಕೆಯಿಂದ ಉಂಟಾಗುವ ಕೈಗೆ ಸಿಗದ ದ್ರಾಕ್ಷಿ ಹುಳಿ ಎಂಬ ಭಾವನೆ.
೧೨. ಹುಡುಗ/ಹುಡುಗಿಯ ವಿದ್ಯಾರ್ಹತೆಯಲ್ಲಿ ವ್ಯತ್ಯಾಸ (ಹುಡುಗಿ ಅತಿ ಕಡಿಮೆ ಓದಿರುವುದು ಅಥವಾ ಹುಡುಗನಿಗಿಂತ ಹೆಚ್ಚು ಓದಿರುವುದು) ಇದ್ದು, ತನಗೂ ಆತನಿಗೂ/ಆಕೆಗೂ ಹೊಂದಾಣಿಕೆಯಾಗುತ್ತದೆಯೋ ಇಲ್ಲವೋ ಎಂಬ ಸಂಶಯ.

ಇವುಗಳ ಹೊರತಾಗಿ ಬೇರೆ ಕಾರಣಗಳೂ ನಿಮಗೆ ಹೊಳೆಯಬಹುದು ಅಥವಾ ಅನುಭವಕ್ಕೆ ಬಂದಿರಬಹುದು. ಅದನ್ನು ನೀವು ಮುಕ್ತವಾಗಿ ಹಂಚಿಕೊಳ್ಳಬಹುದು.

5 ಕಾಮೆಂಟ್‌ಗಳು:

ಶ್ರೀಪಾದು ಹೇಳಿದರು...

ಇದಕ್ಕಿಂತ ಚಂದ ಕೂಸ್ ಸಿಕ್ಕಿರೆ ಅಂತ ದೂರದಾಸೆ

Harisha - ಹರೀಶ ಹೇಳಿದರು...

ಹಹ್ಹಾ.. ಅತಿ ಆಸೆ ಗತಿಗೇಡು.. ಯಾವ್ದಕ್ಕೂ ಹುಷಾರಾಗಿರೋ ಗುಂಡ :)

ಜಲನಯನ ಹೇಳಿದರು...

ಬಹಳ ಚನ್ನಾಗಿದೆ ..ಲಿಸ್ಟು ಇನ್ನೂ ಐತಾ?? ಅತಿ ಆಸೆ ಅನ್ಬೇಡಿ ಮತ್ತೆ...

sunaath ಹೇಳಿದರು...

ಇವೆಲ್ಲ ಕಾರಣಗಳು ಬೇಡ, ಧೈರ್ಯದಿಂದ propose ಮಾಡಿಬಿಡಿ.

Harisha - ಹರೀಶ ಹೇಳಿದರು...

ಆಜಾದ್ ಅವರೇ, ನನಗಂತೂ ಹೊಳೆದಿಲ್ಲ.. ಗೊತ್ತಿದ್ರೆ ನೀವೇ ಹೇಳಿ :D

ಸುನಾಥ ಕಾಕಾ, ಹುಡುಗಿ ಸಿಗಬೇಕಲ್ವೇ? :P