ಭಾನುವಾರ, ಜನವರಿ 30, 2011

ಹಾರೈಕೆ

ಗೆಳತಿ,
ಸುಳಿವ ತಂಗಾಳಿಯಲ್ಲಿ ಬೆರೆಸಿರುವೆ,
ಸುರಿವ ಮಳೆಯಲ್ಲಿ ಕರಗಿಸಿರುವೆ,
ಸೂಸುವ ರಶ್ಮಿಯಲ್ಲಿ ಸೇರಿಸಿರುವೆ,
ಕಂಪಿಸುವ ನಾದದಲ್ಲಿ ಅಡಗಿಸಿರುವೆ,
ಸುಡುವ ಅಗ್ನಿಯಲ್ಲಿ ಬೆಳಗಿಸಿರುವೆ,
ಬೆಳೆಯುವ ಭೂಮಿಯಲ್ಲಿ ಬಿತ್ತಿರುವೆ,

ಒಟ್ಟಿನಲಿ ನೀನಿದ್ದೆಡೆ ತಲುಪಿಸಿರುವೆ
ನಿನ್ನ ಜನ್ಮ ದಿನಕೆ ಹಾರೈಸಿರುವೆ ....

6 ಕಾಮೆಂಟ್‌ಗಳು:

sunaath ಹೇಳಿದರು...

ಜೊತೆಗೇ ಒಂದು ಈ-ಮೇಲ್ ಕಳಿಸಿದ್ದರೆ ಚೆನ್ನಾಗಿರುತ್ತಿತ್ತು!

ಜಲನಯನ ಹೇಳಿದರು...

ಸೋಮಶೇಖರ್ ಚನ್ನಾಗಿದೆ ಕವನ..ಹಾಂ ಸುನಾಥಣ್ಣ ಹೇಳಿದ್ದು ನಿಜ ಅಲ್ವಾ? ಒಂದು ಈ ಮೈಲ್ ..ಅಂದ್ರೆ ಇದನ್ನ ಪ್ರಕಟಿಸೋ ಮೈಲ್ ಹಾಕಬಹುದಿತ್ತು..

ಸೋಮಶೇಖರ ಹುಲ್ಮನಿ ಹೇಳಿದರು...

ಸುನಾಥ್ ರವರೆ ಮತ್ತು ಜಲನಯನರವರೆ ,
ತಮ್ಮ ಸಲಹೆ ಚೆನ್ನಾಗಿದೆ ... ಆದ್ರೆ ಅದಕ್ಕೆ ಮೇಲ್ ಅಡ್ರೆಸ್ ಗೊತ್ತಿರಬೇಕಲ್ವ?
ಗಾಳಿ ಮಳೆ ,ಅಗ್ನಿ ,.... ಇವ್ಯಾವು ಯಾವುದೇ ಅಡ್ರೆಸ್ ಕೆಳದೇನೆ ಇದ್ದಲ್ಲಿಗೆ ತಲುಪಿಸ್ತೀನಿ ಅಂದವು ,ಅದಕ್ಕೆ....

ತೇಜಸ್ ಜೈನ್ Tejas jain ಹೇಳಿದರು...

ಮನ ಮುಟ್ಟುವ ಹಾರೈಕೆ... ನಿನ್ನ ಹಾರೈಕೆ ತಲುಪಿದೆಯೆಂದು ಭಾವಿಸುತ್ತೇನೆ...

ಕನಸು ಹೇಳಿದರು...

ಸೋಮಶೇಖರ ಹುಲ್ಮನಿ ಅವರೆ
ನಿಮ್ಮ ಒಲವು ಚೆನ್ನಾಗಿದೆ.

ಸೋಮಶೇಖರ ಹುಲ್ಮನಿ ಹೇಳಿದರು...

ಕನಸು ರವರೆ ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು