ತಿಂಗಳಿನ ಬೆಳಕಿನಲಿ ಮಧುಮಾಸ ರಾತ್ರಿಯಲಿ
ತಂಗಾಳಿ ಬೀಸಿಹುದು ನನ್ನ ನಲ್ಲೆ
ಅಂಗಾಂಗದೊಳಗೆಲ್ಲ ಅವಿತಿರುವ ಬಯಕೆಗಳು
ಕಂಗಳಲಿ ತೋರುತಿವೆ ನನ್ನ ನಲ್ಲೆ
ಹಾವಭಾವದಿ ಮೆರೆದು ಕುಡಿನೋಟದಲ್ಲೆನ್ನ
ತಿವಿಯದಿರು ನೀನೀಗ ಕಣ್ಣಿನಲ್ಲೆ
ತಾವರೆಯ ಮೊಗವನ್ನು ಈಗ ತಾನೇ ನೋಡಿ
ಸಾವರಿಸಿಕೊಂಡಿಹೆನು ನನ್ನ ನಲ್ಲೆ
ಸಲ್ಲಾಪ ಸರಸಗಳ ಮಳೆ ಹನಿಯು ಉದುರಿಹುದು
ಮೆಲ್ಲ ಮೆಲ್ಲನೆ ನಿನ್ನ ಮಾತಿನಲ್ಲೆ
ಮಲ್ಲಿಗೆಯ ಕಂಪಿನೊಳು ಮೈ ಮರೆತು ನಿನ್ನನ್ನು
ಪಲ್ಲಂಗ ಕಾದಿಹುದು ನನ್ನ ನಲ್ಲೆ
ಸ್ಫೂರ್ತಿ: ಈಶ್ವರ ಕಿರಣ್ ಭಟ್ ಅವರ "ಏಳೆನ್ನ ನಲ್ಲೆ" ಎಂಬ ಕವನ
ತಂಗಾಳಿ ಬೀಸಿಹುದು ನನ್ನ ನಲ್ಲೆ
ಅಂಗಾಂಗದೊಳಗೆಲ್ಲ ಅವಿತಿರುವ ಬಯಕೆಗಳು
ಕಂಗಳಲಿ ತೋರುತಿವೆ ನನ್ನ ನಲ್ಲೆ
ಹಾವಭಾವದಿ ಮೆರೆದು ಕುಡಿನೋಟದಲ್ಲೆನ್ನ
ತಿವಿಯದಿರು ನೀನೀಗ ಕಣ್ಣಿನಲ್ಲೆ
ತಾವರೆಯ ಮೊಗವನ್ನು ಈಗ ತಾನೇ ನೋಡಿ
ಸಾವರಿಸಿಕೊಂಡಿಹೆನು ನನ್ನ ನಲ್ಲೆ
ಸಲ್ಲಾಪ ಸರಸಗಳ ಮಳೆ ಹನಿಯು ಉದುರಿಹುದು
ಮೆಲ್ಲ ಮೆಲ್ಲನೆ ನಿನ್ನ ಮಾತಿನಲ್ಲೆ
ಮಲ್ಲಿಗೆಯ ಕಂಪಿನೊಳು ಮೈ ಮರೆತು ನಿನ್ನನ್ನು
ಪಲ್ಲಂಗ ಕಾದಿಹುದು ನನ್ನ ನಲ್ಲೆ
ಸ್ಫೂರ್ತಿ: ಈಶ್ವರ ಕಿರಣ್ ಭಟ್ ಅವರ "ಏಳೆನ್ನ ನಲ್ಲೆ" ಎಂಬ ಕವನ

ಬಳಕೆಯಿಂದ ಹಿಂದೆ ಸರಿದಿದೆ (ಈ ಅಕ್ಷರಕ್ಕೆ ಯುನಿಕೋಡ್ ಇಲ್ಲ). ಇಂದು ಹಲವು ಕನ್ನಡಿಗರಿಗೆ ಱ ಮತ್ತು ೞ ಬಗ್ಗೆ ತಿಳಿದೇ ಇಲ್ಲ. ಹಲವರಿಗೆ ಇದರ ಉಚ್ಚಾರಣೆ ತಿಳಿದಿಲ್ಲ, ಱ ಮತ್ತು ರ, ೞ ಮತ್ತು ಳ ಒಂದೇ ಎಂದು ತಿಳಿದಿದ್ದಾರೆ. ಮತ್ತೂ ಕೆಲವರಿಗೆ ಇವು ಹಳೆಗನ್ನಡ ಅಕ್ಷರಗಳೆಂದಷ್ಟೇ ಗೊತ್ತು. ಮಕ್ಕಳಿಗೆ ಅಕ್ಷರ ಕಲಿಸುವ ಸಮಯದಲ್ಲೇ ಈ ಅಕ್ಷರಗಳನ್ನೂ ಪರಿಚಯಿಸುವುದು ಒಳ್ಳೆಯದಲ್ಲವೇ? ಈ ರೀತಿ ಮಾಡುವುದರಿಂದ ಕೈಬಿಟ್ಟು ಹೋಗಿರುವ ಪದಸಂಪತ್ತನ್ನು ಮತ್ತೆ ಗಳಿಸಬಹುದು.