ಬುಧವಾರ, ಸೆಪ್ಟೆಂಬರ್ 7, 2011

ಮನದ ಹಕ್ಕಿ

ಪಂಜರದಿ ಹೊರಗೆ ಬಾರೊಮ್ಮೆ,
ರೆಕ್ಕೆಯನು ಬಿಚ್ಚಿ ಮನದಿ ಹಾರೊಮ್ಮೆ

ತೇಲಾಡುತ ನೀ ತರುವಾಯ,
ತೆರೆಯ ಮರೆಯಿಂದ ಸರಿದು ಹಾರೊಮ್ಮೆ

ಮರುಕವ ಮರೆಮಾಚುತ ಬರಿದಾದ ಬಯಲಿನಾಚೆಗೆ,
ಹಸಿರೆಡೆಗೆ ಹಸಿದು ಹಾರೊಮ್ಮೆ

ಭಾವನೆಗಳ ಗರಿಯನು ಕೆದರಿ,
ಭರಸದಿ ಮುಗಿಲೆಡೆಗೆ ನಲಿಯುತ ಹಾರೊಮ್ಮೆ

ಕನಸುಗಳ ಮೋಡವ ಸನಿಹದಿ ನೋಡುತ,
ಸ್ವಪ್ನಸಾಗರದೇರಿಯ ಮೇಲೆ ಹಾರೊಮ್ಮೆ

ಒಮ್ಮೆಯಾದರೂ ರೆಕ್ಕೆಯನು ಬಿಚ್ಚಿ ಮನದಿ ನೀ ಹಾರೊಮ್ಮೆ

6 ಕಾಮೆಂಟ್‌ಗಳು:

Subrahmanya ಹೇಳಿದರು...

ಕವನವೂ ಸಹ ಹಕ್ಕಿಯು ರೆಕ್ಕೆ ಬಿಚ್ಚಿ ಸಂತಸದಿಂದ ಹಾರುವಂತೆಯೇ ಇದೆ !.

Harisha - ಹರೀಶ ಹೇಳಿದರು...

ಸಖತ್ತಾಗಿದೆ! ZNMD ನೋಡಿದ್ಯಾ?!

sunaath ಹೇಳಿದರು...

ಉತ್ತಮ ಆಶಯವನ್ನು ಅಭಿವ್ಯಕ್ತಿಸುವ ಕವನ.

vishutk ಹೇಳಿದರು...

ಸುಬ್ರಹ್ಮಣ್ಯ, ಹರೀಶ್ ಹಾಗೂ ಸುನಾಥರವರಿಗೆ ಧನ್ಯವಾದಗಳು. ಹರೀಶ್ ZNMD ಇನ್ನ ರಿನೋಡಿಲ್ವೋ..

ಸೋಮಶೇಖರ ಹುಲ್ಮನಿ ಹೇಳಿದರು...

ವಿಶು ಚೆನ್ನಾಗಿದೆ ಕಣೋ
ಕವನದ ಹಕ್ಕಿಯಂತೆ ನೀನು ಹಾರಾಡಲಿ ಎಂಬುದು ನನ್ನ ಆಶಯ

vishutk ಹೇಳಿದರು...

ಸೋಮುಗೆ ಧನ್ಯವಾದಗಳು.